ಹಣ ಡಬಲ್ ಮಾಡಿ ಕೊಡುವುದಾಗಿ ವಂಚನೆ: ಅಂಗಡಿ ಜಪ್ತಿ, ಆರೋಪಿ ವಿರುದ್ಧ ಎಫ್ಐಆರ್

Upayuktha
0


ಬಳ್ಳಾರಿ
: ಹಣ ಡಬಲ್ ಮಾಡಿ ಕೊಡುವುದಾಗಿ ವಂಚನೆ ಮಾಡುತ್ತಿದ್ದ ನಗರದ ಕುಂಬಾರ ಓಣಿಯಲ್ಲಿ  ವಾಸವಿ ಸ್ವಗೃಹ ಹೋಮ್‌ ನೀಡ್ಸ್ & ಕನ್ಸಲ್ಟೆನ್ಸಿ ಮಾಲಕ ಟಿ ವಿಶ್ವನಾಥ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

ಖರೀದಿ ಮಾಡಿದ ವಸ್ತುವಿನ ಬಿಲ್‌ ಜೊತೆ ಅಷ್ಟೇ ಮೊತ್ತದ ನಗದು ಪಡೆದು 25% ಸರ್ವಿಸ್ ಚಾರ್ಜ್ ಪಡೆದುಕೊಂಡು ತಿಂಗಳಿಗೆ 33% ಹೆಚ್ಚಿಗೆ ಹಣ ನೀಡುವುದಾಗಿ ಮತ್ತು  30 ಸಾವಿರದ ನ್ಯೂಟ್ರೀಷನ್  ಖರೀದಿ ಮಾಡಿದರೆ  ತಿಂಗಳಿಗೆ ಡಬಲ್ ಅಮೌಂಟ್ ನೀಡುವುದಾಗಿ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. 

ಈ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾ ಎಸ್ಪಿ  ಶೋಭಾ ರಾಣಿ ಸೈಬರ್ ಕ್ರೈಂ ಅಧಿಕಾರಿಗಳಿಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದರು. ಅಂಗಡಿ ಮೇಲೆ ಸೈಬ‌ರ್ ಕ್ರೈಂ ಡಿವೈಎಸ್ಪಿ ಸಂತೋಷ್ ಚೌಹನ್ ಮತ್ತು ಬ್ರೂಸ್ಟೇಟ್ ಠಾಣೆ ಅಧಿಕಾರಿಗಳು, ಕೋ-ಆಪರೇಟ್ ಸೊಸೈಟಿ ಅಧಿಕಾರಿಗಳು ದಾಳಿ ನಡೆಸಿ 19,38,500 ನಗದು, ಯಂತ್ರೋಪಕರಣಗಳು, ಲೆಕ್ಕ ಪುಸ್ತಕಗಳನ್ನು ಸ್ವಾಧೀನ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಮಹಾಂತೇಶ್, ಸಿಬ್ಬಂದಿ ಶಂಕ್ರಪ್ಪ, ಅಶೋಕ್ ಮೈನಳ್ಳಿ, ಶರ್ಮಾಸ್, ಕುಮಾ‌ರ್ ರೆಡ್ಡಿ, ಆಂಜಿನೇಯ, ವಿನಯ್‌ಕುಮಾರ್, ಶಿವಕುಮಾರ್, ಸಿದ್ದೇಶ್, ನಿಸಾರ್ ಅಹಮ್ಮದ್ ಅಂಗಡಿಯಲ್ಲಿದ್ದ  ಸಾಮಗ್ರಿ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.  ಇಲ್ಲಿ ಹಣ ಹೂಡಿ ಮೋಸ ಹೋದವರು ಬ್ರೂಸ್ಪೇಟ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಬಹುದು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top