ರಾಜ್ಯ ಮಟ್ಟದ ರಾ.ಸೇ.ಯೋ ಯುವಜನೋತ್ಸವದಲ್ಲಿ ಭಾಗಿ

Upayuktha
0

 


ಉಜಿರೆ: ಶ್ರೀ. ಧ. ಮಂ ಕಾಲೇಜು (ಸ್ವಾಯತ್ತ) ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕಿ, ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಶ್ವೇತಾ. ಕೆ. ಜಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗದಲ್ಲಿ ಫೆಬ್ರವರಿ 18 ರಿಂದ 22 ರ ವರೆಗೆ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿ ಭಾಗವಹಿಸಿದಳು.


ಒಟ್ಟು 13 ವಿಶ್ವವಿದ್ಯಾನಿಲಯಗಳ ಪೈಕಿ ಮಂಗಳೂರು ವಿಶ್ವವಿದ್ಯಾನಿಲಯವು ಸಮಗ್ರ ಚಾಂಪಿಯನ್ಶಿಪ್ ಪಡೆದುಕೊಂಡಿದೆ. ಶಾಸ್ತ್ರೀಯ 2 ನೃತ್ಯದಲ್ಲಿ ಪ್ರಥಮ, ಸ್ಪಾಟ್ ಫೋಟೋಗ್ರಾಫಿಯಲ್ಲಿ ಒಂದು ಪ್ರಥಮ ಮತ್ತು ತೃತೀಯ, ಜನಪದ ಗೀತೆಯಲ್ಲಿ ಪ್ರಥಮ, ಪ್ರಬಂಧ ರಚನೆಯಲ್ಲಿ ದ್ವಿತೀಯ, ರಂಗೋಲಿಯಲ್ಲಿ ದ್ವಿತೀಯ, ಏಕ ಪಾತ್ರ ಅಭಿನಯದಲ್ಲಿ ತೃತೀಯ, ಸಂಘ ನೃತ್ಯದಲ್ಲಿ ಪ್ರಥಮ, ನಾಟಕದಲ್ಲಿ ದ್ವಿತೀಯ, ಸಂಘಗಾನದಲ್ಲಿ ದ್ವಿತೀಯ, ಮೈಮ್ ನಲ್ಲಿ ತೃತೀಯ, ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪ್ರಥಮ ಸ್ಥಾನವನ್ನು ವಿಶ್ವವಿದ್ಯಾನಿಲಯವು ಪಡೆದುಕೊಂಡಿದೆ.


ಈ ಪೈಕಿ ಶ್ವೇತಾ ಕೆ ಜಿ ರಂಗೋಲಿಯಲ್ಲಿ ದ್ವಿತೀಯ, ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪ್ರಥಮ, ಸಮೂಹ ಗಾಯನದಲ್ಲಿ ದ್ವಿತೀಯ, ನಾಟಕದಲ್ಲಿ ದ್ವಿತೀಯ, ಮತ್ತು ಸಮೂಹ ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ.


ಇವಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಯೋಜನಾಧಿಕಾರಿಗಳು ಮತ್ತು ಸ್ವಯಂಸೇವಕರು ಅಭಿನಂದನೆ ಸಲ್ಲಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top