ಮಹಿಳಾ ದಿನಾಚರಣೆಯ ನೈಜ ಪರಿಕಲ್ಪನೆ ಜನರಲ್ಲಿ ಮೂಡುವುದು ಅತ್ಯಗತ್ಯ : ಡಾ. ಹರ್ಷ ಪ್ರಿಯಂವದಾ ಅಭಿಪ್ರಾಯ

Upayuktha
0



ನಿಟ್ಟೆ: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಕಾರ್ಕಳ ಪೊಲೀಸ್ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದ ಭಾಗವಹಿಸಿದ್ದರು. ಡಾ. ಪ್ರಿಯಂವದಾ ಅವರು ಕಾನೂನು ಜಾರಿಯಲ್ಲಿ ಮಹಿಳೆಯರ ಪಾತ್ರ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಲಿಂಗ ಸಮಾನತೆಯ ಮಹತ್ವವನ್ನು ತಿಳಿಸುವ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. 


ಮಹಿಳಾ ದಿನಾಚರಣೆ ಎಂಬುದು ಸ್ತ್ರೀಯರನ್ನು ಪೋಷಿಸುವ, ಆಧರಿಸುವ ಪುರುಷ ಸಮಾಜವನ್ನೂ ಶ್ಲಾಘಿಸುವ ದಿನವೆಂಬುದನ್ನೂ ನಾವು ನೆನಪಿಟ್ಟುಕೊಳ್ಳಬೇಕು. ತಮ್ಮ ಗುರಿಗಳನ್ನು ಬೆನ್ನಟ್ಟುವಲ್ಲಿ ಆತ್ಮವಿಶ್ವಾಸ, ಮಹತ್ವಾಕಾಂಕ್ಷೆ ಮತ್ತು ನಿರ್ಭೀತರಾಗಿರಲು ಅವರು ಪ್ರೋತ್ಸಾಹಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಆಫ್-ಕ್ಯಾಂಪಸ್ ಸೆಂಟರ್ ನ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ.ಎ.ಯೋಗೀಶ್ ಹೆಗ್ಡೆ ಮಾತನಾಡಿ, ಮಹಿಳಾ ಸಬಲೀಕರಣ ಮತ್ತು ಹೆಚ್ಚು ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸಿದರು. 


ಮಹಿಳೆಯರು ಅಭಿವೃದ್ಧಿ ಹೊಂದಲು ಸುರಕ್ಷಿತ ಮತ್ತು ಬೆಂಬಲಿತ ವಾತಾವರಣವನ್ನು ಬೆಳೆಸುವಲ್ಲಿ ಸಂಸ್ಥೆಗಳ ಪಾತ್ರವನ್ನು ವಿವರಿಸಿದರು. ಹಿಂದಿನ ಕಾಲದಿಂದಲೂ ಭಾರತವು ಸ್ತ್ರೀಕುಲವನ್ನು ಪೂಜಿಸುತ್ತಾ ಬಂದಿದೆ. ಈ ಗೌರವದ ಚಿಂತನೆ ಮುಂದುವರೆಯಬೇಕು ಎಂದರು.


ವೇದಿಕೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಉಪಕುಲಸಚಿವೆ ಡಾ.ರೇಖಾ ಭಂಡಾರ್ಕರ್ ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅವರು ನಿಟ್ಟೆ ಸಮೂಹದ ಆರಂಭ ಮತ್ತು ಗಮನಾರ್ಹ ಬೆಳವಣಿಗೆಯ ಹಾಗೂ ಕ್ಯಾಂಪಸ್ ನಲ್ಲಿ ಇರುವ ಸ್ತ್ರೀಶಕ್ತಿ ಹಾಗೂ ಜನಸಂಖ್ಯೆಯ ಬಲದ ಬಗೆಗೆ ಅರಿವು ಮೂಡಿಸಿದರು.


ಮಹಿಳಾ ವಸತಿ ನಿಲಯದ ಮುಖ್ಯ ವಾರ್ಡನ್ ಹಾಗೂ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರೊಫೆಸರ್ ಡಾ.ವೀಣಾದೇವಿ ಶಾಸ್ತ್ರಿಮಠ್ ಸ್ವಾಗತಿಸಿದರು. ಎಡ್ಮಿನ್ ವಿಭಾಗದ ಮುಖ್ಯಸ್ಥೆ ಸ್ಮಿತಾ ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕಿಯರಾದ ಡಾ.ಪದ್ಮಾವತಿ, ಡಾ.ಶ್ರೀವಿದ್ಯಾ ಪ್ರಾರ್ಥಿಸಿದರು. ಹಣಕಾಸಿನ ವಿಭಾಗದ ಮುಖ್ಯಸ್ಥೆ ಶೈಲಜಾ ಶೆಟ್ಟಿ ವಂದಿಸಿದರು. ಮಾನವಿಕ ವಿಭಾಗದ ಸಹಾಯಕ ಪ್ರಾಧ್ಯಾಪಕಿ  ಶ್ವೇತಾ ಭರತ್ ಕಾರ್ಯಕ್ರಮ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top