ರೋಗದ ಲಕ್ಷಣಗಳು:
ತೀವ್ರ ಜ್ವರ, ಶೀತ, ತಲೆನೋವು, ಬಾಯಿ,ಮೂಗು, ಕಫದಲ್ಲಿ ರಕ್ತಸ್ರಾವ, ಮೈ ಕೈ ನೋವು, ಪಿತ್ತ ಕಾಮಾಲೆ (ಜಾಂಡೀಸ್), ಸ್ನಾಯು ನೋವು, ಕಣ್ಣುಗಳು ಕೆಂಪಾಗುವುದು, ವಾಂತಿ, ಹೊಟ್ಟೆ ನೋವು, ಭೇದಿ ಇತ್ಯಾದಿ. ತೀವ್ರತರವಾದ ಪ್ರಕರಣಗಳಲ್ಲಿ ಎದೆ ನೋವು ಮತ್ತು ತೋಳುಗಳು ಮತ್ತು ಕಾಲುಗಳು ಊದಿಕೊಳ್ಳುವುದು ಕಂಡುಬರುತ್ತದೆ. (ಹೃದಯದಲ್ಲಿ ಸೊಂಕು) ಮೂತ್ರಪಿಂಡ ಸೋಂಕಿನಿಂದಾಗಿ ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾಗುವುದು ಅಥವಾ ನಿಂತು ಹೋಗುವುದು.
ರೋಗಕ್ಕೆ ಹೆಚ್ಚಾಗಿ ತುತ್ತಾಗುವವರು:
ಕೃಷಿಕರು, ಕೂಲಿಕಾರ್ಮಿಕರು, ಗಣಿ ಕೆಲಸಗಾರರು, ಕಸಾಯಿಖಾನೆ ಕೆಲಸಗಾರರು, ಹೈನುಗರಿಕೆಯಲ್ಲಿ ತೊಡಗಿಸಿಕೊಂಡವರು, ಪೌರ ಕಾರ್ಮಿಕರು ನಗರ/ಒಳ ಚರಂಡಿ ನೈರ್ಮಲ್ಯಕಾರ್ಮಿಕರು.
ಮುಂಜಾಗ್ರತಾ ಕ್ರಮಗಳು:
ಆಹಾರ ಮತ್ತು ನೀರನ್ನು ಯಾವಾಗಲೂ ಮುಚ್ಚಿದ ಪಾತ್ರೆಗಳಲ್ಲಿ ಇರಿಸುವುದು. ಆಹಾರ ಪದಾರ್ಥಗಳು, ಹಣ್ಣು ತರಕಾರಿಗಳನ್ನು ಇಲಿಗೆ ಸಿಗದಂತೆ ಇಡುವುದು.
ಮನೆ, ಗೋದಾಮು, ಅಂಗಡಿ, ಚರಂಡಿ, ಹೊಲ, ಗದ್ದೆ ಪರಿಸರದಲ್ಲಿ ಇಲಿಗಳು ವಾಸ ಮಾಡದಂತೆ ನೋಡಿಕೊಳ್ಳುವುದು.
ಇಂತಹ ಪ್ರಾಣಿಗಳು ಇರಬಹುದಾದ ವಾಸಸ್ಥಳಗಳಲ್ಲಿ ಬರಿಗಾಲಿನಲ್ಲಿ ಒಡಾಡದೆ ಚಪ್ಪಲಿ ಧರಿಸಿ ನಡೆಯುವುದು.
ಕೊಳ, ಹೊಂಡ, ನಿಂತ ನೀರಿನಲ್ಲಿ ಸ್ನಾನ ಮಾಡಬಾರದು ಹಾಗೂ ಆ ನೀರನ್ನು ಸೇವಿಸಬಾರದು.
ಇಲಿಯ ಸಂತಾನ ವೃದ್ಧಿಯಾಗದಂತೆ ಬಿಲ, ಕಿಂಡಿಗಳನ್ನು ಮುಚ್ಚಬೇಕು.
ಸ್ನಾನ ಮತ್ತೆ ಕುಡಿಯುವ ನೀರಲ್ಲಿ ಪ್ರಾಣಿಗಳ ಮೂತ್ರ ಸೇರದಂತೆ ನೋಡಿಕೊಳ್ಳುವುದು.
ಈ ರೋಗ ಹರಡುವುದನ್ನು ನಿಯಂತ್ರಿಸಲು ಮನೆ ಮತ್ತು ಸುತ್ತಮುತ್ತ ಸ್ವಚ್ಛತೆ ಅತ್ಯಗತ್ಯ.
ಕಲುಷಿತ ನೀರಿನಲ್ಲಿ ಈಜುವುದನ್ನು ಅಥವಾ ನಡೆಯುವುದನ್ನು ತಪ್ಪಿಸುವುದು.
ಸೋಂಕಿತ ಪ್ರಾಣಿಗಳ ಸಂಪರ್ಕವನ್ನು ತಪ್ಪಿಸುವುದು.
ಚಿಕಿತ್ಸೆ:
ಇಲಿಜ್ವರಕ್ಕೆ ನಿರ್ದಿಷ್ಟ ಔಷಧಿ ಮತ್ತು ಚಿಕಿತ್ಸೆ ಲಭ್ಯವಿದೆ. ಶೀಘ್ರ ಪತ್ತೆ ಮಾಡಿದರೆ, ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ರೋಗಿಯನ್ನು ಇತರರಿಂದ ಪ್ರತ್ಯೇಕಿಸುವ ಅಗತ್ಯವಿಲ್ಲ.ಇದು ಸೋಂಕಿತ ರೋಗಿಯಿಂದ ಆರೋಗ್ಯವಂತರಿಗೆ ಹರಡುವುದಿಲ್ಲ. ಯಾವುದೇ ಲಕ್ಷಣಗಳು ಕಂಡುಬಂದರೆ, ದಯವಿಟ್ಟು ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ.
- ಡಾ. ರೇಷ್ಮಾ ಭಟ್
ಸಾಂಕ್ರಾಮಿಕ ರೋಗ ತಜ್ಞೆ, ಬೆಳ್ತಂಗಡಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ