ಮಹಾ ಶಿವರಾತ್ರಿ ಪ್ರಯುಕ್ತ ರಾಜ್ಯ ಮಟ್ಟದ “ಅಂಚೆ ಕುಂಚ” ಚಿತ್ರ ಸ್ಪರ್ಧೆ

Upayuktha
0


ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ “ಮಹಾ ಶಿವರಾತ್ರಿ” ಪ್ರಯುಕ್ತ 50 ಪೈಸೆ ಅಂಚೆ ಕಾರ್ಡಿನಲ್ಲಿ ರಾಜ್ಯ ಮಟ್ಟದ ಉಚಿತವಾಗಿ ಈಶ್ವರನ ಚಿತ್ರ ಬರೆಯುವ “ಅಂಚೆ ಕುಂಚ” ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. 


ಸ್ಪರ್ಧಿಗಳ ವಯೋಮಾನದಂತೆ ವಿವಿಧ ವಿಭಾಗಗಳಾಗಿ ವಿಂಗಡಿಸುತ್ತೇವೆ. ದಿನಾಂಕ 25-2-2025ರೊಳಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ “ಕನ್ನಡ ಕೃಪಾ” ಕುವೆಂಪು ರಸ್ತೆ, ಕೆ.ಬಿ.ಬಡಾವಣೆ, ದಾವಣಗೆರೆ-577002. ಈ ವಿಳಾಸಕ್ಕೆ ಕಳಿಸಬೇಕಾಗಿದೆ. 


ಅಂಚೆ ಕಾರ್ಡಿನಲ್ಲಿ ಶಿವನ ಚಿತ್ರ ಬರೆಯುವ ಸ್ಪರ್ಧಿಗಳು ಕನ್ನಡದಲ್ಲಿ ತಮ್ಮ ವಿಳಾಸ, ವಯಸ್ಸು, ವ್ಯಾಟ್ಸಪ್ ಸಂಖ್ಯೆಯನ್ನು ಕಳಿಸಬೇಕು. ಆಂಗ್ಲ ಭಾಷೆಯಲ್ಲಿ ವಿಳಾಸವಿದ್ದರೆ ಸ್ವೀಕರಿಸುವುದಿಲ್ಲ. ಯಾವುದೇ ಸಭೆ, ಸಮಾರಂಭ ಇಲ್ಲದೇ ಬಹುಮಾನ ವಿಜೇತರ ವ್ಯಾಟ್ಸಪ್‌ಗೆ ಅವರವರ ಫಲಿತಾಂಶ ಅಭಿನಂದನಾ ಪತ್ರ ಕಳಿಸಲಾಗುವುದು ಹೆಚ್ಚಿನ ಮಾಹಿತಿಗೆ 9538732777 ಈ  ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.



Post a Comment

0 Comments
Post a Comment (0)
To Top