ಮಂಗಳೂರು: ಮಂಗಳೂರಿನ ಮೈತ್ರಿ ಕ್ಲಿನಿಕ್ಸ್‌ನಲ್ಲಿ ನಾಳೆ (ಏ.16) ವಿಶ್ವ ಧ್ವನಿ ದಿನದ ಅಂಗವಾಗಿ, ಧ್ವನಿಪೆಟ್ಟಿಗೆಯ ಆರೋಗ್ಯ, ಕಾಳಜಿ ವಹಿಸುವ ವಿಧಾನಗಳ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬುಧವಾರ ಸಂಜೆ 6 ಗಂಟೆಗೆ ನಗರದ ಕಂಕನಾಡಿ- ಬೆಂದೂರ್ವೆಲ್ ನಲ್ಲಿ ಇರುವ ಮೈತ್ರಿ ಕ್ಲಿನಿಕ್ಸ್ ಆವರಣದಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಬನ್ನಿ- 'ನಿಮ್ಮ ಧ್ವನಿಯನ್ನು ಸಬಲಗೊಳಿಸಿ!' ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಸಂಜೆ 6:00 ಗಂಟೆಗೆ 'ನಿಮ್ಮ ಧ್ವನಿಯ ಬಗ್ಗೆ ಹೇಗೆ ಕಾಳಜಿ ವಹಿಸಬೇಕು? ಎಂಬ ವಿಷಯದಲ್ಲಿ ಮೈತ್ರಿ ವಾಯ್ಸ್ ಕ್ಲಿನಿಕ್‌ನ ಸಲಹೆಗಾರ ಹಾಗೂ ವಾಯ್ಸ್ ರೋಗಶಾಸ್ತ್ರಜ್ಞ ಪ್ರೊ. ಅಖಿಲೇಶ್ ಪಿಎಂ ಅವರು ಉಪನ್ಯಾಸ ನೀಡಲಿದ್ದಾರೆ.
ಬಳಿಕ ಸಂಜೆ 6:10ಕ್ಕೆ ಮೈತ್ರಿ ವಾಯ್ಸ್ ಕ್ಲಿನಿಕ್‌ನ ಇಎನ್‌ಟಿ ತಜ್ಞರು ಹಾಗೂ ಫೋನೋಸರ್ಜನ್ ಸಲಹೆಗಾರರಾದ ಡಾ. ಗೌತಮ್ ಕುಳಮರ್ವ ಅವರು 'ವೋಕಲ್ ಫಾರ್ ಲೋಕಲ್' ಪರಿಕಲ್ಪನೆಯಡಿ 'ವಿಶೇಷ ಧ್ವನಿ ಚಿಕಿತ್ಸಾಲಯ- ಒಂದು ಪರಿಕಲ್ಪನೆ ಚಿಕಿತ್ಸಾಲಯ'- ಕುರಿತು ಉಪನ್ಯಾಸ ನೀಡಲಿದ್ದಾರೆ.
ನಂತರ ಸಂಜೆ 6:30 ಕ್ಕೆ ಗಣ್ಯರೊಂದಿಗೆ ಚಹಾಕೂಟದ ಆತಿಥ್ಯ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ತಜ್ಞ ವೈದ್ಯರ ವಿವರ ಇಂತಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಈ ತಜ್ಞ ವೈದ್ಯರುಗಳನ್ನು ಸಂಪರ್ಕಿಸಬಹುದು.
ಡಾ. ಗೌತಮ್ ಕುಳಮರ್ವ,
ಎಂಎಸ್, ಡಿಎನ್‌ಬಿ, ಎಂಆರ್‌ಸಿಎಸ್ (ಎಡಿನ್) ಡಿಒಎಚ್‌ಎನ್ಎಸ್ (ಲಂಡನ್)
ಸಲಹೆಗಾರ ಫೋನೋಸರ್ಜನ್
ಮೈತ್ರಿ ವಾಯ್ಸ್ ಕ್ಲಿನಿಕ್
ಮಂಗಳೂರು
0824-2225626
ಡಾ. ಜಯಕುಮಾರ್ ಆರ್ ಮೆನನ್ ಎಂಎಸ್, ಎಫ್‌ಆರ್‌ಸಿಎಸ್
ಸಲಹೆಗಾರ ಲಾರಿಂಗೋಲಜಿಸ್ಟ್
ಡಾ. ಜಯಕುಮಾರ್ ಅವರ ಲಾರಿಂಗೋಲಜಿ ಸಂಸ್ಥೆ, ತಿರುವನಂತಪುರಂ
ಮೈತ್ರಿ ವಾಯ್ಸ್ ಕ್ಲಿನಿಕ್
ಮಂಗಳೂರು
0824-222526
ಪ್ರೊ. ಅಖಿಲೇಶ್ ಪಿ.ಎಂ
ಸಲಹೆಗಾರ ವಾಯ್ಸ್ ರೋಗಶಾಸ್ತ್ರಜ್ಞ
ಮೈತ್ರಿ ವಾಯ್ಸ್ ಕ್ಲಿನಿಕ್
ಮಂಗಳೂರು
8296585860
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ