ಕುಂಭಮೇಳದಲ್ಲಿ ಕನ್ಯಾಡಿ ಶ್ರೀಗಳಿಗೆ ಮಹಾಮಂಡಲೇಶ್ವರ ಪಟ್ಟ: ಈಡಿಗರ ಹರ್ಷ

Upayuktha
0


ಕಲಬುರಗಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಕನ್ಯಾಡಿ ಶ್ರೀರಾಮ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧಿಪತಿಗಳಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಪ್ರಯಾಗ್ರಾಜಿನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಹಾಮಂಡಲೇಶ್ವರ ಪದವಿಗೇರಿಸಿ ಪಟ್ಟಾಭಿಷೇಕ ಮಾಡಿರುವುದಕ್ಕೆ ಕಲ್ಯಾಣ ಕರ್ನಾಟಕದ ಆರ್ಯ ಈಡಿಗ ಹೋರಾಟ ಸಮಿತಿ ಹಾಗೂ ಈಡಿಗರು ಹರ್ಷ ವ್ಯಕ್ತಪಡಿಸಿದ್ದಾರೆ. 


ಜನವರಿ 31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಉತ್ತರ ಭಾರತದ ನಾಗಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯನ್ನು ಕನ್ನಡನಾಡಿನ ಈಡಿಗ, ಬಿಲ್ಲವ ನಾಮಧಾರಿ ನಾಯಕ, ಧೀವರ ಸೇರಿದಂತೆ 26 ಪಂಗಡಗಳ ಶ್ರದ್ಧಾ ಕೇಂದ್ರವಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಗುರುಗಳಿಗೆ ಪ್ರಾಪ್ತಿ ಆಗಿರುವುದು ಈ ಜನಾಂಗಕ್ಕೆ ಹಾಗೂ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಸನಾತನ ಹಿಂದೂ ಸಂಪ್ರದಾಯದ ಗುರುಗಳಿಗೆ ಲಭಿಸಿದ ಸ್ಥಾನಮಾನದಿಂದ ಜನಾಂಗದ ಗೌರವ ಹೆಚ್ಚಾಗಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಎಂ ಕಡೆಚೂರ್ ಹಾಗೂ ಮಾಧ್ಯಮ ವಿಭಾಗಿದ ಕಾರ್ಯದರ್ಶಿ ಡಾ. ಸದಾನಂದ ಪೆರ್ಲ ಹರ್ಷ ವ್ಯಕ್ತಪಡಿಸಿದ್ದಾರೆ.


ನಮ್ಮ ಸಮುದಾಯಕ್ಕೆ ಸಿಕ್ಕ ಈ ಗೌರವದಿಂದ ರಾಷ್ಟ್ರೀಯ ಮಟ್ಟದಲ್ಲಿ ಸಮುದಾಯಕ್ಕೆ ಮನ್ನಣೆ ಸಿಕ್ಕಂತಾಗಿದೆ. ಕನ್ನಡ ನಾಡಿನ ಸಂತ ಪರಂಪರೆಯ ಮತ್ತು ಆಧ್ಯಾತ್ಮಿಕ ಶಕ್ತಿಗೆ ಇದು ದೊಡ್ಡ ಬಲ ನೀಡಲಿದೆ. ಕನ್ಯಾಡಿ ಶ್ರೀಗಳ ಧಾರ್ಮಿಕ ನೇಮ, ನಿಷ್ಠೆ, ಆಚಾರ, ವಿಚಾರ ಸಾಮಾಜಿಕ ಚಿಂತನೆ, ಜನಪರ ಒಲವು ಸದ್ಧರ್ಮ ಹಾದಿಯ ಪ್ರವಚನ ಎಲ್ಲವೂ ಗಣನೆಗೆ ಬಂದು ಮಹಾಮಂಡಲೇಶ್ವರ ದಂತಹ ಸಂತ ಪರಂಪರೆಯ ಶ್ರೇಷ್ಠ ಸ್ಥಾನ ಲಭ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಮಾಲಿಕಯ್ಯ ಗುತ್ತೇದಾರ್, ಜಗದೇವ ಗುತ್ತೇದಾರ್ ಅಭಿನಂದನೆ

ಕನ್ಯಾಡಿ ಶ್ರೀಗಳಿಗೆ ಪ್ರಯಾಗ್ ರಾಜ್ ನಲ್ಲಿ ಮಹಾಮಂಡಲೇಶ್ವರ ಶ್ರೇಷ್ಠ ಅಭಿದಾನ ನೀಡಿ ಸಂತ ಕೂಟದಲ್ಲಿ ಗೌರವ ನೀಡಿರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ. ಕನ್ಯಾಡಿ ಶ್ರೀಗಳ ಧಾರ್ಮಿಕ ಶಕ್ತಿಯನ್ನು ಗುರುತಿಸಿ ಇಂತಹ ದೊಡ್ಡ ಸ್ಥಾನವನ್ನು ಋಷಿ ಪರಂಪರೆಯಲ್ಲಿ ನೀಡಿರುವುದು ಕನ್ನಡ ನಾಡಿನ ಭಾಗ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ.


ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ್, ಬಸಯ್ಯ ಗಾರಂಪಳ್ಳಿ ಶ್ರೀಕಾಂತ್ ಗುತ್ತೇದಾರ್, ಯುವ ಮುಖಂಡರಾದ ನಿತಿನ್ ಗುತ್ತೇದಾರ್, ಹರ್ಷಾನಂದ ಗುತ್ತೇದಾರ್, ರಾಜೇಶ್ ಜಗದೇವ ಗುತ್ತೇದಾರ್, ಕುಪೇಂದ್ರ ಗುತ್ತೇದಾರ್, ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್, ಪ್ರವೀಣ್ ಜತ್ತನ್, ಸುಭಾಷ್ ಗುತ್ತೇದಾರ್, ದಯಾನಂದ ಪೂಜಾರಿ, ಸದಸ್ಯರಾದ ವೆಂಕಟೇಶ ಗುಂಡಾನೂರ್, ರಾಜೇಶ್ ಗುತ್ತೇದಾರ್, ತಿಮ್ಮಪ್ಪ ಗಂಗಾವತಿ ಅಂಬಯ್ಯ ಇಬ್ರಾಹಿಂಪುರ್, ಸುರೇಶ್ ಗುತ್ತೇದಾರ್ ಮಟ್ಟೂರು, ಬೀದರ್ ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ಡಾ. ರಾಜಶೇಖರ್ ಸೇಡಂಕರ್, ಶರಣಯ್ಯ ಗುತ್ತೇದಾರ್, ವೀರಯ್ಯ ಗುತ್ತೇದಾರ್, ಸೋಮರಾಯ ಶಾಖಾಪುರ, ಮಲ್ಲಿಕಾರ್ಜುನ ಕಡೇಚೂರ್, ಮಹೇಶ್ ಗುತ್ತೇದಾರ್, ಅನಿಲ್ ಯರಗೋಲ್ ಮಹೇಶ ಯರಗೋಲ್, ಅಂಬಯ್ಯ ಗುತ್ತೇದಾರ್ ಶಾಬಾದಿ ರಾಜಕುಮಾರ್ ಗುತ್ತೇದಾರ್, ಬಸಯ್ಯ ಗುತ್ತೇದಾರ್ ತೆಲ್ಲೂರ್ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top