ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 & 2, ರೋವರ್ಸ್ ಆಂಡ್ ರೇಂಜರ್ಸ್ ಘಟಕ, ಭಾರತೀಯ ಯುವ ರೆಡ್ ಕ್ರಾಸ್, ನಿಮ್ಹಾನ್ಸ್ ಬೆಂಗಳೂರು ಮತ್ತು ಯುವ ಸ್ಪಂದನ ದ.ಕ ಇದರ ಜಂಟಿ ಆಶ್ರಯದಲ್ಲಿ ಇಂದು (ಮಾ.11) "ಒಂದು ದಿನದ ಜೀವನ ಕೌಶಲ್ಯ ತರಬೇತಿ" ಕಾರ್ಯಕ್ರಮವನ್ನು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಯುವ ಸ್ಪಂದನ ದ.ಕ ದ ಜೀವನ ಕೌಶಲ್ಯ ತರಬೇತಿದಾರ ಶ್ರೀಕಾಂತ್ ಪೂಜಾರಿ ಬಿರಾವು, ಮತ್ತು ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಪ್ರೊ. ಸಂತೋಷ್ ಪ್ರಭು ಎಂ. ಹಾಗೂ ಡಾ. ಗೀತಾ ಎಂ. ಎಲ್., ಇವರುಗಳು ಜೀವನದ ಕೌಶಲ್ಯದ ಬಗ್ಗೆ ತರಬೇತಿ ನೀಡಿದರು. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಹಾಗೂ ನಮ್ಮ ಜೀವನದ ಕೌಶಲ್ಯ ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ತಿಳಿಸಿಕೊಟ್ಟರು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಚಟುವಟಿಕೆ ಮಾಡುವುದರ ಮೂಲಕ ಜೀವನದ ಕೌಶಲ್ಯವನ್ನು ತಿಳಿಸಿಕೊಟ್ಟರು.
ಪ್ರೊ. ಮಾಧವ ಎಂ., ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ಆಂಜನೇಯ ಎಂ ಎನ್ ಮತ್ತು ರೋವರ್ಸ್ ಆಂಡ್ ರೇಂಜರ್ಸ್ ಸಂಚಾಲಕರಾದ ಪ್ರೊ. ಸುಮ ಸಿ ಸಿ, ಡಾ. ವೈಶಾಲಿ ಯು ಮತ್ತು ಪ್ರೊ. ಸೋಮಲಿಂಗ ವಿಠ್ಠಲ್ ಕಟ್ಟಿಮನಿ, ವೈ ಆರ್ ಸಿ ಸಂಚಾಲಕರು, ಡಾ. ಅವಿತಾ ಮರಿಯ ಕ್ವಾಡ್ರೆಶ್ ಸಂಚಾಲಕರು, ಐಕ್ಯೂಎಸಿ, ಡಾ. ಕೀತಿರಾಜ್, ಸಹ ಯೋಜನಾಧಿಕಾರಿ ಎನ್ ಎಸ್ ಎಸ್ ಹಾಗೂ ಬೋಧಕ ಮತ್ತು ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಶ್ರೀಲಕ್ಷ್ಮೀ ದ್ವಿತೀಯ ಬಿಬಿಎ ಇವರು ನಿರೂಪಿಸಿದರು. ಕುಮಾರ ವಿಜಯ್ ದ್ವಿತೀಯ ಬಿಕಾಂ ಸ್ವಾಗತಿಸಿದರು. ಕುಮಾರಿ ರಕ್ಷಿತಾ ದ್ವಿತೀಯ ಬಿಎ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ