ಉಜಿರೆ: ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸಮುದಾಯ ಬಾನುಲಿ ‘ರೇಡಿಯೋ ನಿನಾದ 90.4 FM’ ಕೇಂದ್ರವು ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಹಕಾರದೊಂದಿಗೆ ಪರೀಕ್ಷೆ ಪೂರ್ವಸಿದ್ಧತೆ ಕುರಿತು ಶೈಕ್ಷಣಿಕ ರೇಡಿಯೋ ಕಾರ್ಯಕ್ರಮ ಸರಣಿ ಸಿದ್ಧಪಡಿಸಿದೆ.
ವಿದ್ಯಾರ್ಥಿಗಳಿಗೆ ಕಲಿಕಾ ಪೂರಕ ಮಾಹಿತಿ, ಸಲಹೆಗಳನ್ನು ನೀಡುವ 40 ನಿಮಿಷಗಳ ಈ ಕಾರ್ಯಕ್ರಮ ಸರಣಿಯು ಫೆ.10 ರಿಂದ ಫೆ.25 ರ ವರೆಗೆ ಪ್ರತಿದಿನ ಮುಂಜಾನೆ 7.30 ಕ್ಕೆ ಪ್ರಸಾರಗೊಳ್ಳಲಿದೆ. ಸಂಜೆ 7.30ಕ್ಕೆ ಮರು ಪ್ರಸಾರಗೊಳ್ಳಲಿದ್ದು, ಆನ್ ಲೈನ್ ಮೂಲಕ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಇದರ ಜೊತೆಗೆ ರೇಡಿಯೋ ನಿನಾದ ಪಾಡ್ ಕಾಸ್ಟ್ ನಲ್ಲಿ ಎಲ್ಲಾ ಸಮಯದಲ್ಲೂ ಲಭ್ಯವಿರಲಿದೆ.
ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳು, ಅಗತ್ಯ ವಿವರಣೆಗಳು, ಗೊಂದಲ ನಿವಾರಣೆ, ಪರೀಕ್ಷಾ ಸಮಯದಲ್ಲಿ ಗಮನಿಸಬೇಕಾದ ಪ್ರಮುಖ ಅಂಶಗಳ ಕುರಿತು ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದೆ ಎಂದು ಬಾನುಲಿ ಕೇಂದ್ರದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮ ಸಂಯೋಜಕ ವಿ.ಕೆ. ಕಡಬ ಅವರನ್ನು 9686392283 ಮೂಲಕ ಸಂಪರ್ಕಿಸಬಹುದಾಗಿದೆ.
ಅಗತ್ಯ ಲಿಂಕ್ ಗಳು ಇಲ್ಲಿವೆ:
Radio garden: https://radio.garden/listen/radio-ninada-90-4-fm/x82h7XpU
SDM ಕಾಲೇಜು ವೆಬ್ ಸೈಟ್ :https://www.sdmcujire.in/radio-ninada-90-4-fm/
Podcast:https://open.spotify.com/show/72mvICG5GTeuB8bNytEmRE
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ