ಮಂಗಳೂರು: ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ಮಂಗಳೂರು ಇದರ ಸಹಯೋಗದೊಂದಿಗೆ ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ಫಾರ್ಮಸಿ ಕಾಲೇಜ್‌ನಲ್ಲಿ “INNOVATIVE PRACTICES IN CLINICAL TRAINING & PATIENT SAFETY” ೭ನೇ ರಾಷ್ಟ್ರೀಯ ವಿಚಾರ ಸಂಕಿರಣವು ನಡೆಯಿತು.
ವಸುಧ ಲೈಫ್ ಸೈನ್ಸಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ದಿನೇಶ್‌ಚಂದ್ರ ಎ ಹೆಗ್ಡೆ ಬ್ರಹ್ಮಾವರ ದೀಪ ಬೆಳಗಿಸಿ ಉದ್ಘಾಟಿಸಿ, ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಔಷಧ ಕ್ಷೇತ್ರದಲ್ಲಿ ಗಣನೀಯ ಆರ್ಥಿಕ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಭಾರತೀಯ ಔಷಧ ತಂತ್ರಜ್ಞರ ಪರಿಣಾಮಕಾರಿಯಾದ ಸಂಶೋಧನೆಗಳು ಮತ್ತು ಕನಿಷ್ಠ ಅಡ್ಡ ಪರಿಣಾಮಗಳು ಒಳಗೊಂಡ ಔಷಧ ತಯಾರಿಕೆಗಳು ಎಂದು ತಿಳಿಸಿದರು.
ಶ್ರೀನಿವಾಸ್ ಯುನಿವರ್ಸಿಟಿ ಚಾನ್ಸೆಲರ್ ಹಾಗೂ ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರಾದ ಸಿಎ.ಎ ರಾಘವೇಂದ್ರರಾವ್ ಕಾರ್ಯಕ್ರಮ ಉದ್ಘಾಟಿಸಿ, ಮಂಗಳೂರು ರೋಗಿಗಳ ಸುರಕ್ಷತೆಯು ಸುರಕ್ಷಿತ ಔಷಧಗಳು ಮತ್ತು ಅವುಗಳ ಮುನ್ನಚ್ಚರಿಕೆಯ ಬಳಕೆಯಿಂದ ಪ್ರಾರಂಭವಾಗುತ್ತದೆ, ಈ ಗುರಿಯನ್ನು ಸಾಧಿಸಲು ಫಾರ್ಮಸಿ ವೃತ್ತಿಪರರಲ್ಲದೆ ಇತರ ಆರೋಗ್ಯ ವೃತ್ತಿಪರ ಸಹಭಾಗಿತ್ವದಿಂದ ಸುರಕ್ಷಿತ ಔಷಧ ಬಳಕೆಯು ಸಾಧ್ಯ ಎಂದು ಹೇಳಿದರು. ವಿಚಾರ ಸಂಕಿರಣದ ಪ್ರಮುಖ ಟಿಪ್ಪಣಿಯನ್ನು, ವಿಚಾರಸಂಕಿರಣದ ಸಂಚಿಕೆ ಮತ್ತು ಕಾಲೇಜಿನ ವಾರ್ಷಿಕ ಸಂಪದ ಫಾರ್ಮಾಶ್ರೀಯನ್ನು ಬಿಡುಗಡೆ ಮಾಡಿದರು.
ಪ್ರಾಂಶುಪಾಲ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ.ಎ.ಆರ್.ಶಬರಾಯ ಮಂಗಳೂರು ಅತಿಥಿಗಳನ್ನು ಸ್ವಾಗತಿಸಿದರು.
ಅತಿಥಿಗಳಾಗಿ ಶ್ರೀನಿವಾಸ್ ಯುನಿವರ್ಸಿಟಿ ಚಾನ್ಸೆಲರ್ ಮತ್ತು ಎ.ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಡಾ. ಎ. ಶ್ರೀನಿವಾಸ್ ರಾವ್ ಮಾತನಾಡಿ, ಔಷಧ ವಿದ್ಯಾರ್ಥಿಗಳು ನಿರಂತರವಾಗಿ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಔಷಧೀಯ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂದು ಕರೆ ನೀಡಿದರು. ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಸಂಶೋಧನಾ ಪ್ರಕಟಣೆಯನ್ನು ಹೊಗಳಿದರು.
ಡಾ.ವಿಜಯನಾರಾಯಣ, ಅಸೋಸಿಯೇಟ್ ಪ್ರೊಫೆಸರ್- ಫಾರ್ಮಸಿ ಪ್ರಾಕ್ಟೀಸ್ ವಿಭಾಗ, ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಡಾ. ಇ.ವಿ.ಎಸ್. ಸುಬ್ರಹ್ಮಣ್ಯಂ- ಪ್ರೊಫೆಸರ್, ಶ್ರೀನಿವಾಸ ಫಾರ್ಮಸಿ ಕಾಲೇಜ್ ಮತ್ತು ಉಪಾಧ್ಯಕ್ಷರು, ಡಾ. ಕೃಷ್ಣಾನಂದ ಕಾಮತ್, ಪ್ರೊಫೆಸರ್, ಶ್ರೀನಿವಾಸ ಫಾರ್ಮಸಿ ಕಾಲೇಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಪದ್ಮಾವತಿ ಪಿ ಪ್ರಭು, ಮತ್ತು ಕುಮಾರಿ ಜೋಸ್‌ಲಿನ್, ಕುಮಾರಿ ಜೆಸಿಕಾ ಮತ್ತು ಕುಮಾರಿ ರಂಜಿತಾ ಇವರು ಕಾರ್ಯಕ್ರಮ ನಿರ್ವಹಿಸಿದರು. ಡಾ. ಇ.ವಿ.ಎಸ್.ಸುಬ್ರಹ್ಮಣ್ಯಂ- ಪ್ರೊಫೆಸರ್, ಶ್ರೀನಿವಾಸ ಫಾರ್ಮಸಿ ಕಾಲೇಜ್ ಮತ್ತು ಉಪಾಧ್ಯಕ್ಷರು, ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ಮಂಗಳೂರು ವಂದಿಸಿದರು.
ವಿಚಾರ ಸಂಕಿರಣದಲ್ಲಿ ಫಾರ್ಮಸಿ ವಿಭಾಗದ ಆಭ್ಯರ್ಥಿಗಳು ಭಾಗವಹಿಸಿ ಸಂಶೋಧನಾ ಪತ್ರಗಳನ್ನು ಮಂಡಿಸಿದರು. ೫೫೦ಕ್ಕೂ ಹೆಚ್ಚು ಪ್ರತಿನಿಧಿಗಳು ವಿಚಾರಸಂಕಿರಣದಲ್ಲಿ ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ