ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ ಬಂಟರ ಸಮುದಾಯದ ಕ್ರೀಡಾಹಬ್ಬ
ಮಂಗಳೂರು: ಯೂತ್ ಬಂಟ್ಸ್ ಮಂಗಳೂರು ನೇತೃತ್ವದಲ್ಲಿ ಫೆ. 7, 8 ಮತ್ತು 9ರಂದು ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಪಂದ್ಯಾಟಗಳು ನಡೆಯಲಿವೆ. ಬಂಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟಗಳನ್ನು ಯುವ ಸಂಘಟಕರಾದ ಸಚಿನ್ ರಾಜ್ ರೈ ಹಾಗೂ ಯುವ ಉದ್ಯಮಿ ಪ್ರಸಾದ್ ಶೆಟ್ಟಿ ಆಯೋಜಿಸುತ್ತಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ (ಫೆ.4) ಬೆಳಗ್ಗೆ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಸಂಘಟಕರು ಬಂಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟಗಳ ವಿವರವಾದ ಮಾಹಿತಿ ನೀಡಿದರು.
ಈ ಪಂದ್ಯಾಟದಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸುತ್ತಿದ್ದು, ತಂಡಗಳ ವಿವರ ಹೀಗಿದೆ:
ತುಳುನಾಡು ಟೈಗರ್ಸ್ (ಮಾಲೀಕರು: ರಕ್ಷಿತ್ ಶೆಟ್ಟಿ ಮತ್ತು ಅಜಯ್ ಶೆಟ್ಟಿ), ಲೆಜೆಂಡ್ ಬಂಟ್ಸ್ (ಮಾಲೀಕರು: ಮಿಥುನ್ ರೈ, ಸಹ ಮಾಲೀಕರು: ಪ್ರವೀಣ್ ಚಂದ್ರ ಆಳ್ವ ಮತ್ತು ನಿತಿನ್ ಶೆಟ್ಟಿ), ಎಜೆ ರಾಯಲ್ಸ್ (ಮಾಲೀಕರು: ಪ್ರಶಾಂತ್ ಶೆಟ್ಟಿ), ಮೇಲಾಂಟ ಮಾವೆರಿಕ್ಸ್ (ಮಾಲೀಕರು: ಹರ್ಷ ಮೇಲಾಂಟ, ಸಹ ಮಾಲೀಕರು: ಆಶಿಶ್ ಶೆಟ್ಟಿ ಮತ್ತು ಧೀರಜ್ ಶೆಟ್ಟಿ), ಅಡ್ಯಾರ್ ರಾಯಲ್ ಕಿಂಗ್ (ಮಾಲೀಕರು: ಕಿಶನ್ ಶೆಟ್ಟಿ). ಕುಡ್ಲ ಸೂಪರ್ ಕಿಂಗ್ಸ್ (ಮಾಲೀಕರು: ಸಂಪತ್ ಶೆಟ್ಟಿ, ಧೀರಜ್ ಶೆಟ್ಟಿ), ವಿಕ್ರಂ ವಾರಿಯರ್ಸ್ (ಮಾಲೀಕರು: ಮಹೇಶ್ ವಿಕ್ರಮ್ ಹೆಗ್ಡೆ), ರಾಯಲ್ ಸುರಗಿರಿ ಬಂಟ್ಸ್ (ಮಾಲೀಕರು: ರವೀಂದ್ರನಾಥ್ ರೈ, ಸಹ ಮಾಲೀಕರು: ಸಂತೋಷ್ ಶೆಟ್ಟಿ, ಬಿಪಿನ್ ರೈ), ರಾಯಲ್ ಬಂಟ್ಸ್ ಸುರತ್ಕಲ್ (ಮಾಲೀಕರು: ಕಿರಣ್ ಕುಮಾರ್ ಶೆಟ್ಟಿ) ಹಾಗೂ ಕರಾವಳಿ ಚಾಲೆಂಜರ್ಸ್ (ಮಾಲೀಕರು: ಗಿರೀಶ್ ಶೆಟ್ಟಿ ಮತ್ತು ಶ್ರೀಶಲ್ ಆಳ್ವ).
ಈ ಪಂದ್ಯಾಟಗಳು ಹಗಲು-ರಾತ್ರಿ ನಡೆಯಲಿದ್ದು ಫೆ.7ರಂದು ಶುಕ್ರವಾರ ಬೆಳಗ್ಗೆ 8:30ಕ್ಕೆ ಪ್ರಾರಂಭವಾಗಲಿವೆ. ಕ್ರೀಡಾಕೂಟದ ಔಪಚಾರಿಕ ಉದ್ಘಾಟನೆ ಸಂಜೆ 4:30ಕ್ಕೆ ನಡೆಯಲಿದೆ. ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂಬ ಎರಡು ವಿಭಾಗಗಳಲ್ಲಿ ತಲಾ 5 ತಂಡಗಳನ್ನು ಜೋಡಿಸಲಾಗಿದ್ದು, ಕ್ರೀಡಾಕೂಟದ ವೀಕ್ಷಣೆಗೆ ಎಲ್ಲರಿಗೂ ಮುಕ್ತ ಸ್ವಾಗತವಿದೆ. ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಮಂಗಳೂರು ಮಾತ್ರವಲ್ಲ, ವಿದೇಶಗಳಿಂದಲೂ ನೂರಾರು ಮಂದಿ ಆಗಮಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದರು.
ಬಂಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟಗಳ ಆರಂಭಕ್ಕೆ ಮುನ್ನ ತಂಡಗಳ ಮಾಲೀಕರು-ಅತಿಥಿಗಳು ಹಾಗೂ ಸಂಘಟಕರ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ. ಪ್ರೇಕ್ಷಕರಾಗಿ ಬರುವವರ ಪೈಕಿ ಮಕ್ಕಳಿಗಾಗಿ ಪ್ರತ್ಯೇಕ ಆಟದ ಮೈದಾನ ಸಜ್ಜುಗೊಳಿಸಲಾಗಿದೆ.
ಇದೇ ಸಂದರ್ಭದಲ್ಲಿ ತುಳುನಾಡಿನ ವಿಶಿಷ್ಟ ಆಹಾರ ಸಂಸ್ಕೃತಿಯನ್ನು ಬಿಂಬಿಸುವ ಆಹಾರ ಮೇಳ (Food Festival) ಮತ್ತು ಜಲಕ್ರೀಡಾ ಮೇಳ (Water Sports Festival) ಕೂಡ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮಜ್ದೂರ್ ಸಭಾ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಬಂಟರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷ ರವಿರಾಜ್ ಶೆಟ್ಟಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಟ್ರಸ್ಟ್‌ನ ಕಾರ್ಯಾಧ್ಯಕ್ಷರಾದ ದೇವಿಚರಣ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ ಹಾಗೂ ಬಂಟರ ಸಂಘ ಕಾವೂರು ಇದರ ಅಧ್ಯಕ್ಷರಾದ ಆನಂದ ಶೆಟ್ಟಿ ಅವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ