ಗೋ ಮೂತ್ರ ವಿಷವೇ...? ಗೋ ಮೂತ್ರವನ್ನು ಔಷಧದಂತೆ, ಗೋ ಮೂತ್ರವನ್ನು ಶುದ್ದಿ ಸಂಬಂಧಿಸಿದಂತೆ ಬಳಸುತ್ತಿದ್ದ ಪ್ರಾಚೀನ ಭಾರತೀಯರು ಹೆಡ್ಡರೇ?
ಬಹಳಷ್ಟು ಜನ ವಿಜ್ಞಾನಿಗಳು ಭಾರತೀಯತೆ, ಭಾರತೀಯ ಔಷಧೀಯ ಪರಂಪರೆ, ಸಾವಯವ ಕೃಷಿ ಪದ್ದತಿ, ಭಾರತೀಯ ಅಥವಾ ದೇಸಿ ಹಸುಗಳ ಶ್ರೇಷ್ಠತೆಯ ಬಗ್ಗೆ ಪ್ರಸ್ತಾವನೆ ಬಂದಾಗ ಹಾವು ತುಳಿದಂತಾಡುತ್ತಾರೆ.
ಇತ್ತೀಚೆಗೆ ಪಶುವೈದ್ಯ ತಜ್ಞರ ಈ ಬಗೆಗಿನ ವಸ್ತುವಿನ ಲೇಖನವನ್ನು ಓದಿದೆ. ಅವರು ಲೇಖನದುದ್ದಕ್ಕೂ ಗೋ ಮೂತ್ರವನ್ನು "ವಿಷಕಾರಕ" ಎಂದು ಸಾಧಿಸಲು ಪ್ರಯತ್ನ ಮಾಡಿದ್ದಾರೆ. ನಿಜಕ್ಕೂ ಅವರು ಹೇಳಿದ ಬಗೆಯ ಹಸುಗಳ ಗೋ ಮೂತ್ರದಲ್ಲಿ ಖಂಡಿತವಾಗಿಯೂ ವಿಷ ಗುಣ ಇರಬಹುದು.
ಇದು ಆಧುನಿಕ ಕಾಲ. ಮನುಷ್ಯ ಸಂಪೂರ್ಣ ಆಧುನಿಕನಾಗಿದ್ದಾನೆ. ಈಗಲೂ ಗೋ ಮೂತ್ರ ಔಷಧವಾಗಿ ಕುಡಿಯಬೇಕೆಂದೇನೂ ಇಲ್ಲ. ಆದರೆ ಎಲ್ಲಾ ಗೋವುಗಳ ಗೋಮೂತ್ರವೂ ವಿಷವಲ್ಲ! ಗೋ ಮೂತ್ರ ಔಷಧವಾಗಬಲ್ಲದು.
ನಮ್ಮ ವಿಜ್ಞಾನದ ಜಾಣರು ಭಾರತೀಯತೆಯನ್ನು ಹೀಗೆಳೆವಾಗ ಸಾರಾಸಗಟಾಗಿ ಹೀಗೆಳಿತಾರೆ ಎಂಬುದು ಅತ್ಯಂತ ನೋವಿನ ಸಂಗತಿ.
ಔಷಧವಾಗಿ ಗೋ ಮೂತ್ರ ಬಳಸುವಾಗ ಪಂಡಿತರು ಇಂತಹದ್ದೇ ಹಸುವಿನ ಗೋಮೂತ್ರವನ್ನು ಇಂತಹದ್ದೇ ಸಮಯದಲ್ಲಿ ಪಡೆದು ಅಥವಾ ಸಂಗ್ರಹಿಸಿ ಹೀಗೇ ಸಂಸ್ಕರಣೆ ಮಾಡಿ ಬಳಸಬೇಕು ಎಂಬ ನಿಯಮಗಳನ್ನು ಮಾಡಿರುತ್ತಾರೆ.
ಸಾಮಾನ್ಯವಾಗಿ ಮುದಿ ಗೋವುಗಳು, ಖಾಯಿಲೆ ಇರುವ ಗೋವುಗಳು, ಹೋರಿಗಳು, ಚಿಕ್ಕ ಕರುಗಳು, ಗಬ್ಬದ ಗೋವುಗಳು ಮುಂತಾದ ಬಗೆಯ ಗೋವುಗಳ ಗೋ ಮೂತ್ರ ಸಂಗ್ರಹಿಸೋಲ್ಲ.
ಗೋ ಮೂತ್ರ ಎಂದರೆ ಅಷ್ಟು ಸುಲಭವಲ್ಲ. ಬ್ರಾಹ್ಮಿ ಮುಹೂರ್ತದಲ್ಲಿ ಗೋವುಗಳ ಬುಡದಲ್ಲಿ ಕಾದು ಹಿಡಿಯಬೇಕು. ಬುಡದಲ್ಲಿ ಹಿಡಿದರೆ ನಲ್ಲಿ ತಿರುಗಿಸಿದರೆ ನೀರು ಬಂದಂತೆ ಗೋಮೂತ್ರ ಹಿಡಿದ ಪಾತ್ರೆಗೆ ತಕ್ಷಣ ಬಂದು ಬೀಳೋಲ್ಲ! ಅದಕ್ಕೆ ತಾಳ್ಮೆಯ ಪ್ರತೀಕ್ಷೆ ಬೇಕು.
ಮತ್ತೆ ಸಂಗ್ರಹಿಸಿದ ಗೋ ಮೂತ್ರವನ್ನು ಸಾಮಾನ್ಯವಾಗಿ ವಿಶೇಷವಾದ ಮಣ್ಣಿನ ಪಾತ್ರೆಯಲ್ಲಿ ಸಂಸ್ಕರಣೆ ಮಾಡಲಾಗುತ್ತದೆ.
ಗೋ ಮೂತ್ರವನ್ನು ಸಾಮಾನ್ಯವಾಗಿ ಸಂಸ್ಕರಣೆ ಮಾಡಿಯೇ ಬಳಸಲಾಗುತ್ತದೆ. ಅಕಸ್ಮಾತ್ತಾಗಿ ನೇರವಾಗಿ ಬಳಸುವುದಾದಲ್ಲಿ ಅದಕ್ಕೂ ಬಳಕೆಯ ಕ್ರಮವಿದೆ. ನೀರು ಜ್ಯೂಸು ಕುಡಿದಂತೆ ಎಂ ಎಲ್ ಗಟ್ಟಲೆ ಕುಡಿಯೋಕೆ ಬರೋಲ್ಲ. ಮತ್ತು ಇಂತಹವರು ಇಂತಹ ಹೊತ್ತಿಗೇ ಇಂತಿಷ್ಟೇ ಗೋ ಮೂತ್ರ ಸೇವನೆ ಮಾಡಬೇಕು ಎಂಬ ನಿಯಮವಿದೆ. ಇದಲ್ಲದೇ ಇದ್ದರೆ ಅಡ್ಡ ಪರಿಣಾಮ ಆಗುತ್ತದೆ. ಇದು ಸಹಜ ಅಲ್ವಾ..?
ವೈದ್ಯಕೀಯ ವಿಜ್ಞಾನದ ಎಲ್ಲಾ ಚಿಕಿತ್ಸೆಯೂ ಒಂದಕ್ಕೊಂದು ಪೂರಕವ...? ಅನೇಕ ಸರ್ತಿ ಶುಗರ್ ಕಡಿಮೆ ಮಾಡಲು ಔಷಧ ನೀಡಿದರೆ ಬಿಪಿ ವ್ಯತ್ಯಾಸ ಆಗುತ್ತದೆ. ಇದ್ಯಾವುದೋ ರೋಗ ಕಂಟ್ರೋಲ್ ಮಾಡಲು ಪ್ರಯತ್ನ ಮಾಡಿದರೆ ಮೂಲವ್ಯಾಧಿ ಆರಂಭ ವಾಗಿ ಬಿಡುತ್ತದೆ. ಯಾವ ಔಷಧ ಅಡ್ಡ ಪರಿಣಾಮಗಳಲ್ಲದ ಪರ್ಫೆಕ್ಟ್ ಇದೆ....?
ಇಂಗ್ಲೀಷ್ ಮೆಡಿಸನ್ ನವರಿಗೆ ಆಯುರ್ವೇದ ಎಂದರೆ ಅವೈಜ್ಞಾನಿಕ ಎನ್ನುವ ಮನಸ್ಥಿತಿ ಬಂದಿರುತ್ತದೆ. ಆಯುರ್ವೇದ ಎಂದರೆ ಒಂದು ಆರೋಗ್ಯ ಕರ ಸ್ವಸ್ಥ ಜೀವನ ಶೈಲಿ. ಬದಲಾದ ವಾತಾವರಣ ಜೀವನ ಶೈಲಿಯ ಕಾರಣಕ್ಕೆ ಮನುಷ್ಯ ತನ್ನ ಧಾರಣ ಶಕ್ತಿ ಕಳೆದುಕೊಂಡಿದ್ದಾನೆ. ಇದೀಗ ಈರುಳ್ಳಿ ಮೂಸಿದರೆ ತಲೆನೋವು ವಾಸಿಯಾಗ್ತಿಲ್ಲ. ಲವಂಗ ಹಲ್ಲಿನ ಸಂದಿಯಲ್ಲಿ ಇಟ್ಟುಕೊಂಡರೆ ಹಲ್ಲು ನೋವು ವಾಸಿಯಾಗೋಲ್ಲ. ಇದೆಲ್ಲಾ ಭಾರತೀಯ ಸಾಂಪ್ರದಾಯಿಕ ಮನೆ ಮದ್ದು.
ಇದಿರಲಿ ಈಗ ಇಂಗ್ಲಿಷ್ ಮೆಡಿಸನ್ ಕಥೆ ಏನಾಗಿದೆ...? ಒಂದು ಡೋಲೋ 650 ತೆಗದುಕೊಂಡರೆ ತಲೆನೋವು ವಾಸಿಯಾಗ್ತಿತ್ತು. ಈಗ ಎರಡು ಡೋಲೋ ತೆಗದುಕೊಂಡರೂ ತಲೆನೋವು ವಾಸಿಯೋಗೋಲ್ಲ. ಇಂಗ್ಲಿಷ್ ಮೆಡಿಸನ್‌ಗೇ ಈಗಿನ ಖಾಯಿಲೆ ಜಗ್ಗುವುದಿಲ್ಲ... ಇನ್ನ ಪಾಪದ ನಿಧಾನ ಪರಿಣಾಮದ ಆಯುರ್ವೇದ ನಾಟಿ ಔಷಧ ನಾಟುತ್ತದ...?
ಒಂದು ಗಮನಾರ್ಹ ಸಂಗತಿಯೇನೆಂದರೇ ಗೋ ಮೂತ್ರ, ಗೋ ಅರ್ಕ ಅಥವಾ ಆಯುರ್ವೇದ ಅಥವಾ ನಾಟಿ ಔಷಧ ಗಳಿಗೆ ರೋಗಿ ಹೋಗೋದು ಇಂಗ್ಲಿಷ್ ಮೆಡಿಸನ್ ನಲ್ಲಿ ಆ ರೋಗಿ ಸಂಪೂರ್ಣ ಲಗಾಡಿ ಎದ್ದು ಆಸ್ಪತ್ರೆಯವರು ರೋಗಿ ಕಥೆ ಮುಗೀತು ಮನೆಗೆ ಕರೆದುಕೊಂಡು ಹೋಗಿ ಅಂತ ರೋಗಿ ಕಡೆಯವರಿಗೆ ಹೇಳಿ ಡಿಶ್ಚಾರ್ಜ್ ಮಾಡಿ ಮನೆಗೆ ಕಳಿಸಿದ ಮೇಲೆ ರೋಗಿ ಕಡೆಯವರು ಗೋ ಮೂತ್ರ , ಆಯುರ್ವೇದ- ನಾಟಿ ಔಷಧ ಮಾಡಿ ರೋಗಿಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡ್ತಾರೆ. ಇದು ಸತ್ಯ ಅಲ್ವಾ...? ಎಲ್ಲಾ ಮುಗಿದ ಮೇಲೆ ಯಾವ ಆಯುರ್ವೇದ ಯಾವ ನಾಟಿ ಔಷಧ ರೋಗಿಗೆ ನಾಟಿ ರೋಗಿಯ ರೋಗವನ್ನು ಗುಣ ಮಾಡುತ್ತದೆ?
ಹೆಚ್ಚಿನ ಯಾವ ರೋಗಿಯೂ ಆರಂಭಿಕ ಹಂತದಲ್ಲಿ ಆಯುರ್ವೇದ, ಯೋಗ, ನಾಟಿಗೆ ಹೋಗುವುದಿಲ್ಲ. ಇಂಗ್ಲಿಷ್ ಮೆಡಿಸನ್ ನಲ್ಲಿ ದೇಹದ ರೋಗ ನಿರೋಧಕ ಶಕ್ತಿ ಮುಕ್ಕಾಲು ಪಾಲು ಕುಂದಿದ ಮೇಲೆ ರೋಗಿ ಗೋಮೂತ್ತ ಆಧಾರಿತವೋ ಆಯುರ್ವೇದ ಮಾದ್ಯಮ ದ ಔಷಧ ಕುಡಿದರೆ ಖಂಡಿತವಾಗಿಯೂ ಪರಿಣಾಮಕಾರಿಯಲ್ಲ.
ಖಂಡಿತವಾಗಿಯೂ ಇವತ್ತು ವಾತಾವರಣ ಆಹಾರ ನೀರು ಎಲ್ಲವೂ ಕುಲುಷಿತ. ಹಾಗೆಯೇ ಮನುಷ್ಯನ ರೋಗ ನಿರೋಧಕ ಶಕ್ತಿ ಕುಂದಿದೆ. ಇದರಿಂದಾಗಿ ಎಲ್ಲಾ ರೀತಿಯ ಔಷಧಗಳನ್ನು ಎದುರಿಸಿ ರೋಗಿಯನ್ನು ಸಾವಿನತ್ತ ದೂಡುವಷ್ಟು ಶಕ್ತಿಯನ್ನು "ರೋಗ" ವೃದ್ದಿಸಿಕೊಂಡಿದೆ.
ಇವತ್ತು ಮನುಷ್ಯನಿಗೆಷ್ಟು ಕಲುಷಿತ ವಿಷಯುಕ್ತ ಆಹಾರ ಸಿಗ್ತಿದೆಯೋ ಗೋವುಗಳಿಗೂ ಅಷ್ಟೇ ಕಲುಷಿತ ವಿಷಯುಕ್ತ ಆಹಾರ ಸಿಗ್ತಿದೆ. ಆದರೆ ಗೋವುಗಳ ದೇಹ ಪ್ರಕೃತಿಯಲ್ಲಿ ವಿಷವುಂಡು ಅಮೃತ ನೀಡುವ ಶಕ್ತಿಯನ್ನು ಭಗವಂತ ಅಥವಾ ನಿಸರ್ಗ ನೀಡಿದೆ.
ಸರಿಯಾದ ಆಹಾರ ಮೇವು ಆರೈಕೆ ಇರುವ ಗೋವುಗಳು ಔಷಧ ಯುಕ್ತ ಹಾಲು ಗೋಮೂತ್ರ ಖಂಡಿತವಾಗಿಯೂ ನೀಡಬಲ್ಲದು, ಅಮೃತದಂತಹ ಔಷಧೀಯ ಗವ್ಯೋತ್ಪನ್ನ ವನ್ನ ನೀಡಬಲ್ಲದು.
"ಬೇವ ಬಿತ್ತಿ ಮಾವ ಬೇಡ ಬಹುದೇ ಮಾನವ?" ಎಂಬ ಕವಿವಾಣಿಯಂತೆ ನಾವು ಏನನ್ನು ಬಿತ್ತಿದೀವೋ ಅದೇ ಫಲವನ್ನು ಉಣ್ಣುತ್ತಿದ್ದೇವೆ. ಇದಕ್ಕೆ ಅಮಾಯಕ ಮುಗ್ದ ಗೋವುಗಳು ಹೊರತಲ್ಲ. ಖಂಡಿತವಾಗಿಯೂ... ವಿಷಮುಕ್ತ ಗವ್ಯೋತ್ಪನ್ನ ನೀಡುವ ಗೋವುಗಳು ಇವೆ.
ಸರಿಯಾದ ರೀತಿಯಲ್ಲಿ ಸದ್ ಬಳಕೆ ಮಾಡಿಕೊಂಡರೆ ಗೋ ಮೂತ್ರ ಖಂಡಿತವಾಗಿಯೂ ಔಷಧವಾಗಿ ಪರಿಣಮಿಸಬಹುದು.
that's all....
- ಪ್ರಬಂಧ ಅಂಬುತೀರ್ಥ
9481801869
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ