ಮಹಾಶಿವರಾತ್ರಿ: ವಿವಿಧ ಬಗೆಯ ಶಿವಲಿಂಗಗಳು

Upayuktha
0

ಮಹಾಶಿವರಾತ್ರಿ ನಿಮಿತ್ತ  ಸನಾತನ ಸಂಸ್ಥೆಯ ವಿಶೇಷ ಲೇಖನ



ಚಲ ಮತ್ತು ಅಚಲ: ಚಲ ಲಿಂಗವನ್ನು ಯಾವುದಾದರೊಂದು ವಿಶಿಷ್ಟ ಪೂಜೆಯನ್ನು ಮಾಡಲು ತಯಾರಿಸುತ್ತಾರೆ. ಶ್ರೀಗಣೇಶ ಚತುರ್ಥಿಗೆ ಯಾವ ರೀತಿ ಶ್ರೀಗಣೇಶನ ನೂತನ ಮೂರ್ತಿಯನ್ನು ತಯಾರಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆಯೋ ಅದೇ ರೀತಿ ಇದನ್ನು ಮಾಡುತ್ತಾರೆ. ಅಚಲ ಲಿಂಗವನ್ನು ಒಂದು ಸ್ಥಳದಲ್ಲಿ ಸ್ಥಾಪಿಸಲಾಗಿರುತ್ತದೆ. ಲಿಂಗಾಯತರು ಕುತ್ತಿಗೆಯಲ್ಲಿ ಧರಿಸುವ ಲಿಂಗಕ್ಕೆ ‘ಚಲ ಲಿಂಗ’ ಎಂದು ಹೇಳುತ್ತಾರೆ.


ಸ್ವಯಂಭೂ ಲಿಂಗಗಳು: ಇವುಗಳಲ್ಲಿ ಬಹಳ ಶಕ್ತಿಯಿರುತ್ತದೆ; ಆದುದರಿಂದಲೇ ಇವು ಭೂಮಿಯ ಒಳಗಿರುತ್ತವೆ. ಅವು ಭೂಮಿಯ ಮೇಲಿದ್ದರೆ ಅವುಗಳಿಂದ ಹೊರಬೀಳುವ ಶಕ್ತಿಯನ್ನು ಭಕ್ತರು ಸಹಿಸಲಾರರು. (ಕಣ್ಣುಗಳಿಂದ ಹೊರಬೀಳುವ ತೇಜದಿಂದ ದರ್ಶನಕ್ಕೆ ಬರುವ ಜನರಿಗೆ ತೊಂದರೆಯಾಗ ಬಾರದೆಂದು ತಿರುಪತಿ ಬಾಲಾಜಿಯ ಕಣ್ಣುಗಳು ಅರ್ಧಮುಚ್ಚಿರುತ್ತವೆ.) ಪೂಜೆಯನ್ನು ಮಾಡುವವರು ನೆಲದ ಮೇಲೆ ಮಲಗಿಕೊಂಡು ಕೆಳಗೆ ಕೈ ಹಾಕಿ ಲಿಂಗದ ಪೂಜೆಯನ್ನು ಮಾಡುತ್ತಾರೆ. 


ಜ್ಯೋತಿರ್ಲಿಂಗಗಳ ನಂತರ ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಶಿವತತ್ತ್ವವಿರುತ್ತದೆ. ಇವು ಶಿವೇಚ್ಛೆಯಿಂದ ತಯಾರಾಗುತ್ತವೆ. ಮುಂದೆ ಯಾವುದಾದರೊಬ್ಬ ಭಕ್ತನಿಗೆ ಸಾಕ್ಷಾತ್ಕಾರವಾಗಿ ಇವುಗಳ ಅಸ್ತಿತ್ವದ ಅರಿವಾಗುತ್ತದೆ ಮತ್ತು ಅವುಗಳ ಪೂಜೆಯು ಪ್ರಾರಂಭವಾಗುತ್ತದೆ.


ಭೂಮಿಗೆ ಸಮಾನವಾಗಿರುವ ಲಿಂಗಗಳು: ಇವುಗಳನ್ನು ಋಷಿ ಅಥವಾ ರಾಜರು ಸ್ಥಾಪಿಸಿರುತ್ತಾರೆ. ಇವುಗಳಲ್ಲಿ ಶಕ್ತಿಯು ಕಡಿಮೆಯಿರುತ್ತದೆ. ಭಕ್ತರಿಗೆ ಈ ಶಕ್ತಿಯನ್ನು ಸಹಿಸಲು ಸಾಧ್ಯವಾಗುತ್ತದೆ. ಪೂಜೆ ಮಾಡುವವನು ಲಿಂಗದ ಪಕ್ಕದಲ್ಲಿರುವ ತಗ್ಗಿನಲ್ಲಿ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾನೆ.


ಭೂಮಿಯ ಮೇಲಿರುವ ಲಿಂಗಗಳು: ಇವುಗಳನ್ನು ಭಕ್ತರು ಸ್ಥಾಪಿಸಿರುತ್ತಾರೆ. ಇವುಗಳಲ್ಲಿ ಎಲ್ಲಕ್ಕಿಂತ ಕಡಿಮೆ ಮತ್ತು ಎಲ್ಲರಿಗೂ ಸಹನವಾಗುವಷ್ಟೇ ಶಕ್ತಿಯಿರುತ್ತದೆ. ಪೂಜೆ ಮಾಡುವವರು ಲಿಂಗದ ಪಕ್ಕದಲ್ಲಿ ಕಟ್ಟಿರುವ ಕಟ್ಟೆಯ ಮೇಲೆ ಕುಳಿತುಕೊಂಡು ಪೂಜೆಯನ್ನು ಮಾಡುತ್ತಾರೆ.


ಎರಡನೆಯ ಮತ್ತು ಮೂರನೆಯ ವಿಧದ ಲಿಂಗಗಳಿಗೆ ‘ಮಾನುಷ ಲಿಂಗ’ ಎನ್ನುತ್ತಾರೆ. ‘ಇವುಗಳನ್ನು ಮನುಷ್ಯರು ತಯಾರಿಸುವುದರಿಂದ ಇವುಗಳಿಗೆ ಮಾನುಷಲಿಂಗ ಎಂಬ ಹೆಸರು ಬಂದಿರಬಹುದು. ಈ ಲಿಂಗಗಳನ್ನು ಸ್ಥಿರಲಿಂಗಗಳೆಂದು ಪರಿಗಣಿಸಲಾಗುತ್ತದೆ. ಇವುಗಳಿಗೆ ಬ್ರಹ್ಮಭಾಗ, ವಿಷ್ಣುಭಾಗ ಮತ್ತು ರುದ್ರಭಾಗ ಎಂದು ಮೂರು ಭಾಗಗಳಿರುತ್ತವೆ. 


ಎಲ್ಲಕ್ಕಿಂತಲೂ ಕೆಳಗಿನ ಭಾಗಕ್ಕೆ ‘ಬ್ರಹ್ಮಭಾಗ’ ಎನ್ನುತ್ತಾರೆ. ಅದು ಚತುಷ್ಕೋನಾಕಾರದ್ದಾಗಿರುತ್ತದೆ. ಮಧ್ಯದ ಅಷ್ಟಕೋನಾಕಾರದ ಭಾಗವನ್ನು ‘ವಿಷ್ಣುಭಾಗ’ ಎನ್ನುತ್ತಾರೆ. ಈ ಎರಡೂ ಭಾಗಗಳು ಭೂಮಿಯ ಒಳಗೆ ಇರುತ್ತವೆ. ಎಲ್ಲಕ್ಕಿಂತಲೂ ಮೇಲಿನ ಉದ್ದನೆಯ ದುಂಡಾದ ಭಾಗಕ್ಕೆ ರುದ್ರಭಾಗ ಎಂಬ ಹೆಸರಿದೆ. ಇದಕ್ಕೆ ಪೂಜೆಯ ಭಾಗವೆಂದೂ ಕರೆಯುತ್ತಾರೆ. 


ಏಕೆಂದರೆ ಪೂಜೆಯ ಸಾಮಗ್ರಿಗಳನ್ನು ಇದರ ಮೇಲೆಯೇ ಅರ್ಪಿಸುತ್ತಾರೆ. ಮೂರ್ತಿಶಾಸ್ತ್ರದ ಗ್ರಂಥಗಳಲ್ಲಿ ರುದ್ರಭಾಗದ ಮೇಲೆ ಕೆಲವು ರೇಖೆಗಳಿರಬೇಕು ಎಂದು ಹೇಳಲಾಗಿದೆ. ಈ ರೇಖೆಗಳಿಗೆ ‘ಬ್ರಹ್ಮಸೂತ್ರಗಳು’ ಎನ್ನುತ್ತಾರೆ. ದೈವಿಕ ಮತ್ತು ಆರ್ಷಕ ಲಿಂಗಗಳ ಮೇಲೆ ಇಂತಹ ರೇಖೆಗಳು ಇರುವುದಿಲ್ಲ.’


ಗಾಳಿಯಲ್ಲಿ ತೇಲಾಡುವ ಲಿಂಗಗಳು: ಪಾದರಸದಿಂದ ತಯಾರಿಸಿದ ಸೋಮನಾಥನ ಲಿಂಗವು ನೆಲದಿಂದ ಐದು ಮೀ. ಎತ್ತರದಲ್ಲಿ ಯಾವುದೇ ಆಧಾರವಿಲ್ಲದೆ ತೇಲಾಡುತ್ತಿತ್ತು. ದರ್ಶನಾರ್ಥಿಗಳು ಅದರ ಕೆಳಗಿನಿಂದ ಹೋಗುತ್ತಿದ್ದರು. ಅದೇ ಲಿಂಗದ ಪ್ರದಕ್ಷಿಣೆಯಾಗುತ್ತಿತ್ತು.


ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶಿವ’


ವಿನೋದ್ ಕಾಮತ್

ರಾಜ್ಯ ವಕ್ತಾರರು, ಸನಾತನ ಸಂಸ್ಥೆ

(ಸಂಪರ್ಕ : 9342599299)



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top