ಶಿವಾಜಿಗೆ ಸಂಬಂಧಿಸಿದ ತಾಣಗಳಿಗೆ ಭೇಟಿ ನೀಡಬೇಕು : ಮಾಲತಿ.ಡಿ

Upayuktha
0

 


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಬುಧವಾರ ಛತ್ರಪತಿ ಶಿವಾಜಿ ಜಯಂತಿಯ ಆಚರಣೆ ವೈಭವ ಪೂರ್ಣವಾಗಿ ನಡೆಯಿತು. 


ಪ್ರಾಂಶುಪಾಲೆ ಮಾಲತಿ ಡಿ ಮಾತನಾಡಿ ವಿದ್ಯಾರ್ಥಿಗಳು ಐತಿಹಾಸಿಕ ವಿಷಯವನ್ನು ತಿಳಿದುಕೊಳ್ಳುವುದರೊಂದಿಗೆ ಶಿವಾಜಿಗೆ ಸಂಬಂಧಿಸಿದ ತಾಣಗಳಿಗೆ ಭೇಟಿ ನೀಡುವುದು ಜೀವನಕ್ಕೆ ಸ್ಪೂರ್ತಿದಾಯಕ. ಶಿವಾಜಿಗೆ ಸಂಬಂಧಿಸಿದ ಗ್ರಂಥಗಳ ವಾಚನದೊಂದಿಗೆ ನಮ್ಮ ಜೀವನವನ್ನು ಕೂಡ ಪಾವನವಾಗಿಸಬಹುದು.  ಹಿಂದುತ್ವವನ್ನು ಕಾಪಾಡುವಂತದ್ದು  ನಮ್ಮೆಲ್ಲರ ಜವಾಬ್ದಾರಿ ಎಂಬ ಹೇಳಿದರು.


ಐದನೇ ತರಗತಿಯ ನವೀಶ್ ಮಾರ್ತ ಶಿವಾಜಿಯ ಪಾತ್ರ ನಿರ್ವಹಿಸಿದರೆ, ಅದೇ ತರಗತಿಯ ರತುಲ್ ಅದ್ವೈತ ಶಿವಾಜಿ ಬಗೆಗಿನ ನಾನಾ ಶ್ಲಾಘನೆಯ ಘೋಷಣೆಯೊಂದಿಗೆ ಶಿವಾಜಿ ಪಾತ್ರಧಾರಿಯನ್ನು ವೇದಿಕೆಗೆ ಆಹ್ವಾನಿಸಿದರು. ಏಳನೇ ತರಗತಿಯ ಸೌಪರ್ಣಿಕ ಮತ್ತು ಮಾನ್ಯ ಲಕ್ಷ್ಮಿ ಶಿವಾಜಿಯ ಜೀವನ ಚರಿತ್ರೆಯ ಕಥನವನ್ನು ತಿಳಿಸಿದರು. ಏಳನೇ ತರಗತಿಯ ಮನಸ್ವಿ ನಿರೂಪಣೆಗೈದರು. ಐದನೇ ತರಗತಿಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನೆರವೇರಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top