ಜೀವನ ಒಂದು ರೀತಿಯ ಪಯಣ ಇದ್ದಂತೆ. ಗುರಿ ಮುಟ್ಟಲು, ಯಾತ್ರೆಯನ್ನು ಕ್ರಮಿಸಲು ಒಂದು ಗಮ್ಯ ಸ್ಥಾನ ಬೇಕು. ಅದಕ್ಕೆ ಜೀವನವನ್ನು ಆಕ್ರಮಿಸಲು ಗುರಿ ಬೇಕು. ಗುರಿ ಇಲ್ಲದ ಜೀವನ ಚುಕ್ಕಾಣಿ ಇಲ್ಲದ ಹಡಗು. ಅದಕ್ಕೆ ಪ್ರತಿಯೊಬ್ಬರ ಜೀವನದಲ್ಲಿ ಗುರಿಗೆ ಅದರದೇ ಆದ ಮಹತ್ವ ಇರುತ್ತದೆ.
ಜೀವನವೆಂಬುದು ಒಂದು ಪ್ಲಾಟ್‌ಫಾರ್ಮ್ ಇದ್ದಂತೆ. ಅಲ್ಲಿ ಎಲ್ಲಾ ತರಹದ ರೈಲುಗಳು ಬರುತ್ತವೆ. ನಾವು ನಮ್ಮ ಗುರಿಯೆಂಬ ರೈಲನ್ನು ಹತ್ತಿದರೆ ಮಾತ್ರ ನಮ್ಮ ಜೀವನ ಯಾತ್ರೆಯನ್ನು ಕ್ರಮಿಸಲು ಸಾಧ್ಯ. ಇಲ್ಲದಿದ್ದರೆ ವಿಧಿ ನಮ್ಮನ್ನು ಪ್ಲಾಟ್ಫಾರ್ಮಿನಿಂದ ಹೊರಗೆ ಹಾಕಿ ಬಿಡುತ್ತದೆ.
ಅದಕ್ಕೆ ನಮ್ಮ ಪೂರ್ವಿಕರು ಜೀವನಕ್ಕೆ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಜೋಡಿಸಿದರು. ಬದುಕಿನಲ್ಲಿ ಗುರಿ ಒಂದಿದ್ದರೆ ನಮಗೆ ಗೊತ್ತಿಲ್ಲದಂತೆ ಶಿಸ್ತು, ತಾಳ್ಮೆ, ಅಪರಿಮಿತ ಜೀವನ ನಮ್ಮನ್ನು ಆಕ್ರಮಿಸಿ ಬಿಡುತ್ತವೆ. ನಮ್ಮ ಜೀವನವು ಅರ್ಥಪೂರ್ಣ ದಾರಿಯಲ್ಲಿ ಸಾಗುತ್ತದೆ.
ಗುರಿ ಇಲ್ಲದಿದ್ದರೆ ನಮ್ಮ ಜೀವನ ಎರ್‍ರಾಬಿರ್‍ರಿಯಾಗಿ ಸಾಗಿ ನಾವು ನಮಗೆ ಗೊತ್ತಿಲ್ಲದಂತೆ ಖಿನ್ನತೆಯುತ್ತ ಸಾಗುತ್ತವೆ. ಎಷ್ಟೋ ಜನರು ಆತ್ಮಹತ್ಯೆಯತ್ತ ಸಾಗುವುದು ಖಿನ್ನತೆಯಿಂದ.
ನಮ್ಮ ಬದುಕೆಂದರೆ ದೇವರು ಕೊಟ್ಟ ಕಾಣಿಕೆ. ಇದನ್ನು ಅರ್ಥಪೂರ್ಣವಾಗಿ ಜೀವಿಸಿದರೆ ಮಾತ್ರ ಅವನಿಗೆ ಸಮಾಧಾನ. ನಮ್ಮ ಬದುಕು ಹೇಗಿರಬೇಕು ಎಂದರೆ ನಮ್ಮ ಸಮೀಪ ಸಾವು ಬಂದರೆ ಅದು ಕೂಡ ಸಂಭ್ರಮ ಪಡುವಪಡುವಂತಿರಬೇಕು. ಏನಂತೀರಾ? ಸದಾ ಖುಷಿಯಾಗಿರಿ, ಬದುಕನ್ನು ಸಂಭ್ರಮಿಸಿ.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


