ವಿಟ್ಲ ಸ್ವರ ಸಿಂಚನ ತಂಡದಿಂದ ನಾದೋಪಾಸನ, ತ್ಯಾಗರಾಜರ ಆರಾಧನೆ

Upayuktha
0


ಪೆರ್ನಾಜೆ: ಶ್ರೀ ವಿಟ್ಲ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಾದೋಪಾಸನ ಹಾಗೂ ತ್ಯಾಗರಾಜರ ಆರಾಧನೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಸ್ವರ ಸಿಂಚನ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಫೆ.23ರಂದು ಬೆಳಿಗ್ಗೆಯಿಂದ ದಿನಪೂರ್ತಿ ನಡೆಯಿತು. ಶ್ರೀ ಭಗವತಿ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ಮಾರ್ಗದರ್ಶನದಲ್ಲಿ ನಡೆಯಿತು.


ಪಕ್ಕ ವಾದ್ಯದಲ್ಲಿ ಮೃದಂಗ ವಾದಕರಾಗಿ ಕ್ಷಿತಿಶ ರಾಮ ಕೆ.ಎಸ್, ವಯಲಿನ್‌ನಲ್ಲಿ ಶ್ರೀಪ್ರಿಯಾ ಪರಕ್ಕಜೆ ಸಹಕರಿಸಿದರು. ರಮ್ಯಾ ಜೆಡ್ಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವರ ಸಿಂಚನ ಸಂಗೀತ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.


ಸುಮಾರು 40 ವಿದ್ಯಾರ್ಥಿಗಳಿಂದ ಏಕವ್ಯಕ್ತಿ ಶಾಸ್ತ್ರೀಯ ಸಂಗೀತ ಪ್ರದರ್ಶನ ನಡೆಯಿತು. ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಸ್ವರ ಮಧುರ ಗಾಯನ ಮೇಳ ರಂಜಿಸಿತು. ಸಂಗೀತದ ಸುಧೆಯ ತುಂಬಿ ಮಾಧುರ್ಯ ಮನದಲ್ಲಿ ತುಂಬಿದೆ. ಭಾಗ್ಯಶ್ರೀ, ಕು.ಆದರ್ಶನಿ, ಕು.ಭುವಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top