ದಾವಣಗೆರೆ: ಡಿ.ಸಿಎಂ. ಟೌನ್‌ಶಿಪ್‌ನಲ್ಲಿ ಇರುವ ಗೋಲ್ಡನ್ ಪಬ್ಲಿಕ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಫೆಬ್ರವರಿ 15 ರಂದು ಶನಿವಾರ ಸಂಜೆ 4 ಗಂಟೆಗೆ ಗೋಲ್ಡನ್ ವಿದ್ಯಾಸಂಸ್ಥೆಯ ಆವರಣದಲ್ಲಿ “ಗೋಲ್ಡನ್ ಉತ್ಸವ” ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿಗಳಾದ ಕುಸುಮಾ ಶಿವಕುಮಾರ್ ತಿಳಿಸಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ಹರಿಹರದ ಕಂಬಳಿಮಠದ ಪ್ರವಚನಾಚಾರ್ಯ ಪೂಜ್ಯ ಶ್ರೀ ಗಂಗಾಧರ ಸ್ವಾಮೀಜಿಯವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಿವಕುಮಾರ್ ಕೆ.ಎಂ. ವಹಿಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಾವಣಗೆರೆ ಸಂಸದರಾದ ಡಾ|| ಪ್ರಭಾ ಮಲ್ಲಿಕಾರ್ಜುನ್, ಚಿತ್ರದುರ್ಗದ ಶಾಸಕರಾದ ಕೆ.ಸಿ. ವೀರೇಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಜಿ., ದಾವಣಗೆರೆ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ ಕೊಟ್ರೇಶ್ ಜಿ., ದಕ್ಷಿಣ ವಲಯದ ಶಿಕ್ಷಣಾಧಿಕಾರಿಗಳಾದ ಪುಷ್ಪಲತಾ ಎನ್., ಬೆಂಗಳೂರಿನ ಕೃಪ ಸಂಘದ ರಾಜ್ಯಾಧ್ಯಕ್ಷರಾದ ಲೋಕೇಶ್ ತಾಳೀಕಟ್ಟೆ, ಗೋಲ್ಡನ್ ಪಬ್ಲಿಕ್ ಶಾಲೆಯ ಸಂಯೋಜಕರಾದ ಮಂಜುನಾಥ್ ಕೆ.ಬಿ, ಜರೀಕಟ್ಟೆಯ ಯುವ ಮುಖಂಡರಾದ ಅಜ್ಜಪ್ಪ ಎಸ್.ಬಿ., ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ್ ಟಿ. ಆಗಮಿಸಲಿದ್ದಾರೆ.
ಸಮಾರಂಭದ ನಂತರ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿದೆ ಎಂದು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮಾಲಾ ಮಂಜುನಾಥ್ ಪ್ರಕಟಿಸಿದ್ದಾರೆ. ಶೈಕ್ಷಣಿಕ ಕಾಳಜಿಯ ಮಕ್ಕಳು ಪೋಷಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಜೃಂಭಣೆಯ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಗೋಲ್ಡನ್ ಪಬ್ಲಿಕ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ