ಖಾರ ಮಸಾಲೆ: 'ಹೊಡಿ ಒಂಭತ್ತs.... ಬಂಡೆ ಬಡಾ ಸ್ಕೆಚ್'

Upayuktha
0


'ಏನೈತಿ ಹೊಸಾದು ಬೋಲ್' ಕೇಳಿದ ಬಾಶಾ

'ಅರೇ ಇವ್ನ ಹೇಂತಿ, ಏನs ಹೊಟೇಲದಾಗ ಕೇಳಿದಂಗ ಕೇಳತೈತಲಾ ಇದು?' ಎಂದ ಡುಮ್ಯಾ

'ಅರೇ ನಾ ಏನು ಕೇಳಬಾರದು ಕೇಳಿನಿ ಡುಮ್?' ಎಂದ ಬಾಶಾ

'ಹೊಟೇಲಕ ಹೋಗಿ ಏನೇನೈತಿ ಬಿಸಿದು?' ಅಂತ ಕೇಳ್ದಂಗ ಆತು ನನಗ' ಎಂದ ಕಾಳ್ಯಾ

'ಅಲ್ಲಲೇ ನನಗ ಡುಮ್ ಅಂತ ಯಾಕ ಅಂದಿ?' ಎಂದ ಡುಮ್ಯಾ

'ಅಲ್ಲಲೇ, ಎಂಥಾ ಮಳ್ಳ ಗಿರಾಕಿ ಅದಿಯಲೇ ನೀ?' ಎಂದ ಟುಮ್ಯಾ

'ಯಾಕ? ಏನಾತು?'


'ಅಲ್ಲಾ ನಿನ್ನ ಹೆಸರ ಡುಮ್ಯಾ ಅಂತ ಐತಿ, ಅಂವಾ ನಿಂಗ ಡುಮ್ ಅಂತ ಅಂದಾನು, ಏನಾತು? ಬರೋಬ್ಬರಿ ಐತೇಲಾ?' ಎಂದ ಟುಮ್ಯಾ

'ಅಲ್ಲಾ ನೀ ಇಷ್ಟ ತಿಳುವಳಿಕೆ ಹೇಳ್ತಿದಿ, ನಿನ್ನ ಹೆಸರ ಟುಮ್ಯಾ ಅಂತೈತಿಲ್ಲ, ನಿನಗ ಟುಮ್ ಅಂದ್ರs ಹ್ಯಾಂಗ ಆಕೈತಿ ಹೇಳು?' ಎಂದ ಡುಮ್ಯಾ

'ಏನ ಆಕೈತಿ ಏನೂ ಆಗಂಗಿಲ್ಲ, 'ಮ್ಯಾಕ್ಸ್' ಅಂತ ಕರದಂಗ ಆಕೈತಿ' ಎಂದ ಟುಮ್ಯಾ

'ಅಬಬಬಾs....ಹೋಗಿ ಹೋಗಿ 'ಕಿಚ್ಚ' ನ ಲೇವಲ್ಕ ಸ್ಕೆಚ್ ಹಾಕಿ ಕುಂತಾನ ಮಗಾ' ಎಂದು ನಕ್ಕ ಧಡಂಧುಡಕಿ

'ಈಗ ಇಂವಾ ಧಡಂಧುಡಕಿ ಇದ್ದಾನ ನೋಡು, ಇಂವಾ ಏನು ಧಡಂಧುಡಕಿ ಇರತೈತೆಲಾ, ಹಂಗ ಮ್ಯಾಲ ಕೆಳಗ ಜಿಗತಾ ಕೊಡ್ತಾನೇನು?' ಕೇಳಿದ ಸ್ಪೀಡ ಬ್ರೇಕರ್


'ನೀನೂ ಮತ್ತs ಸ್ಪೀಡ ಬ್ರೇಕ್ ಹಾಕ್ಕಿದೇನು?' ಕೇಳಿದ ಚಪ್ಪಾಳೆ

'ನೀ ಯಾವಾಗ್ಲೂ ಚಪ್ಪಾಳೆ ತಟ್ಟತಿ ಏನು?' ಕೇಳಿದ ಕಬ್ಬಿಣ

'ಅಲ್ಲಾ ನೀ ಅರೇ ಸೊಟ್ಟ ಕಟಗಿ ಇದ್ದಂಗ ಅದಿದಿ, ನಿಂಗ ಕಬ್ಬಿಣ ಅಂತ ಯಾವ ಇಟ್ಟಾನಲೇ ಹೆಸರ?' ಕೇಳಿದ ಟಕಳ್ಯಾ

' ಎಲ್ಲಾರಕಿಂತ ಬೆಸ್ಟ್ ಅಂದ್ರs ನೀನೇ ನೋಡು ಹೆಸರಿಗೆ ತಕ್ಕ ಟಕಳ್ಯಾ' ಎಂದು ಜೋರಾಗಿ ನಕ್ಕ ರಬಡ್ಯಾ

'ತಂದೆಗೆ ತಕ್ಕ ಮಗ' ಅಂತ ಇದ್ದಂಗs ಏs 'ಟಕಳ್ಯಾಗೆ ತಕ್ಕ ಟಕಳ್ಯಾ' ಹೈ ಕ್ಯಾ?' ಎಂದ ಬಾಶಾ ಜೋರಾಗಿ ನಕ್ಕೊಂತ

'ಎಲ್ಲಾ ನಿನ್ನಿಂದs ಶುರು ಆಗಿದ್ದು, ಚುಪ್ ಬೈಟ್' ಎಂದ ಡುಮ್ಯಾ


'ಹೆಸರಿಗೆ ತಕ್ಕಂಗ ಇರಬೇಕಂದ್ರs ಬಂಡೆ ಇದ್ದಂಗ ಇರಬೇಕು ನೋಡು' ಎಂದಳು ರಾಶಿ

'ಹ್ಯಾಂಗ ಯಕ್ಕಾ? 'ಕೇಳಿದ ಟಕಳ್ಯಾ

'ಈಗ ನೋಡು, ಅಲುಗಾಡದ 'ಬಂಡೆ' ಆಗೈತಿ ಅದು' ಎಂದ ಡುಮ್ಯಾ

'ಕುಂಭಮೇಳಕ್ಕ ಹೋಗಿ ಮುಳುಗ ಹಾಕಿ, ಕೊಯಮುತ್ತುರಿಗಿ ಒಂದು ರೌಂಡ್ ಹೊಡದ ಬಂದು ಕುಂತತಿ ನೋಡು' ಎಂದ ಟುಮ್ಯಾ

'ಅಲ್ಲಿ 'ಶಾಣ್ಯಾ'ನ್ನ ಭೆಟ್ಯಾಗಿ ಇಡೀ ರಾತ್ರಿ ಕುಂತು ಬಂತು ನೋಡು' ಎಂದಳು ರಾಶಿ


'ಇಲ್ಲಿ 'ಕೈ' ಶೇಕ್ ಆಗಾಕ ಶುರು ಆಯ್ತು ಗಡಗಡ ಅಂತ' ಎಂದ ರಬಡ್ಯಾ

'ಈ ಟಗರು ತನ್ನ ಆಸಾಮಿಗಳ್ನ ಬಿಟ್ಟು ಕುರ್ಚಿ ಖಾಯಂ ತನ್ನದೇ ಅಂತ ಗಾಲಿಕುರ್ಚಿ ಮ್ಯಾಗ ಕುಂತು ಪೋಜ್ ಕೊಡಾಕ್ಹತ್ತಿತ್ತು, ಈಗ ನೋಡು ಹ್ಯಾಂಗಾತು!' ಎಂದ ಕಾಳ್ಯಾ

'ಅರೇ ಹೋ ಸಾಂಬಾ, ಆಗೇ ಕ್ಯಾ ಹೋತಾ ಹೈ?' ಎಂದ ಬಾಶಾ

'ಏನಿಲ್ಲ ಇವರಿಗೆಲ್ಲಾ ಸಾಂಬಾರನೇ ಖಾಯಂ ಮಾಡಬೇಕಂತ ಮಾಡೇತಿ ಅಂತ ಕಾಣ್ತೈತೆ' ಎಂದ ಕಾಕಾ

'ಕಮಲಕ್ಕಗ ಹೊಗಳಿ ಸಾಫ್ಟ್ ಹಿಂದೂ ಕಾರ್ನರ್ ಜಪಿಸಿ, ಕರುನಾಡಿನ ಏಕನಾಥ ಶಿಂಧೆ ಆಗಂಗ ಐತಿ' ಎಂದ ಸ್ಪೀಡ ಬ್ರೇಕರ್

'ಏಕನಾಥನೋ ದೋ ನಾಥನೋ ಆಗ್ಲಿ, ಆದ್ರs ಇಲ್ಲಿ ಮರಿಸಿಟ್ಟೂರಿ ಆ್ಯಂಡ ಹಿಂಹುಲಿ ಇಷ್ಟ ದಿನ ಬಡದಾಡಿದ್ದು, ವೇಸ್ಟ್ ಆತಲ್ಲಾ?' ಎಂದಳು ರಾಶಿ


'ಅದಕ್ಕೆ ಹೇಳಿಲ್ಲಾ, ಎಲ್ಲಾರೂ ಮಾಡೂದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಂತ' ಎಂದ ಕಾಕಾ

'ಹಂಗಲ್ಲ ಅದು, 'ಎಲ್ಲಾರೂ ಮಾಡೂದು ಕುರ್ಚಿಗಾಗಿ ಸಿಎಂ ಕುರ್ಚಿಗಾಗಿ' ಅಂತ ಈಗ ಹೊಸಾದು ಆಗೇತಿ' ಎಂದಳು ರಾಣಿ

'ಈಗಲ್ಲ ಅದು ಎಲ್ಲಾರೂ ಕಾಲದಿಂದಾನೂ ಇದೇ ಪರಂಪರೆ ಬಂದೈತಿ, ಆಡಳಿತಾರೂಢರೂ & ಭಿನ್ನಮತಿಯರು ಅಂತ' ಎಂದ ಚಪ್ಪಾಳೆ

'ಹೊಡಿರಿ ಚಪ್ಪಾಳೆ' ಅಂತ ನಕ್ಕ ಗುಡುಮ್ಯಾ

'ನನಗ ಯಾಕ ಹೊಡಿತಿರಿ?' ಕೇಳಿದ ಚಪ್ಪಾಳೆ ರೇಣುನಂತೆ ಮುಖ ಮಾಡಿ

'ಏs ನೀ ಭಾರಿ ಮಾತ ಹೇಳಿದ್ದಕ್ಕ ಹೊಡಿರಿ ಎಲ್ಲಾರೂ ಚಪ್ಪಾಳೆ ಅಂದಿನಲೇ 'ಚಪ್ಪಾಳೆ', ನೀ ಯಾಕ ಗಾಭರಿ ಆಗಿದಿ?' ಎಂದ ಗುಡುಮ್ಯಾ

'ಅದ್ಕೆ ಈಗ ಮತ್ತs ಗ್ಯಾರಂಟಿ ಜಪ ಮಾಡಕತ್ತತೇನs ಟಗರು?' ಕೇಳಿದ ಕಾಕಾ

'ಟಗರು, ಕರದಂಟು, ಬಿಳಿ ಮೀಸಿ ರಾಜಾ, ಶಿವಪ್ಪ ಕಾಯೋ ತಂದೆ.......ಎಲ್ಲಾರೂ ಕುಂಭಮೇಳದ ಜನಸಾಗರದಂಗ ಗರ್ಜನೆ ಶುರು ಮಾಡ್ಯಾರ' ಎಂದ ಕಂದಿಲ


'ಇಂವಾ ಯಾವಲೇ ತಮ್ಮಾ? ಹೊಸಾ ಮೆಂಬರು?' ಕೇಳಿದ ಕಾಕಾ

'ಇಂವಾ 'ಕಂದಿಲು' ಅಂತ ಹೇಳಿ ಕಾಕಾ, ಇವನ ಪ್ಲಾನೇ ಈಗ ವರ್ಕೌಟ ಆಗಕಂತೈತಿ' ಎಂದ ಟಕಳ್ಯಾ

'ಮತ್ತs ಅಲ್ಲಿ ಕುರ್ಚಿ ಬಂಡೆಗ ರೇಡಿ ಮಾಡೂದು ಬಿಟ್ಟು ಇಲ್ಯಾಕ ಬಂದೈತಿ?' ಕೇಳ್ದ ಕಾಕಾ

'ಇಲ್ಲಿ ನೀವೆಲ್ಲಾ ಭಾಳ ಬುದ್ದಿವಂತರದಿರಲಾ, ಅದಕ್ಕ ನಿಮ್ಮ ಕಡೆ ಹೊಸ ಹೊಸ ಐಡಿಯಾ ತೊಗೊಂಡು ಹೋಗಾಕ ಬಂದಾನ ಕಂದಿಲು' ಎಂದ ಟಕಳ್ಯಾ


'ನಿನ್ನ ತೆಲಿ 'ಸಾಫ್' ಐತೆಲಾ ನೀ ಒಬ್ಬಾಂವ ಸಾಕು ಅವನಿಗೆ ಹೊಸಾ ಪ್ಲ್ಯಾನ ತಿಳಿಸಾಕ' ಅಂತ ನಕ್ಕ ಧಡಂಧುಡಕಿ

'ಮತ್ತ ನನ್ನ ತೆಲಿಗೇ ಬಂದ್ರೆಲಾ ನೀವು, ನನ್ನ ಬೆಲೆ ಒಂದಿಲ್ಲಾ ಒಂದ ದಿನಾ ಗೊತ್ತಾಕೈತಿ ನಿಮಗೆಲ್ಲಾ' ಅಂತ ರೊಚ್ಚಿಗೆದ್ದ ಟಕಳ್ಯಾ

'ಇರಲಿ ತಗೋ ಯಾಕ ಗರಂ ಆಕ್ಕಿದಿ, ಮೊದಲೇ ಬಿಸಿಲು ಏರಕತೈತಿ, ಅದರ ಮ್ಯಾಲ ನಿನ್ನ 'ತಗಿ ನಿನ್ನ ತಾಂಬರs ತಂಬೂರಿ ಬಿಡದೇ ಬಾರಿಸುತಿಹ ತಂಬೂರಿ!' ಎಂದು ನಕ್ಕ ಗುಡುಮ್ಯಾ

'ಇರಲಿ ನಡ್ರಿ ಎಲ್ಲಾರೂ, ಕನ್ನಡಕೆ ಹೋರಾಡು ಕನ್ನಡದ ಕಂದ ಗೋಟಾಳು, ಕರುನಾಡು ಬಂದ್ ಮಾಡಾಕ ಹತ್ಯಾನ, ನಾವು ಅವರಿಗಿ ಕೈ ಜೋಡಸೂಣು ಬರ್ರಿ' ಎಂದಳು ರಾಣಿ


'ಈ 'ಝಾಲಾಚಾ ಪಾಹೀಜೆ'ಗಳದು, ಈ ಬೆಳಗಾವಿ ಪುಂಡರದು ಹಾವಳಿ ಸದಾ ಇದ್ದೇ ಇರತೈತಿ ನೋಡು' ಎಂದ ಡುಮ್ಯಾ

' ಎಲ್ಲಾ ಓಟಿಗಾಗಿ ಕುಮ್ಮಕ್ಕು ಕೊಡ್ತಾರs ಅದ್ಕೆ ಹಿಂಗಾಕೈತಿ' ಎಂದ ಕಾಳ್ಯಾ

'ಕೂಸಿನ್ನ ಅಳಸವರು ಇವರೇ,ಆಮ್ಯಾಕ ತೊಟ್ಟಲಾ ತೂಗವರು ಇವರೇ!' ಎಂದ ಕಾಕಾ

'ನಡಿರಿ ಮತ್ತ ಎಲ್ಲಾರೂ ಸೇರಿ ಗೋಕಾಕ ಚಳುವಳಿ ಮಾಡುಣು' ಎಂದಳು ರಾಶಿ

'ಎಲ್ಲಾರೂ ನಾ ಹೇಳಿದಂಗ ಘೋಷಣೆ ಕೂಗ್ರಿ,'ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ' ಅಂತ ರಬಡ್ಯಾ ಹೇಳಿದಂಗ, ಜೋರಾಗಿ ಘೋಷಣೆ ಹಾಕ್ತಾ ಹೊಂಟರೆಲ್ಲರೂ ರಾಜಧಾನಿ ಕಡೆಗೆ


- ಶ್ರೀನಿವಾಸ ಜಾಲವಾದಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top