ವಿದ್ಯಾಗಿರಿ: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ನಡೆಸಿದ ‘ಶೂಟಿಂಗ್ ಸ್ಟಾರ್ಸ್ 2025 ರಾಷ್ಟ್ರೀಯ ಮಟ್ಟದ ಚಲನಚಿತ್ರ ನಿರ್ಮಾಣ ಮತ್ತು ಸಾಕ್ಷ್ಯಚಿತ್ರ ಸ್ಪರ್ಧೆಯಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜು ಪದವಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಚಾಂಪಿಯನ್ ಆದರು.
ಶೂಟಿಂಗ್ ಸ್ಟಾರ್ಸ್ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗೆ ಭಾಜನರಾದರು.
ಫೋಟೊಗ್ರಪಿ: ಸ್ಪೂರ್ತಿ - (ಪ್ರಥಮ), ಟ್ರೈಲರ್ ಮೇಕಿಂಗ್ : ಸ್ಪೂರ್ತಿ ಮತ್ತು ತಂಡ (ದ್ವಿತೀಯ), ಆರ್.ಜೆ ಹಂಟ್ - ದಿಶಾ (ದ್ವಿತೀಯ), ನ್ಯೂಸ್ ಆ್ಯಂಕರಿಂಗ್ - ರಿಶಾಂತ್ (ಪ್ರಥಮ), ಸ್ವಾತಿ (ದ್ವಿತೀಯ) ಸ್ಥಾನ ಪಡೆದರು.
ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಚರ‍್ಯ ಕುರಿಯನ್ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ