ಗದಗ-ಕಳಸಾಪುರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Upayuktha
0



ಗದಗ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಭಾನುವಾರ (ಮಾ.9) ಕಪ್ಪತ್ತಗಿರಿ ಫೌಂಡೇಶನ್ ಕಳಸಾಪೂರ ಗದಗ ಇವರಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರಧಾನ ಸಂಪಾದಕರಾದ ಶ್ರೀಮತಿ ಚಂದ್ರಕಲಾ ಇಟಗಿಮಠ ಅವರ ಸಂಪಾದಕತ್ವದಲ್ಲಿ ಸಂಪಾದಿಸಿದ ಕೃತಿ "ಭೂಮಿ ತೂಕದಾಕೆ" ಎಂಬ ಪುಸ್ತಕ ಬಿಡುಗಡೆ ಸಮಾರಂಭದ ಜೊತೆಗೆ ಹತ್ತು ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.


ಮಹಿಳಾ ಸಮ್ಮೇಳನ, ಮಹಿಳಾ ಗೋಷ್ಠಿ, ಪುಸ್ತಕ ಬಿಡುಗಡೆ, ರಸಪ್ರಶ್ನೆ ಕಾರ್ಯಕ್ರಮದ ಬಹುಮಾನ ವಿತರಣೆ, ಕವಿಗೋಷ್ಠಿ, ಕವಿಗಳಿಗೆ ಸನ್ಮಾನ  ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.


ಸಮ್ಮೇಳನಾಧ್ಯಕ್ಷರನ್ನು ಪೂರ್ಣ ಕುಂಭಗಳೊಂದಿಗೆ  ಮೆರವಣಿಗೆ ನಡೆಸಿ ಸ್ವಾಗತ ಕೋರಲಾಯಿತು. ಮಹಿಳಾ ಸಮ್ಮೇಳನದ ಅಧ್ಯಕ್ಷತೆಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಮತಿ ರತ್ನ. ಗಿ. ಬದಿ ವಹಿಸಿಕೊಂಡಿದ್ದರು. ಚಂದ್ರಕಲಾ ಇಟಗಿಮಠ ಇವರು ಅಧ್ಯಕ್ಷತೆ ವಹಿಸಿದ್ದರು. 


ಮೊದಲು ಶ್ರೀ ಶಾರದಾ ಮಾತೆಯ ಸ್ತುತಿ ಮತ್ತು  ಗಣೇಶ ಸ್ತುತಿ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅನೇಕ ಗಣ್ಯ ವ್ಯಕ್ತಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಶ್ರೀ ಫಕಿರೇಶ್ವರ  ಸ್ವಾಮೀಜಿಗಳು ಉಪಸ್ಥಿತರಿದ್ದು, ಸ್ತ್ರೀ ಕುಲದ ಮಹತ್ವ ತಿಳಿಸಿ ಹೇಳಿ, ಸಮ್ಮೇಳನಕ್ಕೆ ಮೆರೆಗು ತಂದರು. ಗಣ್ಯರಾದ  ಶರದರಾವ ಹುಯಿಲಗೋಳ,  ಅರುಣಾ ನರೇಂದ್ರ, ಅಲ್ಲದೇ ಮುಖ್ಯ ಅತಿಥಿಗಳಾಗಿ  ವಿವೇಕಾನಂದಗೌಡ ಪಾಟೀಲ, ಉಪಸ್ಥಿತರಿದ್ದರು. ಪುಸ್ತಕ ಬಿಡುಗಡೆಯನ್ನು  ಸ್ವಾಮೀಜಿಗಳು ಮತ್ತು ಸಮ್ಮೇಳನಾಧ್ಯಕ್ಷರು ಮತ್ತು ಪುಸ್ತಕ ಮಳಿಗೆ ಉದ್ಘಾಟನೆ ಯನ್ನು ಶ್ರೀ ಪ್ರಭಯ್ಯಾ. ಅಖಿಲ ಭಾರತ ಜಂಗಮ ಸೇವಾ ಸಮಿತಿಯ ಬಸಯ್ಯ್ ದಂಡಾವತಿಮಠ ನೆರವೇರಿಸಿದರು.


ಇದಲ್ಲದೆ ಇನ್ನೂ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಎಲ್ಲರೂ ಇಂದಿನ ಸಮಾಜದಲ್ಲಿ ಹೆಣ್ಣಿಗೆ ಆಗುವ ಶೋಷಣೆ, ಅವಹೇಳನ ಅಲ್ಲಗಳೆದು, ಹೆಣ್ಣುಮಕ್ಕಳು ಮನೆಯ ಆಧಾರಸ್ತಂಭ, ಅವರಿಗೆ ಶಿಕ್ಷಣ ನೀಡಿ ಮುಂದೆ ತರಬೇಕೆಂದರು. 


ಮಧ್ಯಾಹ್ನ ವಿಚಾರ ಗೋಷ್ಠಿ, ಕವಿ ಗೋಷ್ಠಿ,  ಅಲ್ಲದೇ, ರಸಪ್ರಶ್ನೆಯಲ್ಲಿ ಗೆದ್ದ ಶಾಲಾ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕವಿಗೋಷ್ಟಿಯಲ್ಲಿ ಕವಿಗಳು ಹೆಣ್ಣಿನ ಮಹತ್ವ ಸಾರುವ ಕವಿತೆಗಳನ್ನು, ಅವಳ ನೋವು ನಲಿವಿನ ಬಗ್ಗೆ ಕವನ ವಾಚನ ಮಾಡಿದರು.


ಸಂಪಾದಿತ ಕೃತಿ ಭೂಮಿ ತೂಕದಾಕೆ  ಕವನ ಸಂಕಲನದಲ್ಲಿ ತಮ್ಮ ಕವಿತೆ ನೀಡಿದ ಕವಿಗಳೆಲ್ಲರಿಗೂ ಸನ್ಮಾನ ಮಾಡಿದರು. ಒಟ್ಟಿನಲ್ಲಿ ಎಲ್ಲ ತರಹದ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸಿ ಎಲ್ಲ ಜನರಿಗೂ  ಅತ್ಯಂತ ಒಳ್ಳೆಯ ವ್ಯವಸ್ಥೆ ಆಗುವಂತೆ ಮಾಡಿದ್ದು ಪ್ರಶಂಸನೀಯ. ಒಟ್ಟು 140 ಅತ್ಯುತ್ತಮ ಕವಿತೆಗಳನ್ನು ಒಳಗೊಂಡ ಸಂಗ್ರಹ ಯೋಗ್ಯ ಸಂಪಾದಿತ ಕೃತಿ ಇದಾಗಿದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top