ಅಲೋಶಿಯಸ್ ವಿವಿಯಲ್ಲಿ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆ

Upayuktha
0

 



ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನದ ಕೊಂಕಣಿ ವಿಭಾಗ ಮತ್ತು ಕೊಂಕಣಿ ಸಂಘ ಹಾಗೂ CASK ಇವರ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯ ಪ್ರಯುಕ್ತ ‘ಕೊಂಕಣಿ ವೊವಿಯೊ – ವೇರ್ಸ್’ ಕೊಂಕಣಿ ಕ್ರಿಶ್ಚಿಯನ್ ಭಾಷಿಗರ ಮದುವೆ ಹಾಡುಗಳ ಕಾರ್ಯಾಗಾರವನ್ನು  ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವರಾದ ಡಾ. ಆಲ್ವಿನ್ ಡೆ’ಸಾ ಈ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. CASK ಸಂಘದ ಅಧ್ಯಕ್ಷ ರೊನಾಲ್ಡ್ ಗೋಮ್ಸ್ ರವರು ವೊವಿಯೊ ಹಾಡಿ ತಮ್ಮ ಸಂದೇಶದೊಂದಿಗೆ ವೀಕ್ಷಕರನ್ನ ರಂಜಿಸುತ್ತಾ ಮಾತೃಭಾಷೆ ಕೊಂಕಣಿಗೆ ಸೇವೆ ಸಲ್ಲಿಸಲು ತಾನು ಎಂದಿಗೂ ಸಿದ್ಧ ಎಂದು ಹೇಳಿದರು.

 

ಈ ಕಾರ್ಯಾಗಾರವನ್ನು ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಶಿಕ್ಷಕಿ ಹಾಗೂ ಜನಪ್ರಿಯ ನಟಿ ಸಪ್ನ ಕ್ರಾಸ್ತ ಸುಮಾರು 200 ವಿದ್ಯಾರ್ಥಿ ಗಳಿಗೆ ಪ್ರಾತ್ಯಕ್ಷಿಕೆ ಮುಖಾಂತರ ನಡೆಸಿ ಕೊಟ್ಟರು. ‘ವೊವಿಯೊ – ವೇರ್ಸ್’ ಕೊಂಕಣಿ ಕ್ರಿಶ್ಚಿಯನ್ ಭಾಷಿಗರಲ್ಲಿ ಅದೂ ಮುಖ್ಯವಾಗಿ ಕರಾವಳಿ ಕೊಂಕಣಿ ಜಾನಪದೀಯರಲ್ಲಿ ಪ್ರಮುಖವಾದ ಸಂಸ್ಕೃತಿ.  ಈ ಮದುವೆ ಹಾಡುಗಳನ್ನು ಕೊಂಕಣಿಗರು ಗೋವಾದಿಂದ ವಲಸೆ ಬರುವಾಗ ತಮ್ಮೊಂದಿಗೆ ತಂದು ಬಂದಿದ್ದು, ಇವತ್ತಿಗೂ ಈ ಹಾಡುಗಳು ಮದುವೆ – ರೋಸ್ ಸಂಪ್ರದಾಯದಲ್ಲಿ  ಜೀವಂತವಾಗಿವೆ.


ಈ ಕಾರ್ಯಕ್ರಮವನ್ನು ಕೊಂಕಣಿ ವಿಭಾಗದ ಮುಖ್ಯಸ್ಥೆ ಫ್ಲೋರಾ ಕಾಸ್ತೆಲಿನೊ ಸಂಘಟಿಸಿದ್ದರು. ಕು. ವಿಲೋನ ಡಿಕುನ್ಹಾ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಕು. ಆಶೆಲ್ ಟೆಲ್ಲಿಸ್ ಸ್ವಾಗತಸಿದರು. ‘ಪರ್ಜಳ್’ ಪತ್ರಿಕೆಯ ಸಂಪಾದಕಿ ಕು. ಅನ್ವಿತ ಡಿಕುನ್ಹಾ ವಂದಿಸಿದರು.  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top