ಉಡುಪಿ: ಮೂಲಗೇಣಿದಾರ ಒಕ್ಕಲು ರಕ್ಷಣಾ ವೇದಿಕೆ ಮಂಗಳೂರು ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಮೂಲಗೇಣಿದಾರರ ಸಮಾವೇಶ ಫೆ.9 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಉಡುಪಿ ಬಳಕೆದಾರರ ಸಭಾಭವನದಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ವಿಶೇಷ ಮಾಹಿತಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಷಯ ತಜ್ಞರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇದರ ಪ್ರಯೇೂಜನವನ್ನು ಉಡುಪಿ ಜಿಲ್ಲಾ ಏಳು ತಾಲೂಕಿನಲ್ಲಿರುವ ಮೂಲಗೇಣಿದಾರರು ಪಡೆದುಕೊಳ್ಳಬೇಕಾಗಿ ಮೂಲಗೇಣಿದಾರರ ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಇಂದು ಉಡುಪಿಯಲ್ಲಿ ಜರುಗಿದ ಪತ್ರಿಕಾ ಗೇೂಷ್ಟಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ಪತ್ರಿಕಾ ಗೇೂಷ್ಟಿಯಲ್ಲಿ ವೇದಿಕೆಯ ಅಧ್ಯಕ್ಷ ಎಂ.ಕೆ ಯಶೇೂಧರ್, ಕಾರ್ಯದರ್ಶಿ ಸಂದೇಶ್ ಪ್ರಭು, ಉಡುಪಿ ಘಟಕದ ಜಿಲ್ಲಾ ಪ್ರತಿನಿಧಿಗಳಾದ ಎಸ್. ಎಸ್. ಶೇಟ್, ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಕೇೂಶಾಧಿಕಾರಿ ಶಂಕರ್ ಪ್ರಭು, ಪದಾಧಿಕಾರಿಗಳಾದ ರೇೂನಾಲ್' ಡಿ ಸಿಲ್ವಾ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ