ಜಿಎಫ್‌ಜಿಸಿ ಪುಂಜಾಲಕಟ್ಟೆ: ಪ್ರಾಥಮಿಕ ಜೀವರಕ್ಷಣಾ ಕೌಶಲ್ಯದ ಕಾರ್ಯಾಗಾರ

Upayuktha
0


ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 & 2, ರೋವರ್ಸ್ ಆಂಡ್ ರೇಂಜರ್ಸ್ ಘಟಕ, ಭಾರತೀಯ ಯುವ ರೆಡ್ ಕ್ರಾಸ್, ಎ.ಜೆ. ಆಸ್ಪತ್ರೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಂಗಳವಾರ (ಮಾ.18) Workshop on "Basic Life Saving Skill" (ಪ್ರಾಥಮಿಕ ಜೀವ ರಕ್ಷಣಾ ಕೌಶಲ್ಯ ಕುರಿತು ಕಾರ್ಯಾಗಾರ) ಕಾರ್ಯಕ್ರಮವನ್ನು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿತ್ತು.


ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ತಮಿಳ್ ಸೆಲ್ವನ್, ಇವರು ಹೃದಯ ಸ್ತಂಭನವಾದಾಗ ಹಾಗೂ ಗಂಟಲು ಕಟ್ಟಿಕೊಂಡಾಗ ಯಾವ ರೀತಿ ಚಿಕಿತ್ಸೆ ನೀಡಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಿದರು.


ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಾಧವ ಎಂ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ  ಎನ್‌ಎಸ್‌ಎಸ್‌ ಯೋಜನಾಧಿಕಾರಿ ಗಳಾದ ಪ್ರೊ. ಸಂತೋಷ್ ಪ್ರಭು ಎಂ. ಹಾಗೂ ಡಾ. ಗೀತಾ ಎಂ. ಎಲ್, ಮತ್ತು ರೋವರ್ಸ್ ಆಂಡ್ ರೇಂಜರ್ಸ್ ಸಂಚಾಲಕರಾದ ಪ್ರೊ. ಆಂಜನೇಯ ಎಂ ಎನ್ ಮತ್ತು ಪ್ರೊ. ಸುಮ ಸಿ ಸಿ, ವೈ ಆರ್ ಸಿ ಸಂಚಾಲಕರಾದ ಡಾ. ವೈಶಾಲಿ ಯು ಮತ್ತು ಪ್ರೊ. ಸೋಮಲಿಂಗ ವಿಠ್ಠಲ್ ಕಟ್ಟಿಮನಿ, ಐಕ್ಯೂಎಸಿ ಕ್ವಾಡ್ರೆಶ್ ಸಂಚಾಲಕಿ ಡಾ. ಅವಿತಾ ಮರಿಯ, ಎನ್ನೆಸ್ಸೆಸ್ ಸಹ ಯೋಜನಾಧಿಕಾರಿ ಡಾ. ಕೀರ್ತಿರಾಜ್ ಹಾಗೂ ಬೋಧಕ ಮತ್ತು ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕುಮಾರಿ ದೀಕ್ಷಿತಾ. ಕೆ ದ್ವಿತೀಯ ಬಿಕಾಂ ಇವರು ನಿರೂಪಿಸಿದರು. ಕುಮಾರಿ ಶ್ರಾವ್ಯ ದ್ವಿತೀಯ ಬಿಬಿಎ ಇವರು ಸ್ವಾಗತಿಸಿದರು. ಕುಮಾರಿ ರಕ್ಷಿತಾ ದ್ವಿತೀಯ ಬಿಎ ಇವರು ವಂದಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top