ನೃತ್ಯ ಲೋಕದ ಸಾಧಕಿ ಗೌರಿ

Upayuktha
0

ಇವರು ಪಡುಬಿದ್ರಿಯ ಶ್ರೀಮತಿ ಸುಮಾ ಸದಾನಂದ ಅವರ ದ್ವಿತೀಯ ಪುತ್ರಿ ಕುಮಾರಿ ಗೌರಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ತನ್ನ ನೃತ್ಯ ಅಭಿನಯವನ್ನು ಅತಿ ಕಿರಿಯ ವಯಸ್ಸಿನಲ್ಲಿ ಇವರು ಪ್ರಾರಂಭಿಸಿದರು. ಸರಸ್ವತಿ ಕಲಾ ಡ್ಯಾನ್ಸ್ ಸ್ಟುಡಿಯೋ ಪಡುಬಿದ್ರಿ ಹಾಗೂ ಪುತ್ತೂರಿನ ಹರೀಶ್ ಎನ್ ಆಚಾರ್ಯರವರ ನಿರ್ದೇಶನ, ಸಂಯೋಜನಯಲ್ಲಿ ಮೂಡಿಬಂದ ಐತಿಹಾಸಿಕ ಶ್ರೀ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಸತ್ಯ ಕಥೆ ಆಧಾರಿತ ಪೌರಾಣಿಕ ವಿಭಿನ್ನ ಶೈಲಿಯ ನೃತ್ಯ ವೈಭವದ ಒಂದೇ ಪ್ರದರ್ಶನದಲ್ಲಿ ಶಿವ, ಲಕ್ಷ್ಮಿ ಹಾಗೂ ಮೂಕಾಂಬಿಕೆ ಎಂಬ 3 ಮುಖ್ಯ ವಿಭಿನ್ನ ಪಾತ್ರದೊಂದಿಗೆ ಅದ್ಭುತ ಅಭಿನಯ ಮಾಡಿ ದೊಡ್ಡ ಸಾಧನೆ ಮಾಡಿರುವ ನೃತ್ಯ ಕಲಾವಿದೆ.


ಇವರು 2019ನೇ ಆಗಸ್ಟ್ 4ರಂದು ಪಡುಬಿದ್ರೆ ಸರಸ್ವತಿ ಕಲಾ ನೃತ್ಯ ಕೇಂದ್ರದಲ್ಲಿ ನೃತ್ಯ ತರಗತಿ ಸೇರಿದರು. ಗುರುಗಳಾಗಿ ಹರೀಶ್ ಎನ್. ಆಚಾರ್ಯರ  ಮಾರ್ಗದರ್ಶನದಂತೆ ಗುರುವಿಗೆ ತಕ್ಕ ಶಿಷ್ಯೆಯಾಗಿ ಹಲವಾರು ನೃತ್ಯ ಪ್ರದರ್ಶನ ಹಾಗೂ ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಸಿಕ್ಕ ಪುರಸ್ಕಾರಗಳು ಹಲವಾರು.


⭐ Nitte University state level dance competition runner up 

⭐ Always state level dance competition winners.

⭐ ನಮ್ಮ ಟಿವಿಯ ಡ್ಯಾನ್ಸ್ ವಾರಿಯರ್ಸ್, ಬಲೆಚಾತುರ್ಪು ತೊಜಾಲೆ, ಕಾರ್ಯಕ್ರಮ ನೃತ್ಯ ಪ್ರದರ್ಶನ ,

⭐ ನಮ್ಮ ಟಿವಿಯ ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ನಲ್ಲಿ ನೃತ್ಯ ಸಂಯೋಜನೆ ,

⭐ State level appu dance competition runner up

ಹಾಗೂ 2024ರಲ್ಲಿ 

⭐ Max Life insurance company ಕಡೆಯಿಂದ ಕಲರತ್ನ ಪ್ರಶಸ್ತಿ,

⭐ Zee Kannada dance Karnataka dance ನೃತ್ಯ,

⭐ Colours Kannada mahaShakti serial ನಲ್ಲಿ ಗುರುಗಳೊಂದಿಗೆ ಸಂಯೋಜನೆ ಹಾಗೂ ನೃತ್ಯಕ್ಕೆ ಬೇಕಾಗುವ ವಸ್ತ್ರವನ್ನು ತನ್ನ ಕೈಯಿಂದಲೇ ಹೊಲಿದು ಸಿದ್ಧಪಡಿಸಿಕೊಳ್ಳುತ್ತಾರೆ. ಹಾಗೂ ತನಗೆ ತಾನೇ ವರ್ಣ ಅಲಂಕಾರ ಮಾಡಿಕೊಂಡು ಪ್ರದರ್ಶನಕ್ಕೆ ಸಿದ್ದವಾಗುತ್ತಾರೆ.


ಇಷ್ಟು ಚಿಕ್ಕ ವಯಸ್ಸಲ್ಲಿ ಇಷ್ಟೊಂದು ದೊಡ್ಡ ಸಾಧನೆ ಮಾಡಿರುವ ಗೌರಿ ಅವರ ಮುಂದಿನ ನೃತ್ಯ ಲೋಕದ ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಿ ರಾಷ್ಟ ಮಟ್ಟದಲ್ಲಿ ಗುರುತಿಸುವಂತೆ ಆಗಲಿ. ನೃತ್ಯ ಸರಸ್ವತಿ, ನಟರಾಜ ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ.



-ಪ್ರಿಯಾ ಸುಳ್ಯ  

ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ನಿ. ಸುಳ್ಯ ಶಾಖೆ

ದಕ್ಷಿಣ ಕನ್ನಡ ಜಿಲ್ಲೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top