ಈಡಿಗ ನಿಗಮದ ಬಗ್ಗೆ ಧ್ವನಿ ಎತ್ತಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಗೆ - ಸ್ವಾಮೀಜಿ ,ಈಡಿಗ, ಬಿಲ್ಲವರಿಂದ ಅಭಿನಂದನೆ

Upayuktha
0



ಕಲಬುರಗಿ: ವಿಧಾನಸಭೆಯಲ್ಲಿ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳಿರುವ ಸಮಾಜಕ್ಕೆ ರಾಜ್ಯ ಸರಕಾರದಿಂದ ಅನ್ಯಾಯವಾಗಿದ್ದನ್ನು ಖಂಡಿಸಿ ಈ ಸಮಾಜವನ್ನು ರಾಜ್ಯಸರ್ಕಾರ ಅಪಮಾನ ಮಾಡಿರುವುದನ್ನು ನೋಡಿ ಸಹಿಸಿಕೊಳ್ಳಲಾಗದೆ ಶಾಸಕರಾದ ಸುರೇಶ್ ಶೆಟ್ಟಿಯವರು ದ್ವನಿ ಎತ್ತಿರುವುದಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯ ಡಾ. ಪ್ರಣವಾನಂದ ಶ್ರೀಗಳು ಹಾಗೂ ಈಡಿಗ ಬಿಲ್ಲವ ನಾಯಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.


ಮಾರ್ಚ್ 21ರಂದು ಬೆಂಗಳೂರಿನಲ್ಲಿರುವ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಮನೆಗೆ ತೆರಳಿದ ಚಿತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಗುರುಗಳಾದ ಡಾ. ಪ್ರಣವಾನಂದ ಶ್ರೀಗಳು ತೆರಳಿ ಸಮಾಜದ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.  ಈಡಿಗ, ಬಿಲ್ಲವ ನಾಮಧಾರಿ ಸಮಾಜದ ಪರವಾಗಿ ಕ್ರತಜ್ಞತೆಯನ್ನು ಸಲ್ಲಿಸಿ ಸನ್ಮಾನಿಸಿದರು.


ಈ ಸಮಯದಲ್ಲಿ  ರಾಷ್ಟ್ರೀಯ ಈಡಿಗ  ಮಹಾಮಂಡಳಿಯ ಅಧ್ಯಕ್ಷರಾದ ಡಾ ಮಂಚೇ ಗೌಡ, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಬಹರೈನ್ ದೇಶದ ಉಸ್ತುವಾರಿಯಾದ ಶಿವ ಪ್ರಸಾದ್ ಉಪಸ್ಥಿತರಿದ್ದರು.


ಕೋಟಾ ಬೇಕು ಸ್ಪಂದನೆ ಇಲ್ಲ: ಸ್ವಾಮೀಜಿ ಆಕ್ರೋಶ

ಈಡಿಗ ನಿಗಮ ಸ್ಥಾಪನೆಯಾಗಿ ಮೂರು ವರ್ಷ ಸಂದರೂ ಅನುದಾನ ಬಿಡುಗಡೆಯಾಗದೆ ನಿರ್ಲಕ್ಷ್ಯ ವಹಿಸಿರುವಂಥದ್ದು  ಖಂಡನೀಯ. ಈಡಿಗ ಬಿಲ್ಲವ ಸಮುದಾಯದಿಂದ ಆಯ್ಕೆಯಾದವರು ಈ ಬಗ್ಗೆ ಚಕಾರ ಎತ್ತದೆ ಮೌನವಹಿಸಿರುವುದು ಸಮಾಜಕ್ಕೆ ಮಾಡಿದ ದ್ರೋಹವಾಗಿದೆ. ಆಡಳಿತ ಮತ್ತು ವಿರೋಧ ಪಕ್ಷದಲ್ಲಿರುವ ಸಮುದಾಯದ ಶಾಸಕರುಗಳಿಗೆ ಸ್ವಾಭಿಮಾನ ಇಲ್ಲದೆ ಹೋಗಿರುವುದು ಬಹಳ ದೊಡ್ಡ ದುರಂತವಾಗಿದೆ. 


ಚುನಾವಣೆ ಬಂದಾಗ  ಸಮಾಜದ ಕೋಟಾ ಮತ್ತು ಓಟು ತೆಗೆದುಕೊಂಡು ಶಾಸಕರು ಮತ್ತು ಮಂತ್ರಿಗಳಾಗಿರುವವರು ಧ್ವನಿ ಎತ್ತದೆ ಇರುವುದು ಈ ಸಮಾಜಕ್ಕೆ ಮಾಡಿರುವ ಬಹಳ ದೊಡ್ಡ ಅನ್ಯಾಯ ಎಂದು ಡಾ. ಪ್ರಣವಾನಂದ ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸಮುದಾಯದ ಹಿತ ದೃಷ್ಟಿಯಿಂದ ಧ್ವನಿ ಎತ್ತಿದಾಗಲೂ ಸಮುದಾಯದಿಂದ ಆಯ್ಕೆಯಾದ ಶಾಸಕರು ತುಟಿ ಬಿಚ್ಚದಿರುವುದು ವಿಷಾದನೀಯ ಸಂಗತಿ ಎಂದು ಅವರು ಹೇಳಿದರು. 


ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಈಡಿಗ ಬಿಲ್ಲವ ನಾಮಧಾರಿಗಳ ಪರವಾಗಿ ಧ್ವನಿ ಎತ್ತಿ ಸರಕಾರದ ಗಮನ ಸೆಳೆದ ಅವರ ಕಾಳಜಿಗೆ ಈಡಿಗ ನಾಯಕರಾದ ಮಹಾದೇವ ಗುತ್ತೇದಾರ್, ಕುಪೇಂದ್ರ ಗುತ್ತೇದಾರ್, ರಾಜೇಶ್ ಡಿ. ಗುತ್ತೇದಾರ್ ಸುರೇಶ್ ಗುತ್ತೇದಾರ್ ಮಟ್ಟೂರ್ , ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಡಾ. ರಾಜಶೇಖರ್ ಸೇಡಂಕರ್,ವೆಂಕಟೇಶ್ ಗುಂದಾನೂರ್ ಯಾದಗಿರಿ, ಸೋಮರಾಯ ಶಾಖಾಪೂರ,ಶ್ರೀನಿವಾಸ್ ಸುರಪುರ, ಶರಣಯ್ಯ ಗುತ್ತೇದಾರ್ ತಿಮ್ಮಪ್ಪ ಗಂಗಾವತಿ, ಅನೀಶ್ ಕಡೇಚೂರ್ ಹಾಗೂ ಬಿಲ್ಲವ ಸಮುದಾಯದ ಡಾ. ಸದಾನಂದ ಪೆರ್ಲ, ಪ್ರವೀಣ್ ಜತ್ತನ್, ಸಂತೋಷ್ ಪೂಜಾರಿ ದಯಾನಂದ ಪೂಜಾರಿ,ಸುದರ್ಶನ್ ಜತ್ತನ್ ಸತ್ಯಾನಂದ ಪೂಜಾರಿ, ಕಿರಣ್ ಜತ್ತನ್ ಮತ್ತಿತರರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top