ಮಂಗಳೂರು: ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸಿದ ಆರ್ಚ್ ಫಾರ್ಮಾ ಲ್ಯಾಬ್ಸ್ ಜಿಪಿಎಲ್ ಉತ್ಸವ- 2025 ಭಾನುವಾರ ರಾತ್ರಿ ವರ್ಣರಂಜಿತವಾಗಿ ಅಂತ್ಯಗೊಂಡಿತು. ಅವತಾರ್ ಇಲೆವೆನ್ ಮಲ್ಪೆ ಜಿಪಿಎಲ್ ಟ್ರೋಫಿ 2025 ಗೆದ್ದು ಬೀಗಿದರೆ ಡೆಡ್ಲಿ ಫ್ಯಾಂಥರ್ಸ್ ಮೊದಲ ರನ್ನರ್ ಅಪ್ ಆಗಿ ಕೊಡಿಯಾಲ್ ಸೂಪರ್ ಕಿಂಗ್ಸ್ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವು.
ಒಟ್ಟು ಮೂರು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಕರಾವಳಿ ಕರ್ನಾಟಕ, ಕೇರಳ, ಮಹಾರಾಷ್ಟ್ರ, ತೆಲಂಗಾಣ ಸಹಿತ ಕರ್ನಾಟಕದ ವಿವಿಧ ಪ್ರದೇಶಗಳ ಒಟ್ಟು 16 ತಂಡಗಳು ಪ್ರತಿಷ್ಠಿತ ಜಿಪಿಎಲ್ ಟ್ರೋಫಿಗಾಗಿ ಬಿರುಸಿನ ಪ್ರದರ್ಶನವನ್ನು ನೀಡಿದವು. ಸರಣಿ ಶ್ರೇಷ್ಟ ಪ್ರಶಸ್ತಿ ರಾಯಲ್ ಚಾಲೆಂಜರ್ಸ್ ಬಾಲಂಬೆಟ್ಟು ತಂಡದ ಆದಿತ್ಯ ಸಕರದಂಡೆ ಅವರಿಗೆ ಒಲಿಯಿತು. ಅವರಿಗೆ ಪೈ ಸೇಲ್ಸ್ ವತಿಯಿಂದ ಹೊಚ್ಚ ಹೊಸ ಬ್ರಾಂಡಿನ ಸುಝುಕಿ ಅವನೀಸ್ ದ್ವಿಚಕ್ರ ವಾಹನ ಮತ್ತು ಬ್ಯಾಟ್ ಕಿಟ್ ನೀಡಿ ಪುರಸ್ಕರಿಸಲಾಯಿತು.
ಫೈನಲ್ ನ ಪಂದ್ಯಶ್ರೇಷ್ಟರಾಗಿ ಅವತಾರ್ ಇಲೆವೆನ್ ಮಲ್ಪೆ ತಂಡದ ಆದಿತ್ಯ ಭಟ್, ಅದೇ ತಂಡದ ನಿತಿನ್ ಕೆ ಉತ್ತಮ ದಾಂಡಿಗರಾಗಿ ಹಾಗೂ ಗುರುದಾಸ್ ಶೆಣೈ ಉತ್ತಮ ಎಸೆತಗಾರ ಹಾಗೂ ವೇದಾಂತ್ ಭಟ್ ಉದಯೋನ್ಮುಖ ಆಟಗಾರ ಪ್ರಶಸ್ತಿಯಿಂದ ಪುರಸ್ಕೃತರಾದರು.
ಸಮಾರೋಪ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಪೈ ಸೇಲ್ಸ್ ನ ಗಣಪತಿ ಪೈ, ಅರುಣ್ ಪೈ, ಉಪೇಂದ್ರ ಟ್ರೇಡಿಂಗ್ ನ ಸಂದೇಶ್ ಶೆಣೈ, ವಿ ಬಜಾರ್ ನ ಅರುಣ್ ಭಟ್, ಉದ್ಯಮಿ ರಾಘವೇಂದ್ರ ಕುಡ್ವ, ಫುಜ್ಲಾನಾ ಗ್ರೂಪ್, ಆಭರಣ ಉಡುಪಿ, ಎಂಜಿಬಿಡಬ್ಲೂ, ಸ್ಮಾರ್ಟ್ ಬಜಾರ್, ಅರುಣಾ ಮಸಾಲಾ, ಸೆಂಚೂರಿ, ಡಿಬಿಎಸ್, ಜಯಲಕ್ಷ್ಮಿ ಸಿಲ್ಕ್ಸ್ ಮಂಗಳೂರು ಇದರ ಪ್ರಮುಖರು, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಹನುಮಂತ ಕಾಮತ್, ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು ಹಾಗೂ ಯೂತ್ ಆಫ್ ಜಿಎಸ್ ಬಿ ಸದಸ್ಯರು, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕಿರಣ್ ಶೆಣೈ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ