ಒಂದು ಬಾರಿ ಸ್ಮರಣೆ ಸಾಲದೇ ಆನಂದತೀರ್ಥರ... ಪೂರ್ಣಪ್ರಜ್ಞರ...

Upayuktha
0


ಧ್ವನವಮಿಯ ಪ್ರಯುಕ್ತ ನಮ್ಮ ಹುಬ್ಬಳ್ಳಿಯಲ್ಲಿ ಜನವರಿಯ 21 ರಿಂದ ಫೆಬ್ರುವರಿಯ 6 ರವರೆಗೆ ನಡೆದ "ವಿಶ್ವಗುರುಗಳ ವಿಜಯೋತ್ಸವ"ದ ಒಂದು ಪಕ್ಷಿನೋಟ.


ಈ ಬಾರಿ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಮಧ್ವನವಮಿಯ ಕಾರ್ಯಕ್ರಮವು ಜರುಗುವ ವಿಷಯವು ಪೂರ್ವದಲ್ಲೇ ತಿಳಿದು, ಅವರ ಭಕ್ತವೃಂದದಲ್ಲಿ ಒಂದು ರೀತಿಯ ಸಂಚಲನವನ್ನು ಸೃಷ್ಟಿಸಿದ್ದು ಅಚ್ಚರಿಯೇನಲ್ಲ. ನಮ್ಮ ದ್ವೈತತತ್ವದ ಪ್ರತಿಪಾದಕರಾದ ಶ್ರೀಮದಾಚಾರ್ಯರ "ಮಧ್ವ ನವಮಿ"ಯನ್ನು ಹುಬ್ಬಳ್ಳಿಯ ಹಲವು ಕಡೆಗಳಲ್ಲಿ ಅತ್ಯಂತ ಸಡಗರದಿಂದ ಆಚರಿಸುವುದು ಮೊದಲಿನಿಂದಲೂ ನಡೆದುಬಂದ ವಾಡಿಕೆ, ಆದರೆ ಈ ಬಾರಿ  ಶ್ರೀಪಾದಂಗಳವರ ಮೂಲಕ ಆಗಮಿಸಿ ಶ್ರೀಮದಾಚಾರ್ಯರೇ ಅನುಗ್ರಹಿಸಿದ್ದು ನಿಜಕ್ಕೂ ಭಕ್ತವಲಯದಲ್ಲಿ ಒಂದು ರೀತಿಯ ಕೃತಾರ್ಥ ಭಾವವನ್ನುಂಟುಮಾಡಿತು.


"ವಿಶ್ವ ಗುರುಗಳ ವಿಜಯೋತ್ಸವ" ವನ್ನು ಆಚರಿಸಲು ಸ್ವಾಮಿಗಳವರಿಂದಲೇ ಸ್ಥಾಪಿತವಾದ' ಶ್ರೀರಾಮ ಸೇವಾ ಪರಿಷತ್ಮ" ತ್ತು ಹುಬ್ಬಳ್ಳಿಯ ಸಕಲ ಪಂಡಿತೋತ್ತಮರ ವೃಂದವು ನಿರಂತರವಾಗಿ ತಮ್ಮ ತನುಮನಧನಗಳಿಂದ ಶ್ರಮಿಸಿದ ಕಾರಣ ಈ ಕಾರ್ಯಕ್ರಮವು ಅತ್ಯಂತ ಯಶಸ್ಸನ್ನ ಕಂಡು ಉಳಿದ  ಊರುಗಳಿಗೆ ಮಾದರಿಯಾಯಿತು. 'ಶ್ರೀರಾಮ ಸೇವಾ ಪರಿಷತ್' ತನ್ನ ನಾಮವನ್ನು ಪ್ರತಿಬಾರಿಯೂ ಸಾರ್ಥಕಮಾಡುತ್ತ ಸಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ, ಅವರ ಚಿಕ್ಕದೋಷಗಳಿಗೂ ಅವಕಾಶವಿಲ್ಲದಂತಹ ಅವಿರತ ಶ್ರಮ ನಿಜಕ್ಕೂ ಶ್ಲಾಘನೀಯ. ಪ್ರತಿ ದಿನ ಅತ್ಯಂತ ಸುವ್ಯವಸ್ಥಿತವಾದ ರಾತ್ರಿ ಉಪಹಾರ & ಪ್ರಸಾದ ಹೀಗೆ ಅನ್ನಸತ್ರ- ಜ್ಞಾನ ಸತ್ರಗಳಲ್ಲಿ ಮಿಂದೆದ್ದ ನಮಗೆ ಇಲ್ಲಿಯೇ ಕುಂಭಮೇಳದಲ್ಲಿ ಪಾಲ್ಗೊಂಡ ಪುಣ್ಯವನ್ನು ದೊರಕಿಸಿದ ಶ್ರೀಮಠದ & ಶ್ರೀರಾಮ ಸೇವಾ ಪರಿಷತ್ತಿನ ವ್ಯವಸ್ಥಾಪಕರಿಗೆ ಅನಂತಾನಂತ ನಮನಗಳು.

 

ಇನ್ನು ಶ್ರೀಮಠದಲ್ಲಿ ಪ್ರತಿದಿನ ಸಂಜೆ ಸುಮಾರು 15 ದಿನಗಳವರೆಗೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು & ಹಲವಾರು ಹಿರಿಯ ಪಂಡಿತರ ಪ್ರವಚನಗಳು ಜರುಗುತ್ತಿದ್ದವು. ದಿನದಿಂದ ದಿನಕ್ಕೆ ಹೆಚ್ಚಿನ ಆಕರ್ಷಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವಿಜಯೋತ್ಸವವನ್ನು ಇನ್ನಷ್ಟು ಕಳೆಗಟ್ಟುವಂತೆ ಮಾಡುವಲ್ಲಿ ಯಶಸ್ವಿಯಾದವು. 'ಸೌರಭ ದಾಸಸಾಹಿತ್ಯ ವಿದ್ಯಾಲಯ'ದ ವಿದ್ಯಾರ್ಥಿನಿಯರಾದ ನಾವು ಕೆಲವು ಸದಸ್ಯೆಯರು ಸೇರಿ 'ಶ್ರೀ ಜಗನ್ನಾಥದಾಸರು' ಎಂಬ ರೂಪಕವನ್ನು ಮೊಟ್ಟಮೊದಲ ಬಾರಿ ಪ್ರಸ್ತುತಪಡಿಸಿ ನಮ್ಮ ಸೇವೆಯನ್ನು ಸಲ್ಲಿಸಿ ಧನ್ಯರಾದೆವು. ಈ ಸದವಕಾಶವನ್ನು ಕಲ್ಪಿಸಿದ ಸೌರಭದ ಸಂಚಾಲಕರಾದ ಶ್ರೀಮತಿ ಸಿಂಧು ಹುಂಡೆಕಾರ ವೈನಿಯವರಿಗೆ ಅನಂತ ಧನ್ಯವಾದಗಳು. ಹಿರಿಯರಾದ ಶ್ರೀಮತಿ ವನಜಾ ಕಾಟೋಟೆ ಮಾಮಿಯವರಿಗೂ ಹೃತ್ಪೂರ್ವಕ ಧನ್ಯವಾದಗಳು. ಒಂದು ಲಕ್ಷ ಮಧ್ವನಾಮ ಪಾರಾಯಣದ ಸಂಕಲ್ಪವು ಒಂದು ಲಕ್ಷವನ್ನು ದಾಟಿ ಹೆಚ್ಚಿನ 30,000 ಪಾರಾಯಣ ಮಾಡಿದ ಸಾಧಕಿಯರೆಲ್ಲರ ಇಷ್ಟಾರ್ಥಗಳು ಪೂರ್ಣವಾಗುವದರಲ್ಲಿ ಯಾವುದೇ ಸಂದೇಹಗಳಿಲ್ಲ.


ಇನ್ನು ಕೊನೆಯ ದಿನ ಮಧ್ವನವಮಿಯಂದು ನಡೆದ 108 ಪವಮಾನ ಹೋಮಗಳು ಮತ್ತು ಶ್ರೀಪಾದಂಗಳವರ ಶ್ರೀರಾಮದೇವರ ಪೂಜಾವೈಭವವನ್ನು ಕಣ್ಣಾರೆ ಕಂಡ ಪ್ರತಿಯೊಬ್ಬರ ಕಣ್ಮನಗಳು ಪಾವನವಾದವು. ಅಂದು ಸಂಜೆಯ ಶೋಭಾಯಾತ್ರೆಯನ್ನು ಬಣ್ಣಿಸಲು ಪದಗಳೇ ಇಲ್ಲವೆಂಬಂತಹ ಭಾವ, ಇಂಥ ವೈಭವೋಪೇತ ಶೋಭಾಯಾತ್ರೆಯಲ್ಲಿ ಶ್ರೀಪಾದಂಗಳವರೊಂದಿಗೆ ಹೆಜ್ಜೆಹಾಕಿದ ಪ್ರತಿಯೊಬ್ಬರ ಜನ್ಮಸಾರ್ಥಕವಾದ ಕ್ಷಣಗಳವು, ಇಡೀ ದೇವಲೋಕವೇ ಧರೆಗಿಳಿದು ಬಂದ ಅನುಭವ. ಶ್ರೀಹರಿಯ ದಶಾವತಾರಗಳ ವೇಷಧಾರಿಗಳು, ಆನೆ, ಕುದುರೆ ಮತ್ತು ಒಂಟೆಗಳೊಂದಿಗೆ ಭಜನಾ ಮಂಡಳಿಗಳ ಕೋಲಾಟ, ನರ್ತನ ಸೇವೆಗಳಿಂದ ಇಡೀ ವಾತಾವರಣವು ಭಕ್ತಿಯ ಪರಾಕಾಷ್ಠೆ ತಲುಪಿತ್ತು. ಕೊನೆಯಲ್ಲಿ ಶ್ರೀಪಾದಂಗಳವರ ಅಮೃತೋಪದೇಶವನ್ನು ಕೇಳಿದ ಎಲ್ಲ ಆಸ್ತಿಕರಿಗೆ ಶ್ರೀಮದಾಚಾರ್ಯರ ಸಾಕ್ಷಾತ್ ದರ್ಶನವಾದ ಧನ್ಯತಾಭಾವ. ಅವರ ಅಮೃತ ಹಸ್ತಗಳಿಂದ ಫಲಮಂತ್ರಾಕ್ಷತೆ ಸ್ವೀಕರಿಸಿ ಮರಳುವಾಗ ಎಲ್ಲರ ಮನಗಳು ಇಂತಹ ಗುರುಗಳನ್ನು ಪಡೆದ ಸರ್ವೋತ್ಕ್ರಷ್ಟ ಮಧ್ವಮತದಲ್ಲಿ ಜನಿಸಿದ ನಾವೇ ಧನ್ಯರು ಎಂಬುದಾಗಿತ್ತು.


- ಶ್ರೀಮತಿ ವೀಣಾ ಬರಗಿ ಹುಬ್ಬಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top