ನಿನ್ನ ಕಣ್ಣಿನಲ್ಲಿ ಯಾವ ಮರ್ಮವಿದೆಯೋ ನಾ ಕಾಣೆ,
ಈ ನಿನ್ನ ಕಣ್ಣಗಳನ್ನು ಕಂಡಾಗೆಲ್ಲ ಕುಳಿತು ಬಿಡುವೆ ಹಾಗೆ ಸುಮ್ಮನೆ...
ನಿನ್ನ ನೋಡಿದ ಕ್ಷಣದಿಂದ ಮೂಡಿದೆ ಮನದಲ್ಲಿ ಹೊಸ ಭಾವನೆ..
ಈಗಂತೂ ಹಗಲು, ಇರಳು ನಿನ್ನದೇ ಯೋಚನೆ..
ಒಮ್ಮೆ ನಕ್ಕು ಬಿಡು ಹುಡುಗಿ ಹಿಂತಿರುಗಿ ನೋಡುತ ನನ್ನನೇ,
ಆಗ ಕಡಿಮೆ ಆದರೂ ಆಗಬಹುದೇನೋ ನನ್ನ ಯಾತನೆ...
ಯಾವ ಕವಿಯು ಮಾಡಲಾರ ನಿನ್ನ ನಶೆ ತುಂಬಿದ ಕಣ್ಣಿನ ವರ್ಣನೆ...
ಈ ಕಣ್ಣನ್ನು ನಿನ್ನ ಮುದ್ದಾದ ಮುಖಕ್ಕೆ ಇಟ್ಟ ಆ ಬ್ರಹ್ಮನಿಗೆ ನನ್ನ ವಂದನೆ....❤️
- ಸರಸ್ವತಿ ವಿಶ್ವನಾಥ ಪಾಟೀಲ್, ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ