ಹಿರಿಯರ ಮಾರ್ಗದರ್ಶನ ಅನುಸರಿಸಿ ಯಶಸ್ಸು ಗಳಿಸಿ: ವಿಜಯ್ ಕುಮಾರ್ .ಕೆ

Upayuktha
0

 


ಪುತ್ತೂರು: ನಿಮ್ಮ ಬದುಕಿನ ಯಶಸ್ಸಿಗೆ ನಾವು ದಾರಿಯನ್ನು ತೋರಿಸಬಹುದಷ್ಟೇ. ಆದರೆ ನಿಮ್ಮ ಗುರಿಯನ್ನು ನೀವೇ ಮುಟ್ಟಬೇಕು. ಯಾರು ಜೊತೆಯಾಗಿ ಬಂದು ಗುರಿ ತಲುಪಿಸುವುದಿಲ್ಲ. ಹೀಗಾಗಿ ಹಿರಿಯರು ಕೊಟ್ಟ ಮಾರ್ಗದರ್ಶನವನ್ನು ಅನುಸರಿಸಿ ಯಶಸ್ಸು ಗಳಿಸಿ ಎಂದು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕಮಾಂಡರ್ ವಿಜಯ್ ಕುಮಾರ್. ಕೆ ಹೇಳಿದರು. 


ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಟ್ರೈನಿಂಗ್ ಆ್ಯಂಡ್ ಪ್ಲೇಸ್ಮೆಂಟ್ ಸೆಲ್, ಐಕ್ಯೂಎಸಿ ವತಿಯಿಂದ "ಯಶಸ್ವಿ ಭವಿಷ್ಯಕ್ಕಾಗಿ ಕೌಶಲ್ಯಗಳ ನಿರ್ಮಾಣ" ಎನ್ನುವ ವಿಷಯಾಧಾರಿತ ಎರಡು ದಿನಗಳ ಉದ್ಯೋಗ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ನಿಮ್ಮ ಯಶಸ್ಸಿಗಾಗಿ ನಾವು ಸದಾ ನಿಮ್ಮೊಂದಿಗಿದ್ದೇವೆ. ಅನುಭವಿ ವ್ಯಕ್ತಿಗಳ ಉತ್ತಮ ಸಲಹೆಗಳು ನಿಮ್ಮ ಭವಿಷ್ಯಕ್ಕೆ ಸಹಕಾರಿಯಾಗುತ್ತವೆ. ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಹೇಳಿದರು. 


ಕಾರ್ಯಕ್ರಮದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ ರೇಖಾ ಸ್ವಾಗತಿಸಿ, ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಸ್ಮಿತಾ ರೈ ವಂದಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಪ್ರಜ್ಞಾ ಕಾರ್ಯಕ್ರಮವನ್ನು ನಿರೂಪಿಸಿದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top