ನೀಲಾವರ: ಪೇಜಾವರ ಮಠದ ರಾಮರಾಜ್ಯ ಯೋಜನೆ ಮನೆ ಹಸ್ತಾಂತರ

Upayuktha
0

ಮನೆಮಂದಿಯೊಂದಿಗೆ ರಾಮ ಭಜನೆಗೈದ ಶ್ರೀಗಳು 




ಉಡುಪಿ: ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪರಿಕಲ್ಪನೆಯ ರಾಮ‌ರಾಜ್ಯ ಯೋಜನೆಯಂತೆ ಶ್ರೀಮಠದ ವತಿಯಿಂದ ದಾನಿಗಳ ನೆರವಿನೊಂದಿಗೆ ಉಡುಪಿ ಜಿಲ್ಲೆ ನೀಲಾವರ ಗ್ರಾಮದ ಸತೀಶ್ ನಾಯ್ಕ ಎಂಬವರ ಕುಟುಂಬಕ್ಕೆ ನಿರ್ಮಿಸಿಕೊಡಲಾಗಿರುವ ಮನೆಯನ್ನು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಮನೆಗೆ ಶ್ರೀರಾಮಸದನ ಎಂಬ ಹೆಸರನ್ನು ಸೂಚಿಸಿ ಉದ್ಘಾಟಿಸಿದರು.‌


ಇದೇ ಸಂದರ್ಭದಲ್ಲಿ ಮನೆ ಮಂದಿಗೆ ಅನುಗ್ರಹ ಸಂದೇಶ ನೀಡಿ ಹರಸಿದ್ದಲ್ಲದೇ ಎಲ್ಲರಿಗೂ ಶ್ರೀ ರಾಮಸಂಕೀರ್ತನೆ ಹೇಳಿಕೊಟ್ಟು ತಾವೂ ಹಾಡಿ ನಿತ್ಯವೂ ಭಜನೆ ಸಂಕೀರ್ತನೆಗಳನ್ನು ಹಾಡುವಂತೆ ಸೂಚಿಸಿದರು.

 


ಆಸ್ಟ್ರೇಲಿಯಾದ ಯೋಗಗರು ರಾಜೇಂದ್ರ ಎಂಕಮೂಲೆಯವರು ಈ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದರು. ವಾಸುದೇವ ಭಟ್ ಪೆರಂಪಳ್ಳಿ, ಅಶ್ವಿನ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top