ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯ: ಫೆ.22ರಂದು ಹಾಸ್ಟೆಲ್‌ ಡೇ

Upayuktha
0


ಮಂಗಳೂರು: ಲಾಲ್‌ಭಾಗ್‌ನಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯ ಮತ್ತು ಶಾಂಭವಿ ಭವನದ ಹಾಸ್ಟೆಲ್‌ ಡೇ ಕಾರ್ಯಕ್ರಮ ಮತ್ತು ಅಮೃತೋತ್ಸವ ಕಾರ್ಯಕ್ರಮವು ಫೆ. 22ರಂದು ಸಂಜೆ 5.30ಕ್ಕೆ ವಿದ್ಯಾರ್ಥಿನಿ ಭವನದಲ್ಲಿ ಜರಗಲಿದೆ.


ಕಾರ್ಯಕ್ರಮವನ್ನು ಡಾ| ಎಂ. ಮೋಹನ ಆಳ್ವ ಅವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದು, ಬಂಟರ ಯಾನೆ ನಾಡವರ ಮಾತೃ ಸಂಘದ ಅಜಿತ್‌ ಕುಮಾರ್‌ ರೈ ಮಾಲಾಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಮೃತಸಿರಿ ಸ್ಮರಣ ಸಂಚಿಕೆಯನ್ನು ಸಂಸದ ಕ್ಯಾ| ಬ್ರಿಜೇಶ್‌ ಚೌಟರು ಮತ್ತು ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಅನಾವರಣಗೊಳಿಸುವರು. ಮುಖ್ಯ ಅತಿಥಿಗಳಾಗಿ ಮುಂಬಯಿಯ ಅರ್ಗಾನಿಕ್‌ ಇಂಡಸ್ಟ್ರೀಸ್‌ನ ಶಶಿರೇಖಾ ಆನಂದ ಶೆಟ್ಟಿ, ಸೆಲೆಬ್ರಿಟಿ ಚೆಪ್‌ ಶ್ರೀಯಾ ಶೆಟ್ಟಿ, ಅಮತ ಬಿಲ್ಡ್‌ ಕೇರ್‌ ಸೊಲ್ಯೂಷನ್‌ ಪಾಲುದಾರರಾದ ಸಮೀಕ್ಷಾ ಶೆಟ್ಟಿ, ಕೊರಿಯೋಗ್ರಾಫ‌ರ್‌ ಪ್ರಮೋದ್‌ ಆಳ್ವ ಅವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top