ಮಾ. 2: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪ್ರವೇಶ ಪರೀಕ್ಷೆ

Upayuktha
0


ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿರುವ ಕರ್ನಾಟಕದ ನಂ 1 ಕನ್ನಡ ಮಾಧ್ಯಮ ಶಾಲೆ-  ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪ್ರವೇಶ ಪರೀಕ್ಷೆಯು ಮಾರ್ಚ್ 2 ರಂದು ಆದಿತ್ಯವಾರ ವಿದ್ಯಾಗಿರಿ ಹಾಗೂ ಪುತ್ತಿಗೆ ಶಾಲಾ ಆವರಣದಲ್ಲಿ ನಡೆಯಲಿದೆ.


ಈವರೆಗೆ  ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟು 20,134 ಅರ್ಜಿಗಳು ಸ್ವೀಕೃತವಾಗಿದ್ದು, ವಿದ್ಯಾರ್ಥಿಗಳು 2.30 ಘಂಟೆಗಳ 150 ಅಂಕದ ಪರೀಕ್ಷೆಯನ್ನು ಎದುರಿಸಲಿದ್ದಾರೆ.   ಆಯ್ಕೆಯಾದ ವಿದ್ಯಾರ್ಥಿಗಳು 6 ನೇ ತರಗತಿಯಿಂದ 10ನೇ ತರಗತಿ ವರೆಗಿನ ಶಿಕ್ಷಣವನ್ನು ಉಚಿತವಾಗಿ ಊಟ, ವಸತಿ ಹಾಗೂ ಇನ್ನಿತರ  ಸೌಲಭ್ಯಗಳೊಂದಿಗೆ ಪಡೆಯಬಹುದಾಗಿದೆ.


ಈ ಬಾರಿಯ ಪರೀಕ್ಷೆ ಆಳ್ವಾಸ್‌ನ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿರುವ ಯಶೋಕಿರಣ ಬ್ಲಾಕ್, ಜಗನ್ಮೋಹನ, ಕಾಮಾರ್ಸ ಬ್ಲಾಕ್, ಆಳ್ವಾಸ್ ಪದವಿ ಕಾಲೇಜು, ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಹೀಗೆ 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.


ಸರಕಾರದ ಹೆಚ್ಚಿನ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಅಥವಾ ಶಾಲೆಗಳನ್ನು ವಿಲೀನಗೊಳಿಸುವ ಪರಿಸ್ಥಿತಿಯಲ್ಲಿರುವ ಕಾಲ ಘಟ್ಟದಲ್ಲಿ, ಪ್ರೈವೇಟ್ ಚಿಂತನೆಯಲ್ಲಿ ಮೂಡಿಬಂದ  ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಸ್ವೀಕೃತಗೊಂಡಿರುವ ಅರ್ಜಿಯನ್ನು ಗಮನಿಸಿದರೆ,  ಈ ಕಾಲಕ್ಕನುಗುಣವಾದ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ, ಖಂಡಿತ ವಿದ್ಯಾರ್ಥಿಗಳ ಕೊರತೆ ಎದುರಾಗದು ಎಂಬುದನ್ನು ಆಳ್ವಾಸ್ ಸಾಬೀತುಪಡಿಸಿದೆ.

- ಡಾ. ಎಂ. ಮೋಹನ ಆಳ್ವ .  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top