ಮಹಾಕುಂಭ ಮೇಳ 'ನಿಷ್ಪ್ರಯೋಜಕ' ಎಂದ ಲಾಲು ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Upayuktha
0


ಬೆಂಗಳೂರು: ಮಹಾಕುಂಭ ಮೇಳವನ್ನು 'ನಿಷ್ಪ್ರಯೋಜಕ' ಎಂದು ಕರೆದ ಲಾಲು ಪ್ರಸಾದ ಯಾದವ್ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.


144 ವರ್ಷಗಳಲ್ಲಿ ಒಮ್ಮೆ ಬರುವ ಮಹಾಕುಂಭ ಮೇಳಕ್ಕೆ ಭಾರತದ 50 ಕೋಟಿಗೂ ಹೆಚ್ಚು ಹಿಂದೂ ಭಕ್ತರು ಮತ್ತು 50 ಕ್ಕೂ ಹೆಚ್ಚು ದೇಶಗಳ ಲಕ್ಷಾಂತರ ವಿದೇಶಿಗರು ಹೆಚ್ಚಿನ ಭಕ್ತಿಯಿಂದ ಬರುತ್ತಿದ್ದಾರೆ ಮತ್ತು ಆನಂದವನ್ನು ಅನುಭವಿಸುತ್ತಿದ್ದಾರೆ. ಪ್ರಪಂಚದಾದ್ಯಂತದ ವಿಜ್ಞಾನಿಗಳು, ವಿದ್ವಾಂಸರು ಮತ್ತು ಚಿಂತಕರು ಮಹಾಕುಂಭದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಗಮನಿಸುತ್ತಾರೆ. ಅಂತಹ ಜಾಗತಿಕ ಉತ್ಸವವನ್ನು 'ನಿಷ್ಪ್ರಯೋಜಕ' ಎಂದು ಕರೆಯುವ ಮಾಜಿ ಕೇಂದ್ರ ರೈಲ್ವೆ ಸಚಿವ ಮತ್ತು ಆರ್‍‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಇವರು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಒತ್ತಾಯಿಸಿದ್ದಾರೆ.


ದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಲಾಲು ಪ್ರಸಾದ ಯಾದವ್ ಅವರನ್ನು ಮಹಾಕುಂಭ ಮೇಳದ ಜನಸಂದಣಿಯ ಬಗ್ಗೆ ಕೇಳಿದಾಗ, "ಕುಂಭಕ್ಕೆ ಯಾವುದೇ ಅರ್ಥವಿಲ್ಲ. ಕುಂಭ ನಿಷ್ಪ್ರಯೋಜಕ" ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇದನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.


ಲಾಲು ಪ್ರಸಾದ ಯಾದವ್ ಅವರು ಎಂದಾದರೂ ಇತರ ಧರ್ಮಗಳ ಯಾತ್ರೆಗಳ ಬಗ್ಗೆ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆಯೇ? ಹಿಂದೂ ಧರ್ಮ ಮತ್ತು ಅದರ ಶ್ರದ್ಧಾಸ್ಥಾನಗಳನ್ನು ಅವಮಾನಿಸುವ ಈ ಪ್ರವೃತ್ತಿಯನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಮೋಹನ್ ಗೌಡ ಹೇಳಿದರು.


ಹಲವು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನಂತರವೂ ಅಪರಾಧಗಳ ಬಗ್ಗೆ ಪಶ್ಚಾತ್ತಾಪ ಪಡದ ಲಾಲು ಪ್ರಸಾದ ಯಾದವ್ ಜಾಮೀನಿನ ಮೇಲೆ ಹೊರಗಿರುವಾಗ ಹಿಂದೂ ಸಮಾಜದ ಶ್ರದ್ಧಾಸ್ಥಾನಗಳನ್ನು ಅವಮಾನಿಸುವ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇದು ಸಮಾಜದಲ್ಲಿ ಬಿರುಕು ಮೂಡಿಸುವ ಮತ್ತು ಹಿಂದೂಗಳ ಭಾವನೆಗಳನ್ನು ಕೆರಳಿಸುವ ಪ್ರಯತ್ನವಾಗಿದೆ. ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಮಿತಿಯು ಹೇಳಿದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top