ಹುಬ್ಬಳ್ಳಿ: ಹುಬ್ಬಳ್ಳಿಯ ಉತ್ತರಾದಿಮಠದಲ್ಲಿ ಮಧ್ವನವಮಿಯ ನಿಮಿತ್ತ ನಡೆಯುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೋಮವಾರ (ಫೆ.3) ಸೌರಭ ದಾಸಸಾಹಿತ್ಯ ವಿದ್ಯಾಲಯದ ವಿದ್ಯಾರ್ಥಿನಿಯರಿಂದ "ಶ್ರೀ ಜಗನ್ನಾಥದಾಸರು" ರೂಪಕವನ್ನು ಪ್ರಸ್ತುತಪಡಿಸಲಾಯಿತು.
ಸೌರಭದ ಹುಬ್ಬಳ್ಳಿ ಘಟಕದ ಸಂಚಾಲಕರಾದ ಶ್ರೀಮತಿ ಸಿಂಧು ಹುಂಡೆಕಾರ ಅವರ ಸಹಯೋಗದಲ್ಲಿ ನಡೆದ ಈ ರೂಪಕದ ಪ್ರಮುಖ ಪಾತ್ರಗಳಾದ ಜಗನ್ನಾಥ ದಾಸರಾಗಿ ಶ್ರೀಮತಿ ಪ್ರೇಮಾ ಹುನಗುಂದ, ವಿಜಯದಾಸರಾಗಿ ಶ್ರೀಮತಿ ಶಾರದಾ ಭಾವಿಕಟ್ಟಿ ಮತ್ತು ಗೋಪಾಲ ದಾಸರಾಗಿ ಶ್ರೀಮತಿ ವೀಣಾ ಬರಗಿ ಯವರೊಂದಿಗೆ ಮತ್ತಿತರು ಅಭಿನಯಿಸಿದ ಈ ರೂಪಕದ ಪರಿಕಲ್ಪನೆ ಮತ್ತು ನಿರ್ದೇಶನ ಶ್ರೀಮತಿ ಜ್ಯೋಸ್ನಾ ಮಹಿಷಿಯವರದ್ದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ