ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ ಪ್ರತಿ ವರ್ಷದಂತೆ ಈ ವರ್ಷವೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 8 ಶನಿವಾರ, 9 ಭಾನುವಾರ “ದಾವಣಗೆರೆಯ ಗೃಹಿಣಿ ಸ್ಪರ್ಧೆ” ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ತಿಳಿಸಿದ್ದಾರೆ.
ನಾಲ್ಕು ಗೋಡೆಗಳ ಮದ್ಯವಿರುವ ಅಡಿಗೆ ಮನೆಗೆ ಸೀಮಿತವಾದ, ಅವರಲ್ಲಿ ಹುದುಗಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸುವ ಸೂಕ್ತವಾದ ವೇದಿಕೆಯನ್ನು ಕಲ್ಪಿಸುವ ಸದುದ್ದೇಶದಿಂದ ಹಮ್ಮಿಕೊಳ್ಳಲಾದ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರು ದಿನಾಂಕ 25-02-2025ರೊಳಗೆ ಕಲಾಕುಂಚ ಕಛೇರಿಗೆ ಆಗಮಿಸಿ ಪ್ರವೇಶ ಪತ್ರ ಭರ್ತಿ ಮಾಡಿಕೊಡಬೇಕಾಗಿ ಕಲಾಕುಂಚ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಲಲಿತಾ ಕಲ್ಲೇಶ್ ತಿಳಿಸಿದ್ದಾರೆ.
ಸ್ಪಧೆಯಲ್ಲಿ ಭಾಗವಹಿಸುವವರು ಸಾಂಪ್ರದಾಯಕ ಉಡುಗೆ, ತೊಡುಗೆಯೊಂದಿಗೆ “ಆಕರ್ಷಕ ಗೃಹಿಣಿ”, ಸ್ಪರ್ಧೆ, ಜಾಣ ಗಣಿತ, ಜಾಣ ಒಗಟು, ದಾವಣಗೆರೆ ಇತಿಹಾಸ ಪ್ರಶ್ನೋತ್ತರ, ರಾಮಾಯಣ, ಮಹಾಭಾರತ ಕುರಿತು ಮಾಹಿತಿ, ಮಹಿಳೆಯರು ಬಾಲ್ಯದಲ್ಲಿ ಶಾಲೆಗಳಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಉತ್ತರಿಸುವ ಅನುಭವ ಆಗುತ್ತದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಭಾಗವಹಿಸಿದವರಿಗೆ ಅವರದೇ ಆಕರ್ಷಕವಾದ ಭಾವಚಿತ್ರದೊಂದಿಗೆ, ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ, ಅಭಿನಂದನಾ ಪತ್ರವನ್ನು ವೇದಿಕೆಯಲ್ಲಿ ವಿತರಿಸಲಾಗುವುದು ಹೆಚ್ಚಿನ ಮಾಹಿತಿಗೆ 9743897578, 9844691391, 9538732777 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಈ ಸಂಸ್ಥೆ ಸಂಘಟನಾ ಕಾರ್ಯದರ್ಶಿ ಕುಸುಮಾ ಲೋಕೇಶ್ ಪ್ರಕಟಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ