ಸುಂದರ ನವಿಲಿಗೆ ಚಂದದ ಗರಿ

Upayuktha
0


ತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತಣ ಸಂಬಂಧವಯ್ಯ. ಬ್ಯಾಂಕಿನ ಗ್ರಾಹಕರಿಗೆ ದುಡ್ಡನ್ನು ಕೊಟ್ಟು ಅಥವಾ ಅವರಿಂದ ಹಣ ಸಂಗ್ರಹ ಮಾಡುವ ಕೆಲಸವೆಲ್ಲಿ; ಸಾಹಿತ್ಯಾಭಿಮಾನಿಗಳಿಗೆ ಕಾವ್ಯದ ವಿವಿಧ ಮಜಲುಗಳನ್ನು ಪರಿಚಯಿಸುತ್ತಾ ತನ್ನದೇ ಶೈಲಿಯಲ್ಲಿ ಕಥೆ, ಕವನ, ಲೇಖನಗಳನ್ನು ಬರೆದು ಅವರಿಂದ ಪ್ರಶಂಸೆ ಬಹುಮಾನ ಪುರಸ್ಕಾರಗಳನ್ನು ಪಡೆಯುವುದೆಂದರೆ ಆಶ್ಚರ್ಯ ಮತ್ತು ಆದರ್ಶಪ್ರಾಯವೇ ಸರಿ. ಇದಕ್ಕೆ ಉದಾಹರಣೆಯ ವ್ಯಕ್ತಿ ಎಂದರೆ ಸದ್ಯ ಮುಂಬೈ ವಾಸಿ ಕೊಳ್ಚಪ್ಪೆ ಗೋವಿಂದಭಟ್. ಇವರ ಪ್ರಾಥಮಿಕ ವಿದ್ಯಾಭ್ಯಾಸವು ಕಾಸರಗೋಡಿನ ಕನ್ನಡ ಶಾಲೆಯಲ್ಲಿ ಸಂಪನ್ನವಾಯಿತು. ಅವರ ಓದು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್. ನಿವೃತ್ತಿಯ ನಂತರ ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ ಪೂರೈಸಿದ್ದಾರೆ.


ಸಾಹಿತಿಗಳು, ಬ್ಯಾಂಕಿಂಗ್ ಪುಸ್ತಕಗಳ ಲೇಖಕರು, ಗುರುಕುಲ ಸಾಹಿತ್ಯ ವೇದಿಕೆ ಮುಂಬಯಿ ಅಂತರರಾಜ್ಯ ಘಟಕದ ಗೌರವಾಧ್ಯಕ್ಷರಾಗಿರುವ ಇವರು  ಕಾಸರಗೋಡಿನ ಕೊಳ್ಚಪ್ಪೆಯ ವೆಂಕಟರಮಣ ಭಟ್ ಮತ್ತು ಶ್ರೀಮತಿ ರುಕ್ಮಿಣಿಯಮ್ಮನವರ ಪುತ್ರರು. ಇವರ ಸಾಹಿತ್ಯ ಸ್ಪೂರ್ತಿಯಾದ ಮಡದಿ ವಿಜಯ, ಮಗ ಹರ್ಷ ಮಗಳು ವಿದ್ಯಾ ಕೂಡ ಸಾಹಿತ್ಯಾಸಕ್ತರು.


ಪುರಸ್ಕಾರಗಳು:

ಇವರ ನೆಲಸಂಪಿಗೆ ಕಥಾ ಸಂಕಲನ ಕೃತಿಗೆ ಕಸಾಪ ಬೆಂಗಳೂರು ಇವರ ಕೆ ವಾಸುದೇವಾಚಾರ್ ದತ್ತಿ ಪ್ರಶಸ್ತಿ 2020 ಲಭಿಸಿದೆ. ಈಗಾಗಲೇ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಪ್ರೇಮಕವಿ ಕೆ.ಎಸ್ ನ. ಕಾವ್ಯ ಪುರಸ್ಕಾರ, ಕರ್ನಾಟಕ ಸಂಘ ಡೊಂಬಿವಿಲಿ ಇವರು ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಎಂ. ಗೋಪಾಲಕೃಷ್ಣ ಅಡಿಗ ಶತಮಾನೋತ್ಸವ ಸಮಿತಿ ಬಂಟ್ವಾಳ ಏಪ೯ಡಿಸಿದ ಪ್ರಬಂಧ ಸ್ಪಧೆ೯ಯಲ್ಲಿ ಪ್ರಥಮ ಸ್ಥಾನ, "ಈ ಹೊತ್ತಗೆ" ಬೆಂಗಳೂರು ಏರ್ಪಡಿಸಿದ ಕಥಾ ಸ್ಪಧೆ೯ಯಲ್ಲಿ ಪ್ರಥಮ ಸ್ಥಾನ, ಸಾಯಿಸುತೆಯವರ ಕಾದಂಬರಿಗಳ ವಿಮರ್ಶೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಖಿದ್ಮಾ ಫೌಂಡೇಶನ್ ಕರ್ನಾಟಕ ಬಳಗದಲ್ಲಿ ಈ ತಿಂಗಳ ಪ್ರತಿಭೆಯಲ್ಲಿ ಟಾಪ್ 1ನೇ ಸ್ಥಾನ ಹೀಗೆ ಪುರಸ್ಕಾರಗಳ ಸರಮಾಲೆಯನ್ನೇ ಹಾಕಿಕೊಂಡಿರುವ ಸಾಧಕರು ಆದರ್ಶಪ್ರಾಯರೇ ಸರಿ. ಪ್ರವೃತ್ತಿಯಲ್ಲಿ ಕೃಷಿಕರಾಗಿರುವ ಅವರ ಸಾಧನೆಯನ್ನು ಪರಿಗಣಿಸಿ ಅವರಿಗೆ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ, ಮುಂಬೈ ಇವರು ಕೊಡಮಾಡುವ 2020ರ "ಕೃಷಿ ಬಂಧು ಪ್ರಶಸ್ತಿ" ಕೂಡ ಸಂದಿದೆ.


ಕೊಳ್ಚಪ್ಪೆ ಗೋವಿಂದಭಟ್ ಅವರ ಮೂರು ಕಥಾ ಸಂಕಲನಗಳು ಈಗಾಗಲೇ ಬಿಡುಗಡೆಯಾಗಿವೆ. ಮಹನೀಯರು ಬ್ಯಾಂಕಿಂಗ್ ವಿಷಯದ ಮೇಲೆ ಆಂಗ್ಲ ಭಾಷೆಯಲ್ಲಿ ಬರೆದ ಎಂಟು ಕೃತಿಗಳು ಪದವಿ ಮತ್ತು ಸ್ನಾತಕೋತ್ತರ ಓದಿನ ವಿದ್ಯಾರ್ಥಿಗಳಿಗೆ ಆಧಾರ ಕೃತಿಗಳಾಗಿ ಮಾನ್ಯತೆ ಪಡೆದಿವೆ. ಬ್ಯಾಂಕಿಂಗ್  ವಿಷಯದ 100ಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.


ಇಷ್ಟು ಪ್ರತಿಭಾವಂತ ಸಾಹಿತಿಗಳಿಂದ ಇನ್ನು ಹತ್ತು ಹಲವು ಕೃತಿಗಳು, ಗ್ರಂಥಗಳು ಲೋಕಾರ್ಪಣೆ ಗೊಳ್ಳಲಿ. ಹೆಚ್ಚು ಹೆಚ್ಚು ಪ್ರಶಸ್ತಿಗಳು, ಜನ ಮನ್ನಣೆ ದೊರೆಯಲಿ ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ.


ಶ್ರೀಯುತರ ಒಂದು ವಿಜ್ಞಾನ ಆಧಾರಿತ ಶಿಶುಗೀತೆ ನಿಮ್ಮ ಓದಿಗಾಗಿ:-

ಶೀರ್ಷಿಕೆ:- ಉಸಿರು ತುತ್ತು 


ಎಲೆಯಲ್ಲಿದೆ ಹಸಿರು ಹರಿತ್ತು

ಸೂರ್ಯನ ಬಿಸಿಲು ಬಿತ್ತು 

ಆಹಾರ ತಯಾರಾಯಿತು 

ಎಲ್ಲಾ ಜೀವಿಗಳಿಗೆ ಉಸಿರು ಸಿಕ್ಕಿತು 

ಹೊಟ್ಟೆ ತುಂಬಲು ತುತ್ತು 

ದ್ಯುತಿಸಂಶ್ಲೇಷಣೆ ಕಸರತ್ತು!!



- ಸಾವಿತ್ರಮ್ಮ ಓಂಕಾರ್, ಅರಸೀಕೆರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top