ಕೋಟೇಶ್ವರ: ಜಾನಪದ ಶಿವರಾತ್ರಿ ಸಂಭ್ರಮ, ಭಕ್ತಿ ಸಂಗೀತ ಕಾರ್ಯಕ್ರಮ

Upayuktha
0


ಕುಂದಾಪುರ: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಘಟಕ ಮತ್ತು ಕುಂದಾಪುರ ತಾಲೂಕು ಘಟಕ ವತಿಯಿಂದ ಶ್ರೀ ಮಹತೋಭಾರ ಕೋಟಿಲಿಂಗೇಶ್ವರ ದೇವಾಲಯ ಶ್ರೀ ಕ್ಷೇತ್ರ ಧ್ವಜಪುರ ಕೋಟೇಶ್ವರ ಆಸ್ತಿಕ ಸಮಾಜ ಆಶ್ರಯದಲ್ಲಿ ಜಾನಪದ ಶಿವರಾತ್ರಿ ಸಂಭ್ರಮ ಭಕ್ತಿ ಸಂಗೀತ ಕಾರ್ಯಕ್ರಮ ಫೆ.26 ಶಿವರಾತ್ರಿಯಂದು ದೇವಳದ ಆವರಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ ತಾಳ ಹೊಡೆಯುವ ಮೂಲಕ ಚಾಲನೆ ನೀಡಿ ಶಿವರಾತ್ರಿಯ ವೈಭವದ ಕುರಿತು ಹೇಳಿದರು.


ದೇವಳದ ಮಾಜಿ ಧರ್ಮದರ್ಶಿ ಗೋಪಾಲ ಶೆಟ್ಟಿ ಮಾರ್ಕೋಡ್, ಜಾನಪದ ಮತ್ತು ಶಿವನಿಗೆ ಅವಿನಾಭಾವ ಸಂಬಂಧವಿದೆ. ಶಿವನನ್ನು ಜಾನಪದರು ತಮ್ಮ ಮುಖ್ಯ ಗುರುವಿನಂತೆ ಆರಾಧನೆ ಮಾಡುತ್ತಾರೆ. ಜಾನಪದದ ಸಂಪತ್ತನ್ನು ಉಳಿಸಿ ಬೆಳೆಸಲು ಈ ರೀತಿಯ ಕಾರ್ಯಕ್ರಮ ಪೂರಕ ಎಂದರು.


ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ, ಪರಿಷತ್ ನ ವಿವಿಧ ಕಾರ್ಯಕ್ರಮಗಳು ಮತ್ತು ಜಾನಪದ ಶಿವರಾತ್ರಿ ಕುರಿತು ಸಮಗ್ರ ಮಾಹಿತಿ ನೀಡಿದರು.


ಈ ಸಂದಭ೯ದಲ್ಲಿ ಕುಂದಾಪುರದ ಜಾನಪದ ಆಚರಣೆ ಹಣಬು ಕಲಾವಿದ ಬಸವರಾಜ್ ಪೂಜಾರಿ ಕುಂಭಾಶಿ ಯವರನ್ನು ಮತ್ತು ಆಸ್ತಿಕ ಸಮಾಜದ ಪ್ರಮುಖರಾದ ರವೀಂದ್ರ ಐತಾಳ ರವರನ್ನು ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಕುಂದಾಪುರ ತಾಲೂಕು ಕಜಾಪ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕರ್ವಾಲು ಉಪಸ್ಥಿತರಿದ್ದರು. ನಂತರ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ, ಬಳಗವತಿಯಿಂದ ಭಕ್ತಿ ಸಂಗೀತ ಕಾಯ೯ಕ್ರಮ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top