ದಾವಣಗೆರೆ: ಚಿಕ್ಕ ವಯಸ್ಸಿನಲ್ಲೇ ಶಿಕ್ಷಣದ ಜತೆಯಲಿ ಭರತನಾಟ್ಯ, ಗಾಯನ, ಯಕ್ಷಗಾನ ವಿವಿಧ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು ವಿವಾಹ ಆದ ಮೇಲೆ ವಿದೇಶಕ್ಕೆ ಹೋಗಿ ಅಲ್ಲಿಯೂ ಕೂಡಾ ಈ ಎಲ್ಲಾ ಕಲೆಗಳನ್ನು ಪ್ರಸ್ತುತ ಪಡಿಸಿ.
ಈ ಎಲ್ಲಾ ಕಲೆಗಳನ್ನು ವಿದೇಶದ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಿರ್ದೇಶನದೊಂದಿಗೆ ತರಬೇತಿ ನೀಡುತ್ತಿರುವ ಸಾಧನೆಗಳನ್ನು ಗುರುತಿಸಿ ವಿದುಷಿ ಆಶಾ ಅಡಿಗ ಆಚಾರ್ಯರವರನ್ನು ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ “ಸರಸ್ವತಿ ಸಾಧಕ ಸಿರಿ” ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕರ್ನಾಟಕ ಕರಾವಳಿ ಜಿಲ್ಲೆಗಳ ಅಪ್ಪಟ ಕನ್ನಡ ಭಾಷೆಯ ಗಂಡುಕಲೆ ಯಕ್ಷಗಾನವನ್ನು ಕನ್ನಡ ನಾಡು, ನುಡಿಗಳನ್ನು ವಿದೇಶಗಳಲ್ಲಿ ವೈಭವೀಕರಿಸಿದ ಆಶಾ ಅಡಿಗರವನ್ನು ಏಪ್ರಿಲ್ 27 ರಂದು ಭಾನುವಾರ ದಾವಣಗೆರೆಯ ಚನ್ನಗಿರಿ ವಿರುಪಾಕ್ಷಪ್ಪ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ವೈಭವಪೂರ್ಣವಾಗಿ ಸನ್ಮಾನಿಸಿ ಗೌರವಿಸಲಾಗುವುದು.
ಕಲಾಕುಂಚ, ಯಕ್ಷರಂಗದ ಅಧ್ಯಕ್ಷರಾದ ಕೀರ್ತಿಶೇಷ ಹೆಸ್ಕುಂದ ಚಂದ್ರಶೇಖರ ಅಡಿಗ, ಕಲಾಕುಂಚ ಮಹಿಳಾ ವಿಭಾಗದ ಪ್ರಥಮ ಅಧ್ಯಕ್ಷೆ ಅಡಿಗ ರವರ ಸುಪುತ್ರಿಯಾದ ಬಹುಮುಖ ಪ್ರತಿಭೆ ಆಶಾ ಅಡಿಗ ಅವರಿಗೆ ಕಲಾಕುಂಚ, ಯಕ್ಷರಂಗ, ಬ್ರಾಹ್ಮಣ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸರ್ವ ಸದಸ್ಯರು ಅಭಿಮಾನದಿಂದ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ