ಭಾರತದ ಸಮಗ್ರತೆಯ ಒಂದು ಸಂಕೇತಗಳಲ್ಲಿ ರೂಪಾಯಿಯ ಚಿಹ್ನೆ ಕೂಡ ಒಂದು ಎಂದರೆ ತಪ್ಪಾಗಲಾರದು.
ನಮ್ಮ ದೇಶದ ರೂಪಾಯಿ ಚಿಹ್ನೆಯು "₹" ಲ್ಯಾಟಿನ್ ಅಕ್ಷರ "R" ಮತ್ತು ದೇವನಾಗರಿ ಲಿಪಿಯ "₹" (ರ)" ಯ ಸಂಯೋಜನೆಯಾಗಿದೆ. ಇದು ಭಾರತದ ಸಂಸ್ಕೃತಿ ಮತ್ತು ಆರ್ಥಿಕ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ಮೇಲ್ಭಾಗದ ಎರಡು ಸಮಾಂತರ ರೇಖೆಗಳು ಭಾರತದ ತ್ರಿವರ್ಣ ಧ್ವಜ ಮತ್ತು ಆರ್ಥಿಕ ಸ್ಥಿರತೆಯನ್ನು ಸೂಚಿಸುತ್ತವೆ.
ರೂಪಾಯಿ ಚಿಹ್ನೆಯು (₹) ಭಾರತೀಯ ಆರ್ಥಿಕತೆಗೆ ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ. ಇದನ್ನು 2010ರಲ್ಲಿ ಅಧಿಕೃತವಾಗಿ ಸ್ವೀಕರಿಸಲಾಯಿತು. ಭಾರತೀಯ ರೂಪಾಯಿಗೆ ಒಂದು ವಿಶಿಷ್ಟ ಮತ್ತು ಗುರುತಿಸಬಹುದಾದ ಚಿಹ್ನೆ ಅಗತ್ಯವಿತ್ತು, ಇದಕ್ಕಾಗಿ 2009ರಲ್ಲಿ ಭಾರತ ಸರ್ಕಾರ ಚಿಹ್ನೆ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಿತು. ಉದಯ್ ಕುಮಾರ್ ಧಾರವಾಡಕರ ಅವರ ವಿನ್ಯಾಸವನ್ನು ಆಯ್ಕೆ ಮಾಡಲಾಯಿತು. ಇದನ್ನು ಅಧಿಕೃತವಾಗಿ 2010ರಲ್ಲಿ ಒಪ್ಪಿಕೊಳ್ಳಲಾಯಿತು ಮತ್ತು 2012ರಿಂದ ಭಾರತೀಯ ಕರೆನ್ಸಿ ನೋಟುಗಳಲ್ಲಿ ಬಳಸಲು ಪ್ರಾರಂಭಿಸಿದರು. ಈಗ, ರೂಪಾಯಿ ಚಿಹ್ನೆ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿಯೂ ಸಹ ಅನೇಕ ಸಂಖ್ಯಾ ಸಂಪತ್ತುಗಳ ಜೊತೆ ಬಳಸಲಾಗುತ್ತಿದೆ.
ಚಿನ್ಹೆಯನ್ನು ರೂಪಿಸಿದ ಉದಯಕುಮಾರ್ ಇವರು ತಮಿಳುನಾಡಿನ ಚೆನ್ನೈನವರು. ಜೇಜೆ ಸ್ಕೂಲ್ ಆಫ್ ಆರ್ಟ್, ಮುಂಬೈಯಲ್ಲಿ ಗ್ರಾಫಿಕ್ ಡಿಸೈನ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಆನಂತರ, ಐಐಟಿ ಬಾಂಬೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಹೆಚ್.ಡಿ ಮಾಡಿದ್ದಾರೆ. ಅವರ ಪ್ರಾಥಮಿಕ ಆಸಕ್ತಿ ಟೈಪೋಗ್ರಫಿ (ಅಕ್ಷರ ವಿನ್ಯಾಸ) ಮತ್ತು ಗ್ರಾಫಿಕ್ ಡಿಸೈನಿಂಗ್. ಪ್ರಸ್ತುತ ಇವರು ಐಐಟಿ ಗುವಾಹಟಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಟೈಪೋಗ್ರಫಿ, ಕನ್ನಡ-ತಮಿಳು-ಹಿಂದಿ ಸೇರಿದಂತೆ ವಿವಿಧ ಭಾರತೀಯ ಲಿಪಿಗಳ ವಿನ್ಯಾಸ ಕುರಿತ ಅಧ್ಯಯನ ಮಾಡುತ್ತಿದ್ದಾರೆ. ಉದಯ್ ಕುಮಾರ್ ಅವರ ಈ ಸಾಧನೆಯು ಭಾರತದ ಹಣಕಾಸು ಗುರುತನ್ನು ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತಗೊಳಿಸಿದೆ.
ರೂಪಾಯಿ (₹) ಚಿಹ್ನೆಯು ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಮುಖವಾಗಿದೆ. 2010ರಲ್ಲಿ ಸ್ವೀಕರಿಸಲಾದ ಈ ಚಿಹ್ನೆಯು ಭಾರತದ ಆರ್ಥಿಕ ಪ್ರಭಾವ ಮತ್ತು ಸ್ವಾಯತ್ತತೆಯನ್ನು ತೋರಿಸುತ್ತದೆ.
₹ ಚಿಹ್ನೆಯು ಅಮೆರಿಕಾ ಡಾಲರ್ ($), ಯೂರೋ (€), ಪೌಂಡ್ (£) ಮತ್ತು ಯೆನ್ (¥) ಇತ್ಯಾದಿ ಅಂತಾರಾಷ್ಟ್ರೀಯ ಕರೆನ್ಸಿಗಳೊಂದಿಗೆ ತೊಡಗಿಸಿಕೊಂಡಿದೆ. ಈ ಮೂಲಕ ಬ್ಯಾಂಕುಗಳು, ಸ್ಟಾಕ್ ಮಾರುಕಟ್ಟೆ, ಮತ್ತು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಭಾರತೀಯ ರೂಪಾಯಿಗೆ ತನ್ನದೇ ಆದ ಗುರುತು ದೊರಕಿತು. ₹ ಚಿಹ್ನೆಯನ್ನು ಕಂಪ್ಯೂಟರ್ ಕೀಬೋರ್ಡ್, ಸಾಫ್ಟ್ವೇರ್, ಮತ್ತು ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಬಳಸಲು ಅನುಕೂಲವಾಯಿತು.
ಹೊಸ ಚಿಹ್ನೆಯಿಂದಾಗಿ ಭಾರತೀಯ ಕರೆನ್ಸಿಯನ್ನು ವಿಶ್ವದ ಯಾವುದೇ ದೇಶದಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಯಿತು. ರೂಪಾಯಿ ಚಿಹ್ನೆಯು ಭಾರತೀಯ ಆರ್ಥಿಕ ಸ್ವಾಯತ್ತತೆಯ ಮತ್ತು ಬೆಳವಣಿಗೆಯ ಸಂಕೇತವಾಗಿದೆ. ಇದು ಭಾರತೀಯ ಗುರುತನ್ನು ಬಲಪಡಿಸುತ್ತದೆ ಮತ್ತು ದೇಶದ ಆರ್ಥಿಕ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ₹ ಚಿಹ್ನೆಯು ಭಾರತದ ಆರ್ಥಿಕ, ಸಾಂಸ್ಕೃತಿಕ ಮತ್ತು ಜಾಗತಿಕ ಗುರುತನ್ನು ಎತ್ತಿ ತೋರಿಸುವ ಒಂದು ಪ್ರಮುಖ ಸಾಧನವಾಗಿದೆ.
ನಾವು ಜಗತ್ತಿನಲ್ಲಿ ಬಳಸುವ ಹಲವಾರು ಕರೆನ್ಸಿಗಳ ವಿಶಿಷ್ಟ ಹಣದ ಚಿಹ್ನೆಗಳಿವೆ, ಇವು ಆ ದೇಶದ ಆರ್ಥಿಕತೆ ಮತ್ತು ಗುರುತಿನ ಪ್ರತೀಕಗಳಾಗಿವೆ. € (ಯೂರೋ) 1999ರಲ್ಲಿ ಅಂತರಾಷ್ಟ್ರೀಯ ಕರೆನ್ಸಿಯಾಗಿ ಪ್ರಾರಂಭವಾಯಿತು. $ (ಡಾಲರ್) ಚಿಹ್ನೆ ಅಮೇರಿಕಾ ಮಾತ್ರವಲ್ಲದೆ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಾಪುರ್ ಇತ್ಯಾದಿ ದೇಶಗಳಲ್ಲಿಯೂ ಬಳಸಲಾಗುತ್ತದೆ.
¥ (ಯೆನ್ ಮತ್ತು ಯುಆನ್) ಜಪಾನ್ ಮತ್ತು ಚೀನಾದಲ್ಲಿ ಬಳಸುವ ಒಂದೇ ರೀತಿಯ ಚಿಹ್ನೆ ಆದರೆ ಎರಡೂ ವಿಭಿನ್ನ ಕರೆನ್ಸಿಗಳು. ಇವುಗಳಿಂದ ಪ್ರತಿಯೊಂದು ದೇಶದ ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ವಾಯತ್ತತೆ ವ್ಯಕ್ತವಾಗುತ್ತದೆ.
ಭಾರತದ ರೂಪಾಯಿಯ ಚಿಹ್ನೆ ಇಂದು ತನ್ನದೇ ಪ್ರಭಾವ ಸೃಷ್ಟಿಸಿಕೊಂಡಿದ್ದು ಮಾತ್ರವಲ್ಲದೆ ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಔನ್ನತ್ಯ ಸಾರುವಂತಿದೆ.
- ಡಾ. ಪ್ರಸನ್ನಕುಮಾರ ಐತಾಳ್, ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ