ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ನಡುವೆ ಎಂಒಯು ಸಹಿ ಮತ್ತು ಪುಸ್ತಕ ಬಿಡುಗಡೆ

Upayuktha
0


ಮಂಗಳೂರು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ, ವಳಚ್ಚಿಲ್ (ಎ. ಶಾಮರಾವ್ ಪ್ರತಿಷ್ಠಾನದ ಅಂಗಸಂಸ್ಥೆ) ಇದರ ನೇತೃತ್ವದಲ್ಲಿ ಶ್ರೀನಿವಾಸ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ನಡುವೆ ಸಹಕಾರ ಒಪ್ಪಂದ (MoU) ಸಹಿ ಕಾರ್ಯಕ್ರಮ ಏಪ್ರಿಲ್ 23, 2025 ರಂದು ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಆಯೋಜನೆಗೊಂಡಿತು.


ಈ ಒಪ್ಪಂದದ ಉದ್ದೇಶ, ಕೌಶಲ್ಯಾಭಿವೃದ್ಧಿ ಹಾಗೂ ನವೀನ ನಿರ್ಮಾಣ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಹಯೋಗವನ್ನು ಗಟ್ಟಿ ಗೊಳಿಸಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಜ್ಞಾನ ಒದಗಿಸುವುದು.ಕಾರ್ಯಕ್ರಮದಲ್ಲಿ ಶ್ರೀನಿವಾಸ ವಿಶ್ವವಿದ್ಯಾ ಲಯದ ಗೌರವಾನ್ವಿತ ಕುಲಾಧಿಪತಿ ಹಾಗೂ ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಿಎ. ಎ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದರು. ಅವರು ಮಾತನಾಡಿ, “ಈ MoU ವಿದ್ಯಾರ್ಥಿಗಳು ಹೊಸದಾಗಿ ಯೋಚಿಸಿ ನವೀನ ಯೋಜನೆಗಳೊಂದಿಗೆ ಹೊರಹೊಮ್ಮಲು ಪ್ರೇರಣೆ ನೀಡುತ್ತದೆ. ಇದು ಕಾಲೇಜಿಗೂ ವಿದ್ಯಾರ್ಥಿಗಳಿಗೊ ಒಂದು ಬಂಡವಾಳ ವಾಗಲಿದೆ,” ಎಂದು ಹೇಳಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಜಿಲ್ಲಾಧಿಕಾರಿ ಶ್ರೀ ಮುಲ್ಲೈ ಮುಗಿಲನ್ ಎಂ. ಪಿ., ಐಎಎಸ್,ಶೈಕ್ಷಣಿಕ ಹಾಗೂ ಕೈಗಾರಿಕಾ ಸಹಕಾರದ ಮಹತ್ವವನ್ನು ವಿವರಿಸಿದರು. “ವಿದ್ಯಾರ್ಥಿಗಳ ತಂತ್ರಜ್ಞಾನ ತಂಡವು ಹಳೆಯ ಡಿಸಿ ಕಚೇರಿಯ ಕ್ಷಣವನ್ನು ಚಿತ್ರಿಸಲು ಮುಂದಾಗಿದ್ದು, ಇದರಿಂದ ಈ ದಿನದ MoU ಗೆ ದಾರಿ ತೆರೆದಿದೆ. ನೀವು ನಿರ್ಮಿಸುವ ಕಟ್ಟಡಗಳು ನಿಮ್ಮ ಕಲ್ಪನೆಯ ಪ್ರತೀಕವಾಗಬೇಕು, ಜನರು ‘ಇದನ್ನು ಯಾರು ವಿನ್ಯಾಸ ಮಾಡಿದ್ದಾರೆ?’ ಎಂದು ಪ್ರಶ್ನಿಸುವಷ್ಟು ಗುಣಮಟ್ಟದ ಕೆಲಸವಾಗಬೇಕು, ಇದರಿಂದ ಕಟ್ಟಡವು ನಿಮ್ಮ ಹೆಸರನ್ನು ಮತ್ತು ನಿಮ್ಮ ಕಲ್ಪನೆಯನ್ನು ನಿಮ್ಮ ಸೃಷ್ಟಿ ವಾಸ್ತವದಲ್ಲಿ ಕಾಲಕ್ರಮೇಣದಲ್ಲಿ ಚಿರಸ್ಥಾಯಿ ಯಾಗಿ ಉಳಿಯುವುದು” ಎಂದು ಅವರು ಸಲಹೆ ನೀಡಿದರು.


ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶ್ರೀ ರಾಜೇಂದ್ರ ಕಲ್ಬಾವಿ ಅವರು ಮಾತನಾಡಿ, “ಒಂದು ಸಣ್ಣ ತರಬೇತಿ ಶಿಬಿರದಿಂದ ಆರಂಭವಾದ ಸಂಬಂಧ ಇಂದು MoU ವರೆಗೆ ತಲುಪಿದೆ. ವಿದ್ಯಾರ್ಥಿಗಳು ಕೇವಲ ವಾಸ್ತುಶಿಲ್ಪಿಗಳು ಮಾತ್ರವಲ್ಲ, ಐಎಎಸ್ ಅಧಿಕಾರಿಗಳಾಗುವ ಕನಸು ಕೂಡ ಬೆಳೆಸಬೇಕು, ಇದರಿಂದ ನೀವು ಸಮಾಜಕ್ಕೆ ಇನ್ನೂ ಉತ್ತಮವಾದ ಕೊಡುಗೆಯನ್ನು ನೀಡಬಹುದು” ಎಂದು ಹೇಳಿದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಅವರು ಮಾತನಾಡಿ, “ಈ MoU ಮೂಲಕ ಜಿಲ್ಲಾಡಳಿತದೊಂದಿಗೆ ಶ್ರೀನಿವಾಸ ವಿಶ್ವವಿದ್ಯಾಲಯ ಕೈಜೋಡಿಸಿದ್ದು ಸಂತೋಷದ ವಿಷಯ. ವಿದ್ಯಾರ್ಥಿಗಳ ಹೊಸ ಯೋಚನೆ ಗಳು ಸಮಾಜಕ್ಕೆ ಲಾಭವಾಗುವಂತಿರಲಿ. ಚೀನಾದಂತೆ ಮಂಗಳೂರನ್ನೂ ವಾಸ್ತುಶಿಲ್ಪದ ಮೂಲಕ ಪ್ರವಾಸಿ ತಾಣವಾಗಿ ರೂಪಿಸ ಬಹುದು,” ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಭಾಗವಾಗಿ "From Shrines to Skylines: Nepal Through Our Eyes" ಎಂಬ ಪುಸ್ತಕ ಬಿಡುಗಡೆ ಸಮಾರಂಭವೂ ಜರುಗಿತು. ಈ ಪುಸ್ತಕವು ನೇಪಾಳ ಪ್ರವಾಸದ ಅನುಭವಗಳ ಜೊತೆಗೆ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನಾ ಪ್ರಸ್ತಾವನೆಗಳನ್ನು ಒಳಗೊಂಡಿದೆ.


ಕಾರ್ಯಕ್ರಮದಲ್ಲಿ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ., ಉಪಸ್ಥಿತರಿದ್ದರು. ಅಸಿಸ್ಟಂಟ್ ಪ್ರೊಫೆಸರ್ ಲೆಸ್ಲಿ ಜೆ. ಡಯಾಸ್ ಅವರು MoU ಬಗ್ಗೆ ಮಾಹಿತಿ ನೀಡಿದರು, ಅರ್ಕಿಟೆಕ್ಟ್ ವಾಸುದೇವ ಎನ್. ಶೇಟ್ ಸ್ವಾಗತಿಸಿದರು ಮತ್ತು ಅರ್ಕಿಟೆಕ್ಟ್ ಕುಮಾರಚಂದ್ರ ಎಂ.ಆರ್. ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top