ಕಾವೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೂಳೂರು ಬ್ಲಾಕ್ ಸಮಿತಿ ಇದರ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಭೆ ಶಾಂತಿನಗರದ ಮ್ಯಾಕ್ಸ್ ಎಂಕ್ಲೇವ್ ಕಾಂಪ್ಲೆಕ್ಸ್ ವಠಾರದಲ್ಲಿ ನಡೆಯಿತು.
ಎಸ್ ಡಿಪಿಐ ಕೂಳೂರು ಬ್ಲಾಕ್ ಸಮಿತಿ ಇದರ ನೂತನ ಕಚೇರಿಯನ್ನು ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೃಷ್ಣಾಪುರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಸ್‌ಡಿಪಿಐ ಪಕ್ಷದ ಬೆಳವಣಿಗೆ ನಮ್ಮ ಸಾಂವಿಧಾನಿಕ ವಿರೋಧಿಯಾದ ಆರ್ ಎಸ್ ಎಸ್, ಭಾಜಪಾಗಿಂತಲು ಪ್ರತಿಪಕ್ಷದ ಕೆಲವು ಪಕ್ಷದ ನಾಯಕರಿಗೆ ನಿದ್ದೆ ಕಡೆಸಿದೆ. ಮುಂದಿನ ದಿನಗಳಲ್ಲಿ ಎಸ್‌ಡಿಪಿಐ ಪಕ್ಷ ಬಲಿಷ್ಠವಾಗಲಿದೆ ಎಂದು ಹೇಳಿದರು.
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ, ಎಸ್ ಡಿಪಿಐ ಪಕ್ಷ ಚಳುವಳಿಯ ಮೂಲಕ ಮೌಲ್ಯಾಧಾರಿತ ಪಾರದರ್ಶಕ ಚಿಂತನೆ ಮೂಲಕ ರಾಜಕೀಯ ವೇದಿಕೆಗೆ ಬಂದವರು. ಈ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮ ಸಾಂವಿಧಾನಿಕ ವಿರೋಧಿ ಚಟುವಟಿಕೆಗಳನ್ನು ಕಂಡು ಮನನೊಂದು ರಾಜಕೀಯವನ್ನು ಆಯ್ಕೆ ಮಾಡಿದವರು. ಈ ಸಮಾಜದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮರುಹುಟ್ಟುಗಾಗಿ ಎಸ್ ಡಿಪಿಐ ಪಕ್ಷ ಸ್ಥಾಪಿನೆಯಾಗಿದೆ ಎಂದು ಹೇಳಿದರು.
ಎಸ್ ಡಿಪಿಐ ಕೂಳೂರು ಬ್ಲಾಕ್ ಅಧ್ಯಕ್ಷ ನೌಶಾದ್ ಕಾವೂರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡರು.
ಎಸ್ ಡಿಪಿಐ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಮಜೀದ್ ಫೈಝಿ ಮಲ್ಲಪುರಂ, ಎಸ್ ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷ ಸೈಫುಲ್ಲಾ, ಜೊತೆ ಕಾರ್ಯದರ್ಶಿ ಫಯಾಝ್ ಕಾಟಿಪಳ್ಳ, ಸದಸ್ಯ ಸಿದ್ದಿಕ್ ಅಂಗರಗುಂಡಿ ಉಪಸ್ಥಿತರಿದ್ದರು.
ಎಸ್‌ಡಿಪಿಐ ಮಂಗಳೂರು ನಗರ ಪ್ರ.ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಎಸ್‌ಡಿಪಿಐ ಕೂಳೂರು ಬ್ಲಾಕ್ ಕಾರ್ಯದರ್ಶಿ ಹರ್ಷದ್ ಅಯ್ಯೂಬ್ ಸ್ವಾಗತಿಸಿದರು. ಪಕ್ಷದ ಕೃಷ್ಣಾಪುರ ವಾರ್ಡ್ ಅಧ್ಯಕ್ಷ ಸಂಶುದ್ದೀನ್ ಕೃಷ್ಣಾಪುರ ವಂದಿಸಿದರು.