ಅಂಬಿಕಾ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜರಿಗೆ ಮಾತೃವಿಯೋಗ

Upayuktha
0



ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರ ಮಾತೃಶ್ರೀಯವರಾದ ಸುಶೀಲಾ ಶಿವಾನಂದ ರಾವ್ ಅವರು ಸೋಮವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ತೀರಾ ಇತ್ತೀಚೆಗಿನವರೆಗೂ ಆರೋಗ್ಯವಾಗಿದ್ದ ಅವರು ಕಳೆದ ಕೆಲ ದಿನಗಳಿಂದ ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು. 


ಮೃತರು ಪುತ್ರ ಸುಬ್ರಮಣ್ಯ ನಟ್ಟೋಜ, ಸೊಸೆ ರಾಜಶ್ರೀ ಎಸ್. ನಟ್ಟೋಜ, ಪುತ್ರಿಯರಾದ ಮೀನಾಕ್ಷಿ ವೆಂಕಟ್ರಮಣ, ಮನೋಹರಿ ಕೃಷ್ಣರಾಜ್, ನಾರಾಯಣಿ ಸತ್ಯಶಂಕರ್ ಬೊಳ್ಳಾವ, ಗಾಯತ್ರಿ ಬಾಲಕೃಷ್ಣ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. 



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top