ಮಂಗಳೂರು ವಿವಿ ಕನ್ನಡ ಅಧ್ಯಾಪಕರ ಸಂಘಕ್ಕೆ ಆಯ್ಕೆ

Upayuktha
0


ಮಂಗಳೂರು: ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ, ಮಂಗಳೂರು ವಿಶ್ವವಿದ್ಯಾಲಯ ಪದವಿ ಕನ್ನಡ ಅಧ್ಯಾಪಕರ ಸಂಘ (ವಿಕಾಸ) ದ ನೂತನ ಪದಾಧಿಕಾಗಳನ್ನು ಆಯ್ಕೆ ಮಾಡಲಾಯಿತು. ಡಾ. ಚಿನ್ನಸ್ವಾಮಿ ಎನ್. ಅಧ್ಯಕ್ಷರಾಗಿ, ಡಾ. ಮಾಧವ ಎಂ. ಕೆ . ಕಾರ್ಯದರ್ಶಿಯಾಗಿ,  ಮಲ್ಲಿಕಾ. ಖಜಾಂಚಿಯಾಗಿ, ಡಾ. ಸತೀಶ್ ಚಿತ್ರಾಪು ಉಪಾಧ್ಯಕ್ಷರಾಗಿ, ಹಾಗೂ  ಡಾ. ಅನುರಾಧ ಕುರುಂಜಿ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ.  


ಈ ತಂಡ ಮುಂದಿನ ಎರಡು ವರ್ಷಗಳ ವರಗೆ ಕಾರ್ಯ ನಿರ್ವಹಿಸಲಿದ್ದು,  ಕನ್ನಡ ಸಾಹಿತ್ಯ, ಅಧ್ಯಾಪನ, ಪಠ್ಯಗಳ  ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ, ಮಂಗಳೂರು ವಿ.ವಿ ಮಟ್ಟದ ಕನ್ನಡ ಅಧ್ಯಾಪಕರ ಕುಂದು ಕೊರತೆಗಳನ್ನು ಪರಿಹರಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top