ಎಸ್‌ಡಿಎಂ ಕಾಲೇಜು ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಿರುಚಿತ್ರಕ್ಕೆ ರಾಷ್ಟ್ರ ಮಟ್ಟದ ಮನ್ನಣೆ

Upayuktha
0


ಉಜಿರೆ:
ಇಲ್ಲಿನ ಎಸ್‌ಡಿಎಂ ಸ್ನಾತಕೋತ್ತರ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ‘ವಿಷ್ಪಲ’ ಕಿರುಚಿತ್ರ ತಂಡ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದೆ. ಮೈಸೂರಿನ ಅಮೃತ ವಿಶ್ವವಿದ್ಯಾಪೀಠದ ದೃಶ್ಯ ಸಂವಹನ ವಿಭಾಗ ಆಯೋಜಿಸಿದ್ದ 7ನೇ ಆವೃತ್ತಿಯ ರಾಷ್ಟ್ರಮಟ್ಟದ ಕಿರುಚಿತ್ರ ಉತ್ಸವ ‘ಸಿನೆರಮಾ 2025 – 60 ಗಂಟೆಗಳ ಸವಾಲು’ ವಿಭಾಗದಲ್ಲಿ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ವಿಷ್ಪಲ ತಂಡ ಪಡೆದಿದೆ.

ಏ.3 ರಂದು ಮೈಸೂರು ಅಮೃತ ವಿಶ್ವ ವಿದ್ಯಾಪೀಠಂ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಮಿಲನ ನಾಗರಾಜ್ ಅವರಿಂದ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.

 ವಿಷ್ಪಲ ಚಿತ್ರವನ್ನು ಮಿಹಿರ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ಪ್ರಥಮ ಪತ್ರಿಕೋ ದ್ಯಮ ವಿದ್ಯಾರ್ಥಿನಿ ಅರ್ಚನಾ ಎಸ್ ಭಟ್ ಕಥೆ-ಚಿತ್ರಕಥೆ- ನಿರ್ದೇಶನ, ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಕಾರ್ತಿಕ್ ಪೈ ಮತ್ತು ವಿಶ್ವಾಸ್ ಛಾಯಾಗ್ರಹಣ, ಮಲ್ಲೇಶ್ ಸಹ ನಿರ್ದೇಶನ, ಕಾರ್ತಿಕ್ ಪೈ ಜೊತೆಗೆ ಉಪನ್ಯಾಸಕ ಇಂಧುಧರ್ ಹಳೆಯಂಗಡಿ ಸಂಕಲನ ಮಾಡಿದ್ದಾರೆ. ವಿಭಾಗದ ವಿದ್ಯಾರ್ಥಿಗಳಾದ ಸಂಜಯ್ ಚಿತ್ರದುರ್ಗ, ಯಕ್ಷಿತ್, ಗ್ರೀಷ್ಮ ಗೌಡ, ಮನೋಜ್, ಹರೀಶ್, ಸೌಮ್ಯ ಪ್ರೊಡಕ್ಷನ್ ತಂಡದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top