ಪರ್ಕಳ: ಕಲಾಸಂಗಮ ಆಮಂತ್ರಣ ಪತ್ರಿಕೆ ಬಿಡುಗಡೆ

Upayuktha
0


ಪರ್ಕಳ: ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ 21ನೇ ವರ್ಷದ ಸಂಭ್ರಮ ಕಲಾಸಂಗಮ ಕಾರ್ಯಕ್ರಮವು ದಿನಾಂಕ 23 ಫೆಬ್ರವರಿ 2025 ರ ಭಾನುವಾರ ಶ್ರೀ ವಿಘ್ನೇಶ್ವರ ಸಭಾಭವನ ಪರ್ಕಳ ಇಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಇಂದು (ಫೆ.9) ಭಾನುವಾರ ಕೆಳ ಪರ್ಕಳದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪರ್ಕಳ ಸ್ವಾಗತ ಹೋಟೆಲ್‌ನ ಮಾಲಕರಾದ ಮೋಹನ್ ದಾಸ್ ನಾಯಕ್ ಹಾಗೂ ವೇದಿಕೆಯ ಪೋಷಕರಾದ ಪ್ರಕಾಶ್ ಶೆಣೈ ಇವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಹೋಟೆಲ್ ಉದ್ಯಮಿ ದೇವದಾಸ್ ನಾಯಕ್, ವೇದಿಕೆ ಅಧ್ಯಕ್ಷರಾದ ಸಂದೀಪ್ ನಾಯ್ಕ್ ಕಬ್ಯಾಡಿ, ಸದಸ್ಯರಾದ ಗಣೇಶ್ ಸಣ್ಣಕ್ಕಿ ಬೆಟ್ಟು, ಸುಧಾಕರ್ ನಾಯಕ್ ಕಬ್ಯಾಡಿ, ಅಶೋಕ್ ಸಣ್ಣಕ್ಕಿಬೆಟ್ಟು, ಸುಧೀರ್ ಕುಮಾರ್ ನಗರ ಬೆಟ್ಟು, ರಾಘವೇಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು, ಅಭಯ್, ಇವರು ಉಪಸ್ಥಿತರಿದ್ದರು.


ವೇದಿಕೆಯ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top