ಭಾರತ್ ರಂಗ್ ಮಹೋತ್ಸವ 2025ರಲ್ಲಿ ಕಲಾಭಿ ಥಿಯೇಟರ್

Upayuktha
0

ಅಂತರಾಷ್ಟ್ರೀಯ ರಂಗಭೂಮಿ ಉತ್ಸವ




ಮಂಗಳೂರು: ರಾಷ್ಟ್ರೀಯ ನಾಟಕ ಶಾಲೆ ದೆಹಲಿ (NSD) ಯ ಬೆಂಗಳೂರು ವಿಭಾಗದಲ್ಲಿ ಮೊದಲ ಬಾರಿಗೆ ನಡೆದ ಅಂತರಾಷ್ಟ್ರೀಯ ನಾಟಕೋತ್ಸವ ಭಾರತ್ ರಂಗ್ ಮಹೋತ್ಸವ್ ನ ಉದ್ಘಾಟನೆಯಂದು ಕಲಾಭಿ ಥಿಯೇಟರ್‌ನ ಶ್ರವಣ್ ಹೆಗ್ಗೋಡು ನಿರ್ದೇಶನದ 'ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್' ನಾಟಕವು ಪ್ರದರ್ಶನಗೊಂಡಿತು.


ಫೆ. 1 ರಂದು ರಾಷ್ಟ್ರೀಯ ಬೆಂಗಳೂರಿನ ಕಲಾಗ್ರಾಮ ಸಭಾಂಗಣದನಲ್ಲಿ ಪ್ರದರ್ಶನಗೊಂಡ ಈ ನಾಟಕವು ಅಪಾರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಈ ನಾಟಕದಲ್ಲಿ ವಿಶೇಷವಾಗಿ ಕಾಣಸಿಗುವ ನೈಜ ಗಾತ್ರದ ಅನೆಯು ನೋಡುಗರನ್ನು ಮಂತ್ರಮುಗ್ಧಗೊಳಿಸಿದರೆ, ಪಾತ್ರಧಾರಿಗಳ ಅಭಿನಯವು ಅವರ ಕಣ್ಣಂಚನ್ನು ಒದ್ದೆ ಮಾಡಿತು.


ಕಲಾಭಿ ಥಿಯೇಟರ್ ಪ್ರಾರಂಭವಾಗಿ 4 ವರ್ಷದಲ್ಲಿಯೇ ಇಂತಹ ಅಂತರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾಗಿಯಾಗಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಕಲಾಭಿಯ ಥಿಯೇಟರ್ ಮ್ಯಾನೇಜರ್ ಆದ ಹರ್ಷಿತಾ ಶಿರೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top