ಶಿವಾಜಿ ಭಾರತ ಮಾತೆಯ ವೀರ ಪುತ್ರ ಅಷ್ಟೇ ಅಲ್ಲ, ಸನಾತನ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿದ ವೀರ ಸೇನಾನಿ. ವಿಜಯ ನಗರದ ಅಂತ್ಯವಾದ ಮೇಲೆ ಹಿಂದೂ ಧರ್ಮದ ಮೇಲೆ ಪರಕೀಯರ ಕರಿನೆರಳು ಬಿದ್ದಾಗ ಹಿಂದೂ ಧರ್ಮವನ್ನು ನಿಲ್ಲಿಸಿದ ವೀರ ಸೇನಾನಿ.
ಗೆರಿಲ್ಲಾ ಮಾದರಿಯ ಯುದ್ಧವನ್ನು ಪರಿಚಯಿಸಿ, ಭಾರತೀಯ ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಸಮರ್ಥ ರಾಮದಾಸರ ಶಿಷ್ಯನಾಗಿ ಮಹಾರಾಷ್ಟ್ರದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ, ರಾಮ್ ರಾಮ್ ಎಂದು ಪರಸ್ಪರ ಸ್ವಾಗತಿಸುವ ಪದ್ಧತಿಯನ್ನು ಜಾರಿಗೆ ತಂದನು.
ದೇವಿ ತುಳಜಾ ಭವಾನಿ ಶಿವಾಜಿಗೆ ಖಡ್ಗ ಕೊಟ್ಟಿದ್ದಳೆಂದು ಹೇಳುತ್ತಾರೆ. ಇಂದಿಗೂ ತುಳಜಾ ಪುರದಲ್ಲಿ ಶಿವಾಜಿ ದೇವಿಯೊಡನೆ ಪಗಡೆ, ಆಡುತ್ತಿದ್ದ ಎಂದು ಹೇಳುತ್ತಾರೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳನ್ನು ಭೇಟಿಯಾಗಿದ್ದಾನೆಂದು ಹೇಳುತ್ತಾರೆ. ಇಂತಹ ಶಿವಾಜಿಗೆ ವೀರ ನಮನೆಗಳು.
ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ