ಎಸ್.ಪಿ.ಎ.ಆರ್; SSLC ವಿದ್ಯಾರ್ಥಿಗಳಿಗೆ “ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿಗೆ ಆಹ್ವಾನ

Upayuktha
0



ದಾವಣಗೆರೆ: ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ ಪ್ರತೀ ವರ್ಷದಂತೆ ಈ ವರ್ಷವೂ 2024-25ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಸಾರ್ವಜನಿಕ ಪರೀಕ್ಷೆಯಲ್ಲಿ ಶೇಕಡ 85% ರಷ್ಟು ಅಂಕ ಪಡೆದ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರ ಮಕ್ಕಳಿಗೆ “ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿಯನ್ನು ಅದ್ದೂರಿಯಾಗಿ ಪ್ರದನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ತಿಳಿಸಿದ್ದಾರೆ. 


2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಬಂದ ಮೇಲೆ ದಾವಣಗೆರೆಯ ಗೌರಮ್ಮ ನರಹರಿ ಶೇಟ್ ಕಲ್ಯಾಣ ಮಂಟಪದಲಿ 2025ನೆ ಜೂನ್ 15 ರಂದು ಭಾನುವಾರ ನಡೆಯಲಿರುವ ಈ ಸಂಭ್ರಮದ ಸಮಾರಂಭದಲ್ಲಿ ನಾಡಿನ ಗಣ್ಯ ಮಾನ್ಯರು ಆಗಮಿಸಲಿದ್ದು ಪ್ರತಿಭಾವಂತ ಮಕ್ಕಳನ್ನು ಮಂಗಳವಾದ್ಯದೊಮದಿಗೆ, ಮುತ್ತೈದೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ಕನ್ನಡ ತಿಲಕವಿಟ್ಟು ಕನ್ನಡಾರತಿ ಬೆಳಗಿ, ವೇದಿಕೆಯಲ್ಲಿ ಪ್ರತ್ಯೇಕವಾದ ಮಂಟಪದ ಸಿಂಹಾಸನದಲ್ಲಿ ಕೂರಿಸಿ ತಲೆಯ ಮೇಲೆ ಕಿರೀಟವಿಟ್ಟು ಅವರದೇ ಭಾವಚಿತ್ರವಿರುವ ತಂದೆ-ತಾಯಿಯವರ ಹೆಸರಿನೊಂದಿಗೆ ಅಭಿನಂದನಾ ಪತ್ರ ವಿತರಿಸಿ ಪುಷ್ಪವೃಷ್ಠಿಯೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು.


ದಿನಾಂಕ 10-05-2025 ರೊಳಗೆ ಪ್ರವೇಶ ಪತ್ರ ಪಡೆದು ಭರ್ತಿ ಮಾಡಿ “ಅರುಣಾ ಜ್ಯೂಯರ‍್ಸ್” #716/2, ಮಂಡಿಪೇಟೆ, ದಾವಣಗೆರೆ-577001. ಈ ವಿಳಾಸಕ್ಕೆ ಕಳಿಸಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೇಮಾ ಅರುಣಾಚಲ ಎನ್.ರೇವಣಕರ್ ತಿಳಿಸಿದ್ದಾರೆ. 


ಹೆಚ್ಚಿನ ಮಾಹಿತಿಗೆ 8147263552, 9341969084, 9481359009 ಈ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ನಿರ್ದೇಶಕರಾದ ನಲ್ಲೂರು ಲಕ್ಷ್ಮಣರಾವ್ ರೇವಣಕರ್ ಮತ್ತು ಗೌರವ ಸಲಹೆಗಾರರಾದ  ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top