---------------------------------------------------------------------------------------------------------------------------
ಭಾರತೀಯ ಪರಂಪರೆಯಲ್ಲಿ ಅಡಿಕೆಗೆ ಎಲ್ಲೆಡೆಯೂ ಮಾನ-ಸಮ್ಮಾನವಿದೆ. ಈಗಂತೂ ಮದುವೆ ಸೀಸನ್ ಶುರುವಾಗಿಬಿಟ್ಟಿದೆ. ಮದುವೆಯ ನಿಶ್ಚಿತಾರ್ಥದ ಸಂದರ್ಭದಲ್ಲಿ ತಾಂಬೂಲ ಬದಲಾಯಿಸುವ ಆಚರಣೆಯಿಂದ ತೊಡಗಿ, ಮದುವೆಯ ಭೋಜನದ ನಂತರ ಅತಿಥಿಗಳಿಗೆ ತಾಂಬೂಲ ನೀಡುವ ವರೆಗೂ ಅಡಿಕೆಗೆ ಸ್ಥಾನ-ಮಾನವಿದೆ. ನಮ್ಮ ದೇಶದ ಪ್ರಮುಖ ವಾಣಿಜ್ಯ ಬೆಳೆಯೂ ಆಗಿರುವ ಅಡಿಕೆಯ ಕಿಮ್ಮತ್ತು ಅಡಿಕೆಯ ಮರದಂತೆಯೇ ಮುಗಿಲು ಮುಟ್ಟುತ್ತಿದೆ. ಇಂತಹ ಸನ್ನಿವೇಶದಲ್ಲಿ ಆರೋಗ್ಯದ ಕಾಳಜಿಯ ನೆಪದಲ್ಲಿ ಅಡಿಕೆಯ ಮಾನ ಕಳೆಯುವಂತಹ ಅನರ್ಥಕಾರಿ ಸಂಶೋಧನೆಗಳ ವರದಿಗಳೂ ವಿದೇಶಿ ಮೂಲಗಳಿಂದ ಆಗಾಗ್ಗೆ ಹೊರಬೀಳುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಅಡಿಕೆಯ ಕುರಿತ ಒಂದು ಆಹ್ಲಾದಕರ ಲೇಖನವಿಲ್ಲಿದೆ.
---------------------------------------------------------------------------------------------------------------------------
ಭಾರತದ ಅಸ್ಸಾಮಿನಿಂದ ಅಮೆರಿಕಾದವರೆಗೆ ಮಂತ್ರ, ತಂತ್ರ, ಪೂಜೆ ಪುನಸ್ಕಾರದಿಂದ ತೊಡಗಿ ದಕ್ಷಿಣೆಯ ವರೆಗೆ ಅಡಿಕೆ ನಿರಂತರ ಕೈಯ್ಯಲ್ಲಿರಲೇಬೇಕು ಎಂಬುದು ಖಂಡಿತಾ. ದೈವೀ ಪ್ರಸಿದ್ಧಿಯ ಜತೆಗೆ ಅದರಿಂಧ ಕ್ಯಾನ್ಸರ್ ನಂತಹ ಖಾಯಿಲೆ ಬರಬಹುದೆಂಬ ಅಪಪ್ರಚಾರ ಹೇಗೋ ಅಂಟಿಕೊಂಡಿದೆ. ಆದರೆ, ಇತ್ತೀಚೆಗೆ ಭಾರತೀಯ ಸಂಶೋಧಕರು ವೈಜ್ಞಾನಿಕವಾಗಿ ಸಂಶೋಧನೆ, ಪ್ರಯೋಗಗಳನ್ನು ನಡೆಸಿ ಹಿಂದೂ ದೇಶದ ಶಾಸ್ತ ನಂಬಿಕೆಗಳಲ್ಲಿ ಪ್ರಾಮುಖ್ಯವಾದ ಪ್ರಕೃತಿಯ ಕೊಡುಗೆ ಕೈಯೊಳಗೆ ಇದರವಾಗಿ ಬಿಡುವ, ಎತ್ತದ ಮರದ ತುದಿಯಿಂದ ಕೊಯ್ದು ಜಾಗ್ರತೆಯಿಂದ ಕೆಳಗಿಳಿಸಲಾಗುವ ಮತ್ತು ಕಾಲಕಾಲಕ್ಕೆ ಹಸಿರು, ಕೆಂಪು ಮತ್ತು ಕರಿಬಣ್ಣಗಳನ್ನೆಲ್ಲಾ ಒಂದೊಂದಾಗಿ ಮೈಗೂಡಿಸಿ ತೋರುವ ಈ ಫಲದ ಮಹಿಮೆ ಇನ್ನೂ ಪ್ರಪಂಚಕ್ಕೆ ನೇರ್ಪಿನಲ್ಲಿ ಗೊತ್ತಾಗಿಲ್ಲ ಎನಿಸಿಬಿಡುತ್ತದೆ.
• ಡಾ. ಈಶ್ವರ ದೈತೋಟ
ನಮ್ಮ ಕರ್ನಾಟಕಕ್ಕೊಂದು ಹೆಮ್ಮೆ ಇದೆ. ಏನೆಂದರೆ, ದೇಶದ ಅಡಿಕೆ ಬೆಳೆಗಾರಿಕೆಯಲ್ಲಿ ನಮ್ಮ ರಾಜ್ಯ ಅತಿದೊಡ್ಡ ಕೊಡುಗೆ ನೀಡುತ್ತಲಿದೆ. ಅಸ್ಲಾಮಿನಿಂದ ತೊಡಗಿ, ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿಯೂ ಬೆಳೆಯುತ್ತವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆಯಾಗಿರುವುದಲ್ಲದೆ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಫಲ ಕೊಡುತ್ತಾ ಬಂದಿದೆ. ಮೊದಲಿಗೆ ಹಸಿರು, ಬಳಿಕ ಕೆಂಪು ಹಾಗೂ ಕೊನೆಗೆ ಮಾಸಲು ಕರಿಬಣ್ಣಕ್ಕೆ ಬದಲಾಗುವ ಮೈಹೊರೆ ಇರುವ ಈ ಫಲ ದೈವೀ ಕಾರ್ಯಗಳಿಗಾಗಿ ಈಗ ಅಮೆರಿಕಾದ ದೇವಲಯಗಳಲ್ಲಿಯೂ ಗೌರವವನ್ನು ಗಳಿಸುತ್ತಿದೆ.
ಇನ್ನೊಂದು ವೈಶಿಷ್ಟ್ಯವೆಂದರೆ ಉದ್ದನೆಯ ಮರದಲ್ಲಿ ಗೊಂಚಲು ಹೂವಿನಂತೆ ಮೂಡಿ ಹಸಿರು ಕಾಯಿಯಾಗಿ, ಬಲಿತಾಗ ಕೆಂಪನೆಯ ಮೈಯೊಂದಿಗೆ ಆಕರ್ಷಿಸುವ ವಿಶೇಷ ಗುಣವೂ ಅಡಿಕೆಗೆ ಇದೆ. ಹಸಿರಾಗಿ ನೀರಿನಲ್ಲಿ ಕುದಿಸಿಕೊಂಡು ಸಿದ್ಧವಾಗುವುದಲ್ಲದೆ, ಕೆಂಪನೆಯ ಕಾಯಿ ಬಿಸಿಲಲ್ಲಿ ಒಣಗಿ ಮೈಹೊದಿಕೆಯನ್ನು ಕಳಚಿಕೊಂಡು ಗೋಲಿಯಂತೆ ಉರುಟುರಟಾಗಿ ಮಾರಾಟಕ್ಕೆ ಸಿದ್ಧಗೊಳ್ಳುತ್ತದೆ. ಈ ಫಲದ ಮೈಸಿಪ್ಪೆ ತೆಗೆಯುವುದೊಂದು ಸೂಕ್ಷ್ಮ ಕಾರ್ಮಿಕತನವಾಗಿ ಬೆಳೆದು ಬಂದಿದೆ. ಈಗ ಇದಕ್ಕೆ ಯಂತ್ರ ತಂತ್ರಜ್ಞಾನವೂ ಮೈಗೂಡಿದೆ. ಶಾಸ್ತ್ರ, ಪೂಜೆ, ಮಂಗಳ ಕಾರ್ಯಗಳಲ್ಲದೆ ರೋಗ ಪರಿಹರಿಸುವ ಮದ್ದಿನ ಗುಣವೂ ಇದಕ್ಕುಂಟು. ಮಂಗಳ ಕಾರ್ಯಗಳ ಸಂದರ್ಭದಲ್ಲಿ ಭೋಜನವಾದ ಬಳಿಕ ಸುಣ್ಣದೊಂದಿಗೆ ಎಲೆ ಅಡಿಕೆಯನ್ನು ಬಾಯಲ್ಲಿಟ್ಟು ಜಗಿಯುವ ಮಜಾವಂತೂ ಇದ್ದೇ ಇದೆ. ಜೀರ್ಣಕ್ರಿಯೆಗೆ ಇದು ಸಹಕಾರಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಹಿಂದಿನ ಕಾಲದಲ್ಲಿ ಮಕ್ಕಳ ಜೀರ್ಣಕ್ರಿಯೆಗೆ ಎಲೆಅಡಿಕೆ ಸಹಕಾರಿ ಎಂದು ಬಾಣಂತಿಯರಿಗೆ ಊಟದ ನಂತರ ಎಲೆ ಅಡಿಕೆಯನ್ನು ನೀಡುತ್ತಿದ್ದರು.
ಪದೇ ಪದೇ ಅಡಿಕೆ ಬೆಳೆಗಾರರನ್ನು ಕಂಗಾಲು ಗೊಳಿಸುತ್ತಿರುವುದು ಅಡಿಕೆ ಜಗಿತ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಆಧಾರ ರಹಿತ ಅಪಪ್ರಚಾರ, 2018 ರಲ್ಲಿ ಇಂಡಿಯನ್ ಸೆಂಟರ್ ಆಫ್ ಅರೆಕನಟ್ ರೀಸರ್ಚ್, ಸೆಂಟ್ರಲ್ ಪ್ಲಾಂಟೇಶನ್ ರೀಸರ್ಚ್ ಸೆಂಟರ್ ಆಫ್ ಇಂಡಿಯಾ ಜೊತೆಯಲ್ಲಿ ದಿ ಅರೆಕನಟ್ ರೀಸರ್ಚ್ ಆಂಡ್ ಡೆವಲ್ಪಮೆಂಟ್ ಫೌಂಡೇಶನ್ ಆಡಿಕೆ ಪ್ರಿಯರ ಮೇಲೆ ನಡೆಸಿದ ಪ್ರಯೋಗ ಸಂಶೋಧನೆಗಳಿಂದ ಅಡಿಕೆ ಆರೋಗ್ಯಕ್ಕೆ ಸರ್ವಶ್ರೇಷ್ಠವೆಂದು ನಂಬಿಕೆ ತರಿಸಬಲ್ಲುದು ಎನ್ನಬಹುದು. ಆದರೆ, ಈ ಮಾಹಿತಿಯನ್ನು ಬಳಕೆದಾರರ ಮನ ಮುಟ್ಟಿಸುವಲ್ಲಿ ನಾವು ಸಫಲವಾಗಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಸಾಂಪ್ರದಾಯಿಕವಾಗಿ ಎಲೆಯಡಿಕೆ ಸವಿಯುವುದು ಮಾನವ ಜನಾಂಗದ ಆರೋಗ್ಯಕ್ಕೆ ಒಳ್ಳೆಯದೆಂದು ಅರಿವು ಮೂಡಿಸುವ ಪ್ರಯತ್ನಗಳೂ ನಡೆದಿವೆ.
ಅಡಿಕೆ ಬೆಳೆಗೆ ಭಾರತ ದೇಶ ಹೆಸರಾಗಿದೆ. ಜೊತೆಗೆ ಇಂಡೋನೇಷ್ಯಾ, ಚೀನಾ, ಮಯನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್, ಮಲೇಷ್ಯಾ ದೇಶಗಳೂ ಅಡಿಕೆ ಬೆಳೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿವೆ. ಜಾಗತಿಕ ಆರೋಗ್ಯ ಸಂಸ್ಥೆ ಲೆಕ್ಕಾಚಾರದಂತೆ ಸುಮಾರು 60 ಕೋಟಿ ಅಡಿಕೆ ಬೆಳೆ ಬೆಂಬಲಿಗರಿದ್ದಾರಂತೆ. ಹಾಗೆಯೇ ಎಲೆಅಡಿಕೆ ಸವಿಯುವುದು ಸಾವಿರಾರು ವರ್ಷಗಳಿಂದ ಈ ಪ್ರದೇಶದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ ಕೂಡಾ ಹೌದು. ಸುಣ್ಣ ಬಳಿದ ಎಲೆಯೊಂದಿಗೆ ಆಡಿಕೆ ಇಟ್ಟು ಬಾಯಿ ತುಂಬಾ ಜಗಿದು ಸವಿಯುವುದರ ಮಜಾ, ಬಳಕೆದಾರರಿಗೆ ಚೆನ್ನಾಗಿ ಗೊತ್ತು. ಅದರ ಹೆಸರೇ ವೀಳ್ಯದೆಲೆ- ಸವಿದು ಸಾಮಾಜಿಕವಾಗಿ ಸಂಭ್ರಮಿಸುವುದೆಂದು ಈ ರುಚಿಗೆ ಕಾರ್ಡಮಮ್, ಲವಂಗ, ಮೆಂಥಾಲ್, ತೆಂಗಿನತುರಿ, ಸಾಫ್ರನ್ ಇತ್ಯಾದಿ ಲವಲವಿಕೆಯ ಸೇರ್ಪಡೆಗಳೂ ಇವೆಯಂತೆ.
ಸಾಮಾಜಿಕ ಸಮಾರಂಭಗಳಲ್ಲಿ, ಮನೆಗೆ ಯಾರಾದರೂ ಅತಿಥಿ ಅಭ್ಯಾಗತರು ಬಂದಾಗ ಸಂಭ್ರಮಿಸುವುದರಲ್ಲಿ ಎಲೆ ಅಡಿಕೆಗೆ ಮರ್ಯಾದೆ ಪಟ್ಟವೂ ಸೇರಿದೆ. ಮಕ್ಕಳು ತಿನ್ನಬಾರದೆಂದು ಹಿರಿಯರು ಎಚ್ಚರಿಸಿದರೂ ಎಳೆಯರೂ ಸವಿಯುತ್ತಾರೆಂದು ಎಲ್ಲಾ ಮನೆಗಳ ಅಜ್ಜಮ್ಮಂದಿರುಗಳಿಗೆ ಚೆನ್ನಾಗಿ ಗೊತ್ತಿರುತ್ತದೆ.
(ಮುಂದುವರಿಯುವುದು....)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ