ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಭುವನೇಶ್ವರಿ ಹೆಗಡೆಯವರಿಗೆ ವಿಧ್ಯುಕ್ತ ಆಹ್ವಾನ

Upayuktha
0


ಮಂಗಳೂರು: ವಿಶ್ವವಿದ್ಯಾನಿಲಯದ ಆವರಣ ಕೊಣಾಜೆಯಲ್ಲಿ ನಡೆಯುವ ಎರಡು ದಿನಗಳ ದಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನವನ್ನು ವಿಧ್ಯುಕ್ತವಾಗಿ ಹಿಂದಿನ ವರ್ಷದ ಮಂಗಳೂರಿನಲ್ಲಿ ನಡೆದ  ಸಮ್ಮೇಳನ ಆಧ್ಯಕ್ಷರಾದ ಭುವನೇಶ್ವರಿ ಹೆಗಡೆಯವರಿಗೆ ಇಂದಿನ ಸಮ್ಮೇಳನ ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾಕ್ಟರೇಟ್‌ ಧನಂಜಯ ಕುಂಬ್ಳೆ ತಂಡವು ನೀಡಿತು.


ದಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಸಮ್ಮೇಳನ ಖಜಾಂಚಿ ಲಯನ್ ಚಂದ್ರಹಾಸ ಶೆಟ್ಟಿ ಕನ್ನಡದ ಶಾಲು ತೊಡಿಸಿ ಗೌರವ ನೀಡಿದರು. ಭುವನೇಶ್ವರಿ ಹೆಗಡೆ ಅವರು ಕಳೆದ ಬಾರಿಯ ಸಮಯ ಪಾಲನೆಯ ಬಗ್ಗೆ ನೆನಪು ಮಾಡಿದರು. ಹಾಗೂ ಜನರು ಕಡಿಮೆ ಇದ್ದ ಬಗ್ಗೆ ಖೇದ ವ್ಯಕ್ತಪಡಿಸಿದರು ಮತ್ತು ಜನರು ಹೆಚ್ಚು ಬರಲು ಪ್ರಯತ್ನ ಮಾಡುವ ಬಗ್ಗೆ ವಿನಂತಿ ಮಾಡಿದರು.


ನೋಂದಣಿ ಸಮಿತಿಯ ಅಧ್ಯಕ್ಷರಾದ ಸುರೇಂದ್ರ ರೈ ಗ್ರಾಮಚಾವಡಿ ಸ್ವಾಗತಿಸಿದರು. ಸಮ್ಮೇಳನದ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಮಂಗಳೂರು ಕಸಾಪ ಹೋಬಳಿ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ನಿರೂಪಿಸಿ‌ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top